ಬೆಂಗಳೂರು; ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ನಿಖಾ ವರದಿ ಬರುವವರೆಗೆ ಏನೂ ಹೇಳೋಕೆ ಆಗಲ್ಲ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ಕಾನ್ಫಿಡೆಂಟ್ ಗ್ರೂಪ್ ನ ಸಿ.ಜೆ.ರಾಯ್ ಆತ್ಮಹತ್ಯೆ ಪ್ರಕರಣದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ತನಿಖೆಗೆ ಈಗಾಗಲೇ ಎಸ್ಐಟಿ ರಚೆನೆ ಮಾಡಿದ್ದೇವೆ. ಜಾಯಿಂಟ್ ಕಮೀಷನರ್ ವಂಶಿ ಕೃಷ್ಣ ಅವರ ನೇತೃತ್ವದಲ್ಲಿ ಎಸ್ ಐಟಿ ರಚನೆ ಆಗಿದೆ. ನಿನ್ನೆಯಿಂದಲೇ ತನಿಖೆ ಆರಂಭವಾಗಿದೆ. ತನಿಖಾ ವರದಿ ಬರುವವರೆಗೆ ಏನೂ ಹೇಳೋಕೆ ಆಗಲ್ಲ.ನೋಡೋಣ ತನಿಖಾ ವರದಿ ಏನು ಬರುತ್ತೆ ಅಂತಾ ಎಂದ ಅವರು ಕೇಂದ್ರ ಸರ್ಕಾರ ತನಿಖೆ ಸಂಸ್ಥೆಗಳ ದುರ್ಬಳಕೆ ವಿಚಾರದ ಬಗ್ಗೆ ಮಾತನಾಡಿ ಕೇರಳ ಚುನಾವಣಾ ವಿಚಾರ ಯಾವುದು ಈಗ ಹೇಳೋಕೆ ಆಗಲ್ಲ. ನೋಡೋಣ ತನಿಖೆ ಆಗಲಿ ಆಗ ಗೊತ್ತಾಗುತ್ತದೆ ಎಂದಿದ್ದಾರೆ.
ಕೇಂದ್ರದ ಬಜೆಟ್ ಬಗ್ಗೆ ಸಾಕಷ್ಟು ನಿರೀಕ್ಷೆ ಮಾಡಿದ್ದೇವೆ. ನಮಗೆ ನಮ್ಮ ಪಾಲಿನ ಜಿಎಸ್ ಟಿ ಹಣ ಕೊಡುವುದು.ಮತ್ತೆ ನಮಗೆ ಕೇಂದ್ರದಿಂದ ವಿಶೇಷ ಅನುದಾನ ಭದ್ರ ಮೇಲ್ದಂಡೆಗೆ ಕೊಟ್ಟಿದ್ದರು, ಅದು ಆಗಬೇಕು. ಮತ್ತೆ ನಮಗೆ ಬರುವ ಪಾಲು ಜೆಜೆಎಂ ಕೇಂದ್ರ ಸರ್ಕಾರದ ಅನೇಕ ಯೋಜನೆಗಳು ೬೦/೪೦, ೫೦/೫೦ ಈ ರೀತಿ. ಇದಕ್ಕೂ ಕೂಡ ನಮಗೆ ಹಣ ಬಿಡುಗಡೆ ಆಗಿಲ್ಲ.ಅವೆಲ್ಲಾ ನಮಗೆ ಬರಬಹುದು ಎಂಬ ನಿರೀಕ್ಷೆ ಇದೆ. ಕೃಷಿ ಕ್ಷೇತ್ರ ಆಗಬಹುದು ಕೈಗಾರಿಕಾ ಕ್ಷೇತ್ರಕ್ಕೆ ಆಗಬಹುದು. ಕರ್ನಾಟಕಕ್ಕೆ ಒಂದು ಕೊಡುಗೆ ಕೇಂದ್ರ ಸರ್ಕಾರ ಕೊಡಬೇಕಲ್ಲ. ಅವರದು ಸರ್ಕಾರ ಇದೆ ಅನ್ನೋದು ಮುಖ್ಯ ಅಲ್ಲ .ದೇಶದ ಅಭಿವೃದ್ಧಿ ದೃಷ್ಟಿಯಿಂದ ಕರ್ನಾಟಕ ನಾವೇನು ಅತಿ ಹೆಚ್ಚು ಎರಡನೇ ಅತಿ ಹೆಚ್ಚು ಜಿಎಸ್ ಟಿ ಕಟ್ಟುತ್ತಿದ್ದೇವೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ ನಮಗೆ ಸಹಕಾರ ಕೊಡಬೇಕು. ಅದನ್ನ ನಿರೀಕ್ಷೆ ಮಾಡುತ್ತಿದ್ದೇವೆ, ಏನು ಕೊಡ್ತಾರೆ ಗೊತ್ತಿಲ್ಲ ಎಂದಿದ್ದಾರೆ.











