ಮನೆ Latest News ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ...

ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ: ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

 

ಬೆಂಗಳೂರು: ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ ಎಂದು ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಈ ಬಾರಿಯ ಅಧಿವೇಶನದಲ್ಲಿ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರವನ್ನು ಬಯಲು ಮಾಡಿದ್ದೇವೆ. ಬಿಜೆಪಿ ಶಾಸಕರು ಒಂದು ತಂಡವಾಗಿ ಹಗರಣವನ್ನು ಜನರ ಮುಂದೆ ಇಟ್ಟಿದ್ದೇವೆ. ಎಲ್ಲಾ ದಾಖಲೆ ಕೊಟ್ಟಿದ್ದರೂ ಇನ್ನೂ ಸಾಕ್ಷಿ ಕೇಳುತ್ತಿದ್ದಾರೆ. ಅಬಕಾರಿ ಸನ್ನದುದಾರರ ಸಂಘ ಕೂಡಾ ಆರೋಪ ಮಾಡಿದೆ. ಆದರೂ ಸಿದ್ದರಾಮಯ್ಯ ಅಬಕಾರಿ ಸಚಿವರ ರಾಜೀನಾಮೆ ಪಡೆದಿಲ್ಲ. ಭ್ರಷ್ಟಾಚಾರದಲ್ಲಿ ಸಿದ್ದರಾಮಯ್ಯ ಪಾಲಿರುವ ಕಾರಣ ಸಿಎಂ ರಾಜೀನಾಮೆ ಪಡೆದಿಲ್ಲ.ಅಬಕಾರಿ ಸಚಿವರನ್ನು ವಜಾ ಮಾಡಬೇಕು ಅಂತಾ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದಿದ್ದಾರೆ.

ಜಿಬಿಎ ಚುನಾವಣೆ ಹಿನ್ನಲೆಯಲ್ಲಿ ನಾಳೆ ಪಕ್ಷದ ಉಸ್ತುವಾರಿಗಳು ಶಾಸಕರು ಮತ್ತು ಪರಾಜಿತ ಅಭ್ಯರ್ಥಿಗಳ ಜೊತೆ ಸಭೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ನಿರಂತರವಾಗಿ ತೆರಿಗೆ ಹಾಕುತ್ತಿದೆ.ಐದು ಮಹಾನಗರ ಪಾಲಿಕೆ ಗೆಲ್ಲಲು ನಾಳೆ ತಂತ್ರಗಾರಿಕೆ ಮಾಡುತ್ತೇವೆ ಎಂದ ಅವರು ನಾವು ಕಾಂಗ್ರೆಸ್ ರೀತಿ ಸರ್ಕಾರದ ಹಣದಲ್ಲಿ ಜಾಹೀರಾತು ಕೊಟ್ಟಿಲ್ಲ. ಪಕ್ಷದಿಂದ ಜಾಹೀರಾತು ಕೊಟ್ಟಿದ್ದೇವೆ. ನಾವೂ ಕೂಡಾ ಕೇಂದ್ರ ಸರ್ಕಾರದಿಂದ ಜಾಹೀರಾತು ಕೊಡಬಹುದಾಗಿತ್ತು. ಗಾಂಧೀಜಿ ಬಗ್ಗೆ ಮಾತಾಡುವ ನೈತಿಕತೆ ಕಾಂಗ್ರೆಸ್ ಕಳೆದುಕೊಂಡಿದೆ. ಸಾತಂತ್ರ್ಯ ತಂದು ಕೊಟ್ಟ ಗಾಂಧೀಜಿ ಹೆಸರಿನಲ್ಲಿ ಸರ್ಕಾರದ ಯೋಜನೆಗಳು ನಡೆಯಬೇಕಿತ್ತು. 470 ಹೆಸರುಗಳು ಕಾಂಗ್ರೆಸ್ ಮನೆತನದ ಹೆಸರಿನಲ್ಲೇ ಇವೆ. ಗಾಂಧಿ ಹೆಸರು ಇಟ್ಟುಕೊಂಡು ಬೋಪೋರ್ಸ್ ಹಗರಣ ಮಾಡಿ, ತುರ್ತು ಪರಿಸ್ಥಿತಿ ತಂದರು. ನಿಮ್ಮ ಕಾಟ ತಡೆಯಲಾರದೇ ಗಾಂಧೀಜಿ ಕೋಲು ತೆಗೆದುಕೊಂಡಿದ್ದಾರೆ. ನನ್ನ ಹೆಸರು ದುರುಪಯೋಗ ಮಾಡುತ್ತಾರೆ ಎಂದು ಕೈಗೆ ಕೋಲು ತೆಗೆದುಕೊಂಡಿದ್ದಾರೆ.ಬಿಜೆಪಿ ಕೊಟ್ಟಿರುವ ಜಾಹೀರಾತಿನಲ್ಲಿ ಏನೂ ತಪ್ಪಿಲ್ಲ ಎಂದು ಹೇಳಿದ್ದಾರೆ.

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಮತ್ತೆ ಕದನ ಶುರುವಾಗಿದೆ. ಯತೀಂದ್ರನೇ ಹೈಕಮಾಂಡ್ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಅಲ್ಲಿಗೆ ಎಲ್ಲಾ ಮುಗಿದು ಹೋಯಿತು. ದೆಹಲಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಸತ್ತೋಗಿದೆ.ಇನ್ನು ಮುಂದೆ ಪ್ರತಿ ದಿನ ಕುರ್ಚಿ ಕಾಳಗವನ್ನು ಜನ ನೋಡಬೇಕಿದೆ ಎಂದ ಅವರು ಗ್ರಾ.ಪಂ. ಚುನಾವಣೆ ಬ್ಯಾಲೆಟ್ ನಲ್ಲಿ ನಡೆಸುವ ನಿರ್ಧಾರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಒಂದು ರೀತಿ ತುಘಲಕ್ ಇದ್ದಂತೆ. ಅವನೂ ಇವರ ರೀತಿ ಎಡೆಬಿಡಂಗಿ ಇದ್ದ. ಇವಿಎಂ ತಂದಿದ್ದು ರಾಜೀವ್ ಗಾಂಧಿ. ರಾಜೀವ್ ಗಾಂಧಿ ಮೇಲಿನ ನಂಬಿಕೆಯನ್ನೇ ಕಳೆದುಕೊಂಡುಬಿಟ್ರಾ?. ಮೊದಲೇ ಕಾಂಗ್ರೆಸ್ ಗೆ ಪಾಕಿಸ್ತಾನದ ಮೇಲೆ ಪ್ರೀತಿ ಜಾಸ್ತಿ. ಈ ರೀತಿ ಆಡುತ್ತಿದ್ದರೆ ಅವರೇ ನಿಮ್ಮ ಗುರು, ದೇವರು ಆಗುತ್ತಾರೆ. ಮಾಡುವುದು ಅನಾಚಾರ, ಮನೆ ಮುಂದೆ ಬೃಂದಾವನ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಿರುವುದೇ ಅವರ ಮನೆತನ ಎಂದು ಲೇವಡಿ ಮಾಡಿದ್ದಾರೆ.

ತಿರುಪತಿ ನಕಲಿ ತುಪ್ಪದ ಬಗ್ಗೆ ಎಸ್ ಐಟಿ ವರದಿ ವಿಚಾರದ ಬಗ್ಗೆ ಮಾತನಾಡಿ ತಿರುಪತಿ ಭಾರತೀಯರ ಶ್ರದ್ಧಾ ಕೇಂದ್ರ. ವೈಎಸ್ಆರ್ ಕಾಂಗ್ರೆಸ್ ಇದನ್ನು ಹಾಳು ಮಾಡಿದೆ. ಧರ್ಮಸ್ಥಳ ಮೇಲೆ ಸ್ವತಃ ಸಿದ್ದರಾಮಯ್ಯ ಕೂಡ ಹಾಗೆ ಮಾಡಿದ್ದಾರೆ. ಅಯ್ಯಪ್ಪ ಆಯಿತು,  ಧರ್ಮಸ್ಥಳ ಆಯಿತು.ಈಗ ತಿರುಪತಿ ಭಕ್ತರ ಭಾವನೆ ಮೇಲೆ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.