ಮನೆ Latest News ಬಿಜೆಪಿಗರ ಬಗ್ಗೆ ಮಾತಾಡಲು ಸಾಕಷ್ಟು ವಿಚಾರಗಳಿವೆ, ಹಾಗಾಗಿ ಅವರ ಪೋಸ್ಟರ್ ಬಿಡುಗಡೆಯ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ;...

ಬಿಜೆಪಿಗರ ಬಗ್ಗೆ ಮಾತಾಡಲು ಸಾಕಷ್ಟು ವಿಚಾರಗಳಿವೆ, ಹಾಗಾಗಿ ಅವರ ಪೋಸ್ಟರ್ ಬಿಡುಗಡೆಯ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ; ಶಿವಮೊಗ್ಗದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ

0

ಶಿವಮೊಗ್ಗ; ಬಿಜೆಪಿಗರ ಬಗ್ಗೆ ಮಾತಾಡಲು ಸಾಕಷ್ಟು ವಿಚಾರಗಳಿವೆ, ಹಾಗಾಗಿ ಅವರ ಪೋಸ್ಟರ್ ಬಿಡುಗಡೆಯ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಶಿವಮೊಗ್ಗದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಬಿಜೆಪಿಯಿಂದ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಬಿಡುಗಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಗರ ಬಗ್ಗೆ ಮಾತಾಡಲು ಸಾಕಷ್ಟು ವಿಚಾರಗಳಿವೆ.ಆ ಬಗ್ಗೆ ನಾನು ಸಾಕಷ್ಟು ವಿಚಾರಗಳನ್ನ ಬಿಚ್ಚಿಡಬಲ್ಲೆ. ಹಾಗಾಗಿ ಅವರ ಪೋಸ್ಟರ್ ಬಿಡುಗಡೆಯ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ಮಾಡಲು ಬೇರೆ ಕೆಲಸವಿಲ್ಲ ಎಂದಿದ್ದಾರೆ.

ಎರಡು ದಿನದ ಸದನದ ಕಲಾಪ ವಿಸ್ತರಣೆ ಕುರಿತು ಮಾತನಾಡಿದ ಅವರು ಈ ಕುರಿತು ನಾವು ಮೊದಲೇ ನಿರ್ಧರಿಸಿದ್ದೆವು.ಕೇಂದ್ರ ಸರ್ಕಾರದ ನರೇಗಾ ವಿರುದ್ಧದ ನಿಲುವನ್ನು ಜನತೆಗೆ ತಿಳಿಸಿ ಕೊಡುವ ಅಗತ್ಯ ಇದೆ. ಹಾಗಾಗಿ ಇನ್ನಷ್ಟು ವಿಸ್ತೃತ ಚರ್ಚೆ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಈ ಬಾರಿಯೂ ಏನು ಸಿಗುವುದಿಲ್ಲ. ಈ ಹಿಂದಿನ ಬಜೆಟ್ ಗಳಲ್ಲಿ ಅದು ಸಾಬೀತಾಗಿದೆ. ಕೇಂದ್ರ ಸರ್ಕಾರ ರಾಜ್ಯದ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಶಿವಮೊಗ್ಗ ಜಿಲ್ಲೆಯ ನೀರಾವರಿ ಯೋಜನೆಗೆ ಕೇಂದ್ರ ಸರ್ಕಾರ ಹಣ ನೀಡಿಲ್ಲ. ಈ ಬಗ್ಗೆ ರಾಜ್ಯದ ಬಿಜೆಪಿಯ ಯಾವ ಸಂಸದರು ಮಾತನಾಡುವುದಿಲ್ಲ. ಹಾಗಾಗಿ ಈ ಬಾರಿಯೂ ರಾಜ್ಯಕ್ಕೆ ಯಾವುದೇ ಅನುದಾನ ಸಿಗುವ ಸಾಧ್ಯತೆ ಇಲ್ಲ. ಕೇಂದ್ರದ ಬಜೆಟ್ ಕುರಿತು ನಾವು ಹೆಚ್ಚೇನು ನಿರೀಕ್ಷಿಸುತ್ತಿಲ್ಲ ಅಂದಿದ್ದಾರೆ.

ಇಂಧನ ಸಚಿವ ಕೆಜೆ ಜಾರ್ಜ್ ರಾಜೀನಾಮೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಅದೆಲ್ಲವೂ ಸತ್ಯಕ್ಕೆ ದೂರವಾದ ಮಾತು. ಅವರು ನಮ್ಮ ಪಕ್ಷದ ಹಿರಿಯ ನಾಯಕರಿದ್ದಾರೆ. ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಅವರ ಇಲಾಖೆಯ ಅಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಇದೆ. ಆ ಅಧಿಕಾರಿಯು ನನ್ನ ಬಳಿ ಕೆಲಸ ಮಾಡಿದ್ದಾರೆ. ಅವರು ಒಳ್ಳೆಯ ಅಧಿಕಾರಿ ಇದ್ದಾರೆ. ಹಾಗಾಗಿ ಅಂತಹ ಯಾವುದೇ ವಿಷಯ ಸದ್ಯಕ್ಕೆ ಇಲ್ಲ . ಬಿಜೆಪಿಗರು ಸುಮ್ಮನೆ ಇಂತಹ ವಿಷಯದಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದಿದ್ದಾರೆ.