ಮನೆ Latest News ಬಿ.ಕೆ. ಹರಿಪ್ರಸಾದ್ ನನ್ನ ಚಾರಿತ್ರ್ಯ ಪ್ರಶ್ನೆ ಮಾಡುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ: ವಿಧಾನಸೌಧದಲ್ಲಿ...

ಬಿ.ಕೆ. ಹರಿಪ್ರಸಾದ್ ನನ್ನ ಚಾರಿತ್ರ್ಯ ಪ್ರಶ್ನೆ ಮಾಡುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ: ವಿಧಾನಸೌಧದಲ್ಲಿ ರಾಜಾಜಿನಗರ ಶಾಸಕರ ಸುರೇಶ್ ಕುಮಾರ್ ಹೇಳಿಕೆ

0

 

ಬೆಂಗಳೂರು; ಬಿ.ಕೆ. ಹರಿಪ್ರಸಾದ್ ನನ್ನ ಚಾರಿತ್ರ್ಯ ಪ್ರಶ್ನೆ ಮಾಡುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಎಂದು ವಿಧಾನಸೌಧದಲ್ಲಿ ರಾಜಾಜಿನಗರ ಶಾಸಕರ ಸುರೇಶ್ ಕುಮಾರ್ ಅಸಮಾಧಾನ ಹೊರ ಹಾಕಿದ್ದಾರೆ.

ಜ್ಯೋತಿಷಿ‌ ಕಮಲಾಕರ ಭಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಸುರೇಶ್ ಕುಮಾರ್ ಕುರಿತು ಬಿ ಕೆ ಹರಿಪ್ರಸಾದ್ ಹಾಕಿದ ಪೋಸ್ಟ್ ಗೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿದ ಅವರು  ಬಿ.ಕೆ. ಹರಿಪ್ರಸಾದ್ ನನ್ನ ಚಾರಿತ್ರ್ಯ ಪ್ರಶ್ನೆ ಮಾಡುವ ರೀತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಾನು ಅವರು ಒಂದೇ ಕಾಲೇಜಿನಲ್ಲಿ ಓದಿದವರು. ಕಮಲಾಕರ್ ಭಟ್ ಅವರ ಪ್ರಕರಣದಲ್ಲಿ ನನ್ನ ಹೆಸರು ತಳುಕು‌ ಹಾಕಿದ್ದಾರೆ.ಅಂದು ಯಶವಂತಪುರದ ಪೆಟ್ರೋಲ್ ಬಂಕ್ ನಲ್ಲಿ ಭಟ್ ಅವರೇ ಕರೆದು ಮಾತಾಡಿಸಿದ್ದರು. ಅದನ್ನು ನಾನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದೆ. ಹರಿಪ್ರಸಾದ್ ಅವರೇ ಇನ್ನು ಯಾರಿಗೂ ನೈತಿಕ ಪಾಠ ಹೇಳಬೇಡಿ. ಅನುಭವ ಆಗುತ್ತಾ ಮನಸ್ಸು ಪಕ್ವ ಆಗಬೇಕು, ಕೊಳೆತು ಹೋಗಬಾರದು. ನಿಮಗೆ ಇದು ಯೋಗ್ಯ, ಆರೋಗ್ಯಕರ ಮನಸ್ಥಿತಿ ಅಲ್ಲ. ಯಾರಾದರೂ ಸೈಕ್ರಿಯಾಟಿಸ್ಟ್ ಅವರ ಅಗತ್ಯತೆ ನಿಮಗೆ ಇದೆ.ಪೂರ್ತಿ ಇದು ಅನೈತಿಕ ಮನಸ್ಥಿತಿಯ ಪರಾಕಾಷ್ಠೆ ಎಂದು ಹೇಳಿದ್ದಾರೆ.

ಯಾವುದಾದರೊಂದು ಕಾರಣಕ್ಕೆ ಸುದ್ದಿಯಲ್ಲಿರಲು ಬಯಸುವ ಬಿ.ಕೆ. ಹರಿಪ್ರಸಾದ್ ಇಂದು ನನ್ನ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಕಾಲೇಜಿನಲ್ಲಿ ಇದ್ದಾಗ ಹರಿಪ್ರಸಾದ್ ಗೆ ಬಂದ ಖ್ಯಾತಿ ನನಗೆ ಯಾವತ್ತೂ ಬಂದಿಲ್ಲ. ಕೊಲೆ ಆರೋಪಿಗೆ ನನ್ನ ಹೆಸರನ್ನು ತಳುಕು ಹಾಕಿ ಟ್ವೀಟ್ ಮಾಡಿದ್ದಾರೆ. ಕೊಲೆಯಲ್ಲಿ ನಾನೂ ಪಾತ್ರಧಾರಿ ಎಂಬ ರೀತಿ ಹರಿಪ್ರಸಾದ್ ಮಾತಾಡಿರುವುದಕ್ಕೆ ಅವರ ಬಗ್ಗೆ ಕನಿಕರ ಬರುತ್ತದೆ. ರಾಜಕಾರಣದಲ್ಲಿ ಅನುಭವ ಆಗುತ್ತಾ ಮನಸ್ಸು ಪಕ್ವ ಆಗಬೇಕು. ಇದು ಕೊಳೆತ ಮನಸ್ಥಿತಿಯ ಪ್ರತೀಕ. ನಿಮಗಿಂತ ಸಂವಿಧಾನ ನನಗೆ ಹೆಚ್ಚು ಗೊತ್ತಿದೆ. ಯಾಕೆಂದರೆ ನಾನು ಕಾನೂನು ಕಾಲೇಜಿಗೆ ಹೋಗಿ ಲಾ ಪಾಸ್ ಮಾಡಿರುವವನು. ಇಡೀ ಸಂಘ ಪರಿವಾರ, ಬಿಜೆಪಿಯನ್ನು ಕೊಲೆಗೆ ನಂಟು ಮಾಡುವ ನಿಮ್ಮ ಪರಿಸ್ಥಿತಿ ಬಗ್ಗೆ ನನಗೆ ಕನಿಕರ ಬರುತ್ತದೆ. ಭಗವಂತ ನಿಮಗೆ ಸದ್ಬುದ್ಧಿ ದಯಪಾಲಿಸಲಿ. ಸುರೇಶ್ ಕುಮಾರ್ ಏನು ಅಂತಾ, ಹರಿಪ್ರಸಾದ್ ಏನು ಅಂತಾ ಮಲ್ಲೇಶ್ವರಂ ಮತ್ತು ಕರ್ನಾಟಕದ ಜನತೆಗೆ ಗೊತ್ತಿದೆ. ನಿಮಗೆ ತಕ್ಷಣ ಮನಶಾಸ್ತ್ರಜ್ಞರ ನೆರವಿನ ಅಗತ್ಯ ಇದೆ. ನನ್ನ, ವಿಜಯೇಂದ್ರ‌ ಹಾಗೂ ಇನ್ನೂ ಕೆಲವರ ಫೋಟೋ ಹಾಕಿದ್ದಾರೆ. ಅಂದು ನಾನು ಕಮಲಾಕರ್ ಭಟ್ ಭೇಟಿ ಆಗಿದ್ದು ಗರಿಷ್ಠ ಒಂದು ನಿಮಿಷ. ಈಗ ಎದುರಿಗೆ ಬಂದರೆ ಗುರುತು ಹಿಡಿಯುತ್ತೇನೋ ಗೊತ್ತಿಲ್ಲ.ಯಾವ ಹೇಯ ಮನಸ್ಥಿತಿ ಇವರದ್ದು. ಇದು ಅವರ ಹತಾಶ ಮನಸ್ಥಿತಿ. ಕಮಲಾಕರ್ ಭಟ್ ಯಾರೂ, ಅವರು ಊರು ಏನು ಅಂತಾನೇ ಗೊತ್ತಿಲ್ಲ.  ಪ್ರಕರಣದಲ್ಲಿ ಹರಿಪ್ರಸಾದ್ ಅವರನ್ನೇ ಒಂದು ಸಾಕ್ಷಿಯಾಗಿ ಕರೆಯಬೇಕು ಅನ್ನಿಸುತ್ತಿದೆ ಎಂದು ಅವರ ಆಕ್ರೋಶ ಹೊರ ಹಾಕಿದ್ದಾರೆ.