ಕಲಬುರಗಿ: ಬಜೆಟ್ ನಲ್ಲಿ ಕರ್ನಾಟಕ್ಕೆ ಏನೇನು ಕೊಟ್ಟಿಲ್ಲ, ಕರ್ನಾಟಕ್ಕೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ ಎಂದು ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜಸ್ವ ಕೊರತೆ 5.82 ಲಕ್ಷ ಕೋಟಿಯಿದೆ ಅಂದ್ರೆ ಬಜೆಟ್ ಗಾತ್ರದ ಒಂದೂವರೆ ಲಕ್ಷ ಕೋಟಿಯಷ್ಟಿದೆ. ಕಳೆದ ವರ್ಷಕ್ಕಿಂದ 70 ಸಾವಿರ ಕೋಟಿಯಷ್ಟಿದೆ. ಬಜೆಟ್ ನಲ್ಲಿ ಕರ್ನಾಟಕ್ಕೆ ಏನೇನು ಕೊಟ್ಟಿಲ್ಲ.ಕರ್ನಾಟಕ್ಕೆ ಕೇಂದ್ರ ಸರ್ಕಾರ ಚೊಂಬು ಕೊಟ್ಟಿದೆ. ಕೈ ಸನ್ನೆ ಮೂಲಕ ಚೊಂಬು ಕೊಟ್ಟಿದೆ ಎಂದು ಸಿಎಂ ಹೇಳಿದ್ದಾರೆ.
ಐದು ವರ್ಷದಲ್ಲಿ ಎರಡೇ ರೈಲು ಕೊಟ್ಟಿದ್ದು. ವಿಕಸಿತ ಭಾರತದ ಬಗ್ಗೆ ಬಹಳ ಮಾತನಾಡಿದ್ರು. ಅದು ಬರೀ ಮಾತಿನಲ್ಲಿದೆ. ಕೃತಿಯಾಗಿ ಅವರು ಮಾಡ್ತಿಲ್ಲ. ನೀರಾವರಿ ಯೋಜನೆ ಬಗ್ಹೆ ನಾವು ಬಹಳ ಕೇಳಿದ್ದೇವೆ. ಭದ್ರಾ ಮೇಲ್ದಂಡೆ ಯೋಜನೆಯನ್ನ ರಾಷ್ಟ್ರೀಯ ಮಾಡಿ ಎಂದಿದ್ದೆವು. ಆದ್ರೆ ಮಾಡಿಲ್ಲ. ಕಳೆದ ಮೂರು ವರ್ಷಗಳ ಹಿಂದೆ 5 ಸಾವಿರ ಕೋಟಿ ಘೋಷಣೆ ಮಾಡಿದ್ದರು. ಇಲ್ಲಿಯವರೆಗೆ ಒಂದು ರೂಪಾಯಿ ಕೊಟ್ಟಿಲ್ಲ.ಮೇಕೆದಾಟು ಯೋಜನೆಗೆ ತಮಿಳನಾಡು ಆರ್ಜಿಯನ್ನ ಸುಪ್ರೀಂಕೋಟ್೯ ವಜಾಗೊಳಿಸಿದೆ. ಆದ್ರೂ ಅದರ ಬಗ್ಗೆ ಚಕಾರ ಎತ್ತಿಲ್ಲ.177.25 tmc ನೀರು ಕೊಡಬೇಕು ಅಂತ ಸುಪ್ರೀಂ ಹೇಳಿದೆ.ಮಳೆಗಾಲ ಸರಿಯಾಗಿದ್ರೆ ಕೊಡಬೇಕು ಎಂದಿದೆ. ಈ ವರ್ಷ ಅದರ ಎರಡರಷ್ಟೂ ನೀರನ್ನ ಬಿಡುಗಡೆ ಮಾಡಿದ್ದೇವೆ. ಮಹಾದಾಯಿ ಯೋಜನೆಗೆ ಎನ್ವಿರಾನ್ಮೆಂಟ್ ಕ್ಲಿಯರೇನ್ಸ್ ಕೊಟ್ಟಿಲ್ಲ ಎಂದು ಗರಂ ಆಗಿದ್ದಾರೆ.
ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡ್ತೆನೆ ಎಂದು ಹೇಳಿದ್ದರು. 2018 ರಲ್ಲಿ ಅಧಿಕಾರಕ್ಕೆ ಬಂದ್ರೆ ಮಾಡ್ತೇವೆ ಎಂದಿದ್ದರು.ಆದ್ರೆ ಅದರ ಬಗ್ಗೆಯೂ ಬಜೆಟ್ ನಲ್ಲಿ ಏನು ಉಲ್ಲೇಖವಿಲ್ಲ. ಕೃಷ್ಣಾ ಮೇಲ್ದಂಡೆ ಯೋಜನೆಯ ಬಗ್ಗೆಯೂ ಗೆಜೆಟ್ ನೋಟಿಫಿಕೇಷನ್ ಮಾಡಿಲ್ಲ.ಇದ್ರಿಂದ ಉತ್ತರ ಕರ್ನಾಟಕದ ಜನತೆಗೆ ಅನ್ಯಾಯ ಆಗಿದೆ. ೧೪ ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ 4.71 ಪ್ರತಿಶತ.೧೫ ನೇ ಹಣಕಾಸು ಆಯೋಗದಲ್ಲಿ 3.64 ಕಡಿಮೆ ಬಂತು. ಇವಾಗ 4.131 ಪ್ರತಿಶತ ನೀಡಿದ್ದಾರೆ. 14ನೇ ಹಣಕಾಸು ಆಯೋಗ ಶಿಫಾರಸ್ಸಿನಿಂತೆ ಆದ್ರೂ ನೀಡಿ ಎಂದ್ದಿದ್ದವು. ಆದ್ರೆ ಕೇಂದ್ರ ಸರ್ಕಾರ ನೀಡಿಲ್ಲ.ಇದು ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯ ಎಂದು ಅವರು ತಿಳಿಸಿದ್ದಾರೆ.
ಸ್ಥಳೀಯ ಸಂಸ್ಥೆಗಳಿಗೆ ಉತ್ತರ ಪ್ರದೇಶಕ್ಕೆ 80 ಸಾವಿರ ಕೋಟಿ ನೀಡಿದ್ದಾರೆ.ರಾಜ್ಯಕ್ಕೆ 18 ಸಾವಿರ ಕೋಟಿ ನೀಡಿದ್ದಾರೆ.ಬಿಹಾರಗೆ ಅತೀ ಹೆಚ್ಚು ನೀಡಿದ್ದಾರೆ ಅಂದ್ರೆ 9.89 ಪ್ರತಿಶತ ನೀಡಿದ್ದಾರೆ.ಉತ್ತರ ಭಾರತ ರಾಜ್ಯದವರಿಗೆ ನೀಡಬೇಡಿ ಎಂದಿಲ್ಲ.ಅದರ ಜೊತೆಗೆ ನಮಗೂ ನೀಡಿ ಎಂದಿದ್ದೇವೆ. ನಾವು ತಲಾ ಆದಾಯದಲ್ಲಿ ದೇಶಕ್ಕೆ ನಂಬರ್ ಒನ್.ಜಿಎಸ್ ಟಿ ಸಂಗ್ರಹದದಲ್ಲೂ ಪ್ರಥಮ ಇದ್ದೇವೆ.ಆದ್ರೂ ನಮಗೆ ಅನ್ಯಾಯ ಆಗ್ತಿದೆ ಎಂದು ಸಿದ್ದರಾಮಯ್ಯ ಬೇಸರ ಹೊರ ಹಾಕಿದ್ದಾರೆ.
ಮೆಟ್ರೋ ಯೋಜನೆಗೆ ಹಣ ನೀಡಿಲ್ಲ. ರಾಜ್ಯಕ್ಕೆ ಈ ಭಾರಿಯೂ ಏಮ್ಸ್ ಘೋಷಣೆ ಮಾಡಿಲ್ಲ. ಕೆಕೆಆರ್ ಡಿಬಿಗೆ ಮ್ಯಾಚಿಂಗ್ ಗ್ರ್ಯಾಂಟ್ ಕೇಳಿದ್ದೆವು.ಪ್ರತಿವರ್ಷ ನಾವು ಕೆಕೆಆರ್ ಡಿಬಿಗೆ 5 ಸಾವಿರ ಕೋಟಿ ನೀಡ್ತೇವೆ.ಅದರಷ್ಟು ಕೇಂದ್ರವೂ ನೀಡಬೇಕು ಎಂದಿದ್ದೆವು.ಆದ್ರೆ ಯಾವುದೇ ಒಂದು ರೂಪಾಯಿ ನೀಡಿಲ್ಲ.ನಾವು ಪ್ರತಿ ವರ್ಷ 4 ರಿಂದ 5 ಲಕ್ಷ ಕೋಟಿ ತೆರಿಗೆ ಕೊಡುತ್ತೇವೆ. ನಮಗೆ ನೂರು ಕೊಟ್ರೆ 14 ಪೈಸೆ ನೀಡುತ್ತಿದ್ದಾರೆ.ಸೆಸ್ ಸರ್ ಚಾಜ್೯ ರಾಜ್ಯಗಳಿಗೆ ಡಿವೈಡ್ ಮಾಡ್ತಿಲ್ಲ. ತೆರಿಗೆ ಹಂಚಿಕೆಯಲ್ಲಿ ಹಾಕಿ ಎಂದಿದ್ದವು ಅದು ಹಾಕಿಲ್ಲ.ದೊಡ್ಡ ಅನ್ಯಾಯ ಮಾಡಿದಂತ ಬಜೆಟ್ ಮತ್ತು ಚೊಂಬು ಕೊಡೋ ಬಜೆಟ್ ಎಂದಿದ್ದಾರೆ.ಕೇಂದ್ರ ಒಂದೇ ಒಂದು ಯೋಜನೆ ನೀಡಿಲ್ಲ. ನಾವು ಕೇಳಿದ್ದನ್ನ ಅವರು ಕೊಡ್ತಿಲ್ಲ.ಕೇಂದ್ರ ಎಲ್ಲಾ ಯೋಜನೆಗಳಿಗೂ ನಾವು ಅರ್ಧದಷ್ಟು ಹಣ ಕೊಡುತ್ತಿದ್ದೇವೆ. ಕಳೆದ ಎರಡು ವರ್ಷದಿಂದ ಆ ಹಣವೂ ನೀಡಿಲ್ಲ. ಮೊನ್ನೆಯಷ್ಟೆ ಪ್ರಿಯಾಂಕ್ ಖರ್ಗೆ ಕೇಂದ್ರ ಸಚಿವರನ್ನ ಭೇಟಿ ಮಾಡಿದ್ದಾರೆ.ಜೆಜೆಎಂ ಭಾಕಿ ಹಣ ನೀಡಿ ಎಂದಿದ್ದಾರೆ. ಆದ್ರೆ ಇಲ್ಲಿಯವರೆಗೂ ಬಾಕಿ ಹಣ ನೀಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.











