ಮನೆ Latest News ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ:ತನಿಖೆಗೆ ಎಸ್‌ಐಟಿ ರಚಿಸಿದ್ದೇವೆ ಎಂದ ಗೃಹ ಸಚಿವ ಪರಮೇಶ್ವರ್

ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣ:ತನಿಖೆಗೆ ಎಸ್‌ಐಟಿ ರಚಿಸಿದ್ದೇವೆ ಎಂದ ಗೃಹ ಸಚಿವ ಪರಮೇಶ್ವರ್

0

ಬೆಂಗಳೂರು; ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ರಚಿಸಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಸಿಜೆ ರಾಯ್ ಸೂಸೈಡ್ ಪ್ರಕರಣ ಎಸ್‌ಐಟಿ ತನಿಖೆಗೆ ವಹಿಸಿದ್ದೇವೆ. ತತಕ್ಷಣ ನಾವು ಎಸ್ಐಟಿ ಮಾಡಿದ್ದೇವೆ. ಜಂಟಿ ಆಯುಕ್ತರ ನೇತೃತ್ವದಲ್ಲಿ ಎಸ್ಐಟಿ ರಚಿಸಿದ್ದೇವೆ. ತಕ್ಷಣ ಈ ಪ್ರಕರಣದ ಹಿಂದೆ ಮತ್ತು ಮುಂದೆ, ಯಾಕಾಯ್ತು ಏನಾಯ್ತು ಇದಕ್ಕೆ ಹಿನ್ನೆಲೆ ಏನಿದೆ.‌ಯಾವ ಕಾರಣಕ್ಕಾಗಿ ಆಗಿದೆ?. ಅವರಿಗೆ ಯಾವ ರೀತಿ ಬೇರೆ ಬೇರೆ ಕಾರಣಗಳು ಇತ್ತಾ ಇಲ್ವಾ?.ಇದೆಲ್ಲಾ ಜಂಟಿ ಆಯುಕ್ತರ ನೇತೃತ್ವದಲ್ಲಿ ಎಸ್ಐಟಿ ಪರಿಶೀಲನೆ ಮಾಡಲಿದೆ. ಜಂಟಿ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ಎಸ್‌ಐಟಿ ಮಾಡಿದ್ದೇವೆ.ಬೆಂಗಳೂರು ಸೌತ್ ಡಿಸಿಪಿ ಲೋಕೇಶ್ ಹಾಗೂ ಎಸಿಪಿಗಳ ನೇತೃತ್ವದಲ್ಲಿ ಎಸ್‌ಐಟಿ ಮಾಡಿದ್ದೇವೆ ಎಂದಿದ್ದಾರೆ.

ಐಟಿ ಅಧಿಕಾರಿಗಳನ್ನು ತನಿಖೆಗೆ ಒಳಪಡಿಸುವ ವಿಚಾರದ ಬಗ್ಗೆ ಮಾತನಾಡಿದ ಅವರು ನಾವು ಅದನ್ನ ಹೇಳೋಕೆ ಹೋಗಲ್ಲ. ಅಗತ್ಯವಿದ್ದರೆ ಅಥವಾ ಅಲ್ಲಿ ಯಾವ ಅಂಶಗಳು ಕಂಡು ಬರುತ್ತೋ ಆಗ ಎಸ್‌ಐಟಿ ತೀರ್ಮಾನ ಮಾಡುತ್ತೆ.ಯಾರನ್ನ ತನಿಖೆ ಮಾಡಬೇಕು ಬಿಡಬೇಕು ಅನ್ನೋದನ್ನ ಎಸ್ಐಟಿ ತೀರ್ಮಾನ ಮಾಡುತ್ತೆ. ಅದನ್ನ ಅವರ ವಿವೇಚನೆಗೆ ಬಿಟ್ಟಿದ್ದೇವೆ ಎಂದಿದ್ದಾರೆ.

ಜೈಲಿನಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಆಗ್ತಿದೆ ಅಂತ ರಿಪೋರ್ಟ್ ಆಗ್ತಿತ್ತು. ಬೆಂಗಳೂರಿನ ಪರಪ್ಪನ‌ ಅಗ್ರಹಾರದಲ್ಲಿ ಅನೇಕ ಘಟನೆಗಳು ನಡೆದಿದೆ.ಅದರ ವಿಡಿಯೋಗಳು ಕೂಡ ಬಂದಿತ್ತು.ಬರ್ತ್ ಡೇ ಮಾಡ್ತಾರೆ ಡಾನ್ಸ್ ಮಾಡ್ತಾರೆ ಎಲ್ಲವೂ ವಿಡಿಯೋ ಹರಿದಾಡಿತ್ತು .ನಮ್ಮ ಇಲಾಖೆಗೆ ಇದು ಒಂದು ರೀತಿ ಸವಾಲಾಗಿತ್ತು.ನಾವು ಈ ಸಂದರ್ಭದಲ್ಲಿ ಒಂದು ಸಮಿತಿ ಮಾಡಿ ವರದಿ ಪಡೆದಿದ್ವಿ.ತಡೆಗಟ್ಟೋಕೆ ಯಾವ ಕ್ರಮ ತೆಗೆದುಕೊಳ್ಳಬಹುದು ಅನ್ನೋದರ ಬಗ್ಗೆ ವರದಿ ಕೊಟ್ಟಿದ್ರು.ನಾನು ಇಲ್ಲಿ ಸಭೆ ತೆಗೆದುಕೊಂಡಿದ್ದೆ ಆಗ ಒಂದು ಕಮಾಂಡ್ ಸೆಂಟರ್ ಮಾಡುವ ತೀರ್ಮಾನ ಮಾಡಿದ್ವಿ.ರಾಜ್ಯದ ಪ್ರತಿಯೊಂದು ಜೈಲನ್ನು ನೋಡಬೇಕು ಅಂತ ತೀರ್ಮಾನ ಮಾಡಿದ್ವಿ.ಯಾವಾಗ ಸಮಿತಿ ವರದಿ ಬಂತು ಅದರಲ್ಲೂ ಕೂಡ ಇದರ ಬಗ್ಗೆ ಹೇಳಿದ್ರು .  ಆಧಾರದ ಮೇಲೆ ಈಗ ಸೆಂಟ್ರಲ್ ಕಮಾಂಡ್ ಸೆಂಟರ್ ಮಾಡಿದ್ದೇವೆ.ಎಲ್ಲಾ ಜಿಲ್ಲಾ ಹೆಡ್ ಕ್ವಾಟ್ರಸ್ ಜೈಲನ್ನ ಕನೆಕ್ಟ್ ಮಾಡಿದ್ದೇವೆ ಎಂದು ಹೇಳಿದ್ದಾರೆ.

8 ಪ್ರಮುಖ ಜೈಲ್‌ಗಳು ನಾಲ್ಕು ಜಿಲ್ಲಾ ಜೈಲುಗಳು ಎಲ್ಲವನ್ನು ಕನೆಕ್ಟ್ ಮಾಡಿದ್ದೇವೆ.ಮುಂದಿನ ದಿನಗಳಲ್ಲಿ ತಾಲೂಕು ಜೈಲುಗಳಿಗೂ ಕೂಡ ಕನೆಕ್ಟ್ ಮಾಡುತ್ತೇವೆ.ಪ್ರತಿಯೊಂದು ಸಂದರ್ಭದಲ್ಲೂ ಕೂಡ 24/7 ಮಾನಿಟರ್ ಮಾಡುತ್ತೇವೆ.ಅಲ್ಲಿ ಅಹಿತಕರ ಘಟನೆ ನಡೆದರೆ ಗೊತ್ತಾಗತ್ತೆ.ವಿಸಿಟರ್ಸ್ ಬರುವಾಗ ಏನೇನು ತೆಗೆದುಕೊಂಡು ಬರ್ತಾರೆ.ಊಟ ಸಪ್ಲೈ ಮಾಡುವಾಗ ಏನೇನ್ ಮಾಡ್ತಾರೆ ಎಲ್ಲವನ್ನೂ ನೋಡುತ್ತೇವೆ.1076 ಕ್ಯಾಮರಾಗಳನ್ನು ಕಮಾಂಡ್ ಸೆಂಟರ್ ಗೆ ಕನೆಕ್ಟ್ ಮಾಡಿದ್ದೇವೆ.ಕಾನೂನು ಬಾಹಿರ ಚಟುವಟಿಕೆ ನಿಯಂತ್ರಣಕ್ಕೆ ಇದು ಸಹಾಯ ಆಗುತ್ತೆ.ಇದು ಒಂದು ಸುಧಾರಣೆ ಕ್ರಮ.100% ನಿಲ್ಲುತ್ತೆ ಅಂತ ಹೇಳಲ್ಲ ಅದಕ್ಕೆ ಇನ್ನೂ ಸಾಕಷ್ಟು ತಂತ್ರಜ್ಞಾನಗಳನ್ನು ಉಪಯೋಗಿಸಬೇಕು ಮಾಡುತ್ತೇವೆ.ಕಾರಾಗೃಹದ ಕೈದಿಗಳು ರಂಗೋಲಿ ಕೇಳಗೆ ನುಗ್ಗಿದರೆ ನಾವು ಭೂಮಿಯೊಳಗೆ ನುಗ್ಗಬೇಕಾಗುತ್ತೆ.ಅವರು ರಂಗೋಲಿ ಕೇಳಕ್ಕೆ ನುಗ್ತಾರೆ ಅಂದ್ರೆಅದರ ಕೆಳಗೆ ಭೂಮಿ ಇದೆಯಲ್ಲ ನಾವು ಭೂಮಿಯೊಳಗೆ ನುಗ್ಗಿ ಹಿಡಿದು ಹಾಕಬೇಕು ಅಂದಿದ್ದಾರೆ

ಇದನ್ನ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದೇವೆ. ಸಿಬ್ಬಂದಿ ಸರಿಯಾಗಿ ಜೈಲಿನಲ್ಲಿ ಪರಿಶೀಲನೆ ಮಾಡದೆ ಇದ್ದಾಗ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ.ಯಾರು ಅಧಿಕಾರಿ ತಪ್ಪು ಮಾಡಿದ್ದಾರೆ ಅಂತ ಗೊತ್ತಾಗುತ್ತೆ.ಕ್ಯಾಮೆರಾದಲ್ಲಿ ಅವರು ಕ್ಯಾಪ್ಚರ್ ಆಗ್ತಾರೆ.ಸಿಬ್ಬಂದಿಗಳು ಎಚ್ಚರಿಕೆಯಿಂದ ಕೆಲಸ ಮಾಡುತ್ತಾರೆ. ತಪ್ಪು ಮಾಡಿದ್ರೆ ಸಿಕ್ಕಿ ಹಾಕಿಕೊಳ್ಳುತ್ತೇನೆ ಅನ್ನೋ ಭಯವೂ ಇರುತ್ತೆ ಎಂದಿದ್ದಾರೆ,