ಮನೆ Latest News ಡೆನ್ಮಾಕ್ ಕನ್ಸಲೇಟ್ ಪೀಟರ್ ಭೇಟಿ ಬಗ್ಗೆ ಡಿಸಿಎಂ ಡಿಕೆಶಿ ಸುದ್ದಿಗೋಷ್ಟಿ

ಡೆನ್ಮಾಕ್ ಕನ್ಸಲೇಟ್ ಪೀಟರ್ ಭೇಟಿ ಬಗ್ಗೆ ಡಿಸಿಎಂ ಡಿಕೆಶಿ ಸುದ್ದಿಗೋಷ್ಟಿ

0

ಬೆಂಗಳೂರು: ಡೆನ್ಮಾಕ್ ಕನ್ಸಲೇಟ್ ಪೀಟರ್ ಭೇಟಿ ಬಗ್ಗೆ ಡಿಸಿಎಂ ಡಿಕೆಶಿ ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಡೆನ್ಮಾಕ್ ಕನ್ಸಲೇಟ್ ಪೀಟರ್ ಭೇಟಿ ಮಾಡಿದ್ರು. ಸೌಥ್ ಅಫ್ರಿಕಾ ಹೈಕಮಿಷನರ್ ಭೇಟಿಯಾದ್ರು. ಬೆಂಗಳೂರಿನಲ್ಲಿ ಬಂಡವಾಳ ಹೂಡಿಕೆ ಬಗ್ಗೆ ಚರ್ಚೆ ಮಾಡಿದ್ರು. ಶಿಕ್ಷಣ ,ತಂತ್ರಜ್ಞಾನ ಪ್ರವಾಸೋಧ್ಯಮ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿದ್ರು… ನಿಮ್ಮ ತಂಡಗಳು ಬರಲಿ ಸಹಕಾರ ನೀಡುವುದಾಗಿ ಹೇಳಿದ್ದೇನೆ ಎಂದರು.

ಡೆನ್ಮಾಕ್ ನವರು ದೆಹಲಿಯಲ್ಲಿ ಬಿಟ್ರೆ ಬೆಂಗಳೂರಿನಲ್ಲಿ ಆಫೀಸ್ ಹೊಂದಿದ್ದಾರೆ ಇದು ವಿಶೇಷ. BDA ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೆ. ಬಿಜಿನೆಸ್ ಕಾರಿಡಾರ್ ಸಂಬಂಧ ಸಭೆ ಮಾಡಲಾಗಿದೆ. ಕೆಲವರಿಗೆ ಟಿಡಿಆರ್, ಚೆಕ್ ಕೊಟ್ಟಿದ್ದೇನೆ, ಕೆಲವರು ಕ್ಯಾಶ್ ಪಡೆದುಕೊಂಡಿದ್ದಾರೆ. ಗೈಡೆನ್ಸ್ ವ್ಯಾಲ್ಯೂ ಮೂರು ಪಟ್ಟು ಹಾಗೂ ಎರಡು ಪಟ್ಟು ಕೊಟ್ಟಿದ್ದೇವೆ. ಕೆಲವರಿಗೆ ಟಿಡಿಆರ್ ವಿಚಾರದಲ್ಲಿ ಗೊಂದಲ ಆಗುತ್ತೆ. ಬಿಡಿಎ ವ್ಯಾಪ್ತಿಯಲ್ಲಿ ಬಂದ್ರೆ ಅಲ್ಲೇ ಟಿಡಿಆರ್ ಕೊಡಲಾಗುತ್ತೆ. ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಬಂದ್ರೆ ಕಾರ್ಪೋರೆಷನ್ ನವ್ರು ಕೊಡ್ತಾರೆ. 10 ದಿನದಲ್ಲಿ ಟಿಡಿಆರ್ ಕೊಡಬೇಕು ಎಂದು ಹೇಳಿದ್ದೇನೆ. ಒಟ್ಟು 650 ಕನ್ಸಂಟ್ ಬಂದಿದೆ, 400 ಜನಕ್ಕೆ ಇಶ್ಯೂ ಮಾಡಲಾಗಿದೆ. ಇ-ಖಾತಾ ಅರ್ಜಿ ಹಾಕಿದ್ರೆ 2 ದಿನದಲ್ಲಿ ತೀರ್ಮಾನ ಮಾಡಬೇಕು. ಸಮಸ್ಯೆ ಇತ್ತು ಅಂದ್ರೆ 100 ಜನರ ವರಿಫಿಕೇಷನ್ ಟೀಮ್ ರೆಡಿ ಮಾಡಿದ್ದೇವೆ. 60% ಇ ಖಾತಾ 24 ಗಂಟೆಯೊಳಗೆ ಆಗುವ ವ್ಯವಸ್ಥೆ ಮಾಡಿದ್ದೇವೆ. 9.31ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡಿದ್ದೇವೆ. ಸ್ಪಾಟ್ ಹೋಗಿ ಸ್ಕೆಚ್ ಮಾಡಿಕೊಡಲು ಹೇಳಿದ್ದೇವೆ. ಸ್ಕೆಚ್ ಕೊಡಲು ಸಾಧ್ಯವಾಗಿಲ್ಲದವರು ಆನ್ ಲೈನ್ ನಲ್ಲಿ ಕೊಡಲು ಮಾಡಿದ್ದೇವೆ. 18 ಸಾವಿರ ಖಾತಾ ಬದಲಾವಣೆ ಪೆಂಡಿಗ್ ಇದೆ. 15 ದಿನದಲ್ಲಿ ವಿಲೇವಾರಿ ಮಾಡಲಿದ್ದೇವೆ. ರಿಜೆಕ್ಟ್ ಆದವನ್ನು ಯಾಕೆ ಆಯ್ತು ಅಂತಾ ವರಿಫೈ ಮಾಡುತ್ತವೆ. ಪಾಸ್ ಪೋರ್ಟ್ ಆಫೀಸ್ ರೀತಿ ಜೋನ್ ಗೆ ಒಂದು ಜಿಬಿಎ ಕೆಲಸಗಳು ನಡೆಯಲಿವೆ. ಸಿಟಿಜನ್ ಫ್ರೆಂಡ್ಲಿ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದರು.

ಮೆಟ್ರೋ ದರ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ದರ ಏರಿಕೆಯ ನನಗೆ ಯಾವ ಫೈಲು ಬಂದಿಲ್ಲ. ಅವರದ್ದೇ,ಕೇಂದ್ರದ ಟೀಂನ  ಅಧಿಕಾರಿಗಳು ತೀರ್ಮಾನ ಮಾಡಿದ್ದಾರೆ. ದರ ಏರಿಕೆ ಬಗ್ಗೆ ನಮ್ಮನ್ನೇನು ಕೇಳಿಲ್ಲ. ಅವರದ್ದೇ ಒಂದು ಟೀಂ ಇದೆ.ಅವರು ಜಾಸ್ತಿ‌ ಮಾಡಿಕೊಂಡಿರಬೇಕು. ಕೇಂದ್ರ ಸರ್ಕಾರದ ಚೇರ್ಮನ್ ಇದ್ದಾರೆ . ಅವರು ನಿರ್ಧಾರ ತೆಗೆದುಕೊಂಡಿದ್ದಾರೆ. ನನ್ನನ್ನು ಅವರು ಕೇಳಿಲ್ಲ. ಕೇಳಿದ್ರೆ ನಾನು ಸಿಎಂ ಬಳಿ ಮಾತನಾಡುತ್ತಿದ್ದೆ. ನಾನು ಕ್ಯಾಬಿನೆಟ್ ನಲ್ಲೂ ಮಾತನಾಡಿಲ್ಲ. ನನಗೆ ಗೊತ್ತಿಲ್ಲ ಅವರೇ ಜಾಸ್ತಿ‌‌ ಮಾಡಿದ್ದಾರೆ. ಬಿಎಂಆರ್ ಸಿ ಅವರನ್ನ ಕರೆಸಿ‌ ಮಾತನಾಡುತ್ತೀರಾ.? ಎಂಬ ಪ್ರಶ್ನೆ ಮಾತನಾಡುತ್ತೇನೆ ಎಂದರು.

ಶಿವಗಂಗಾ ಬಸವರಾಜ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು  ಇವತ್ತು ರಾಜಕೀಯ ಬೇಡ ಮಾತನಾಡೋಣ ಎಂದ ಅವರು  ದೆಹಲಿಗೆ ಹೋಗ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿ ನಾನು ನಾಳೆ ಮಂಗಳೂರಿಗೆ ಹೋಗ್ತೀನಿ. ನಾಡಿದ್ದು ರಾಯಚೂರಿಗೆ ಹೋಗ್ತೀನಿ. ದೆಹಲಿಗೆ ಹೋಗೋದಿದ್ರೆ ನಿಮಗೆ ಹೇಳಿಯೇ ಹೋಗ್ತೀನಿ ಎಂದು ಹೇಳಿದರು.