ಮನೆ Latest News ರಾಜ್ಯ ಸರ್ಕಾರ ಮತ್ತೆ 2.5 ಸಾವಿರ ಲಿಕ್ಕರ್ ಲೈಸೆನ್ಸ್ ಕೊಡಲು ತಯಾರಿ ನಡೆಯುತ್ತಿದೆ; ವಿಧಾನಸಭೆ...

ರಾಜ್ಯ ಸರ್ಕಾರ ಮತ್ತೆ 2.5 ಸಾವಿರ ಲಿಕ್ಕರ್ ಲೈಸೆನ್ಸ್ ಕೊಡಲು ತಯಾರಿ ನಡೆಯುತ್ತಿದೆ; ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ

0

ರಾಜ್ಯ  ಸರ್ಕಾರ ಮತ್ತೆ 2.5 ಸಾವಿರ ಲಿಕ್ಕರ್ ಲೈಸೆನ್ಸ್ ಕೊಡಲು ತಯಾರಿ ನಡೆಯುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು ಮತ್ತೆ 2.5 ಸಾವಿರ ಲಿಕ್ಕರ್ ಲೈಸೆನ್ಸ್ ಕೊಡಲು ತಯಾರಿ ನಡೆಯುತ್ತಿದೆ. ಇದುವರೆಗೆ ಆರು ಸಾವಿರ ಕೋಟಿ ಹಣ ಲೂಟಿ ಆಗಿದೆ. ಈ ಹಣ ಎಲ್ಲಿಗೆ ಹೋಯಿತು, ಯಾರಿಗೆ ಹೋಯಿತು?.

ಕರ್ನಾಟಕದ ಮಾನ ಮರ್ಯಾದೆಯನ್ನು ಸಿಎಂ ಮತ್ತು ತಿಮ್ಮಾಪರ ಹರಾಜು ಹಾಕಿದ್ದಾರೆ. ಅವರ ಹುಬ್ಬಳ್ಳಿ ಸಮಾವೇಶದಲ್ಲಿ ಎಣ್ಣೆ ಹಂಚಿ ಅಂತ ಅಧಿಕಾರಿಗಳೇ ವಾಟ್ಸಾಪ್ ಮಾಡಿದ್ದಾರೆ. ಮನೆಮನೆಗೂ ಲಿಕ್ಕರ್ ಕೊಡುತ್ತಿದ್ದಾರೆ. ತಿಮ್ಮಾಪುರ ರಾಜೀನಾಮೆ ಪಡೆಯಬೇಕು. ಇಲ್ಲದಿದ್ದರೆ ಸಿಎಂ ಇದರಲ್ಲಿ ಶಾಮೀಲು ಅಂತ ಅಂದುಕೊಳ್ಳಬೇಕಾಗುತ್ತದೆ ಎಂದು ಗುಡುಗಿದ್ದಾರೆ.

ಕರ್ನಾಟಕದಲ್ಲಿ ಗೂಂಡಾ ಸರ್ಕಾರ ಇದೆ. ಯಾವ ಕಾರಣಕ್ಕೆ ಇವರು ಇವತ್ತು ಪ್ರತಿಭಟನೆ ಮಾಡುತ್ತಿದ್ದಾರೆ?. ಲೋಕಭವನಕ್ಕೆ ನುಗ್ಗುತ್ತೇವೆ ಅಂತಿದ್ದಾರಲ್ಲಾ?. ಲೋಕಭವನಕ್ಕೆ ಭದ್ರತೆ ಕೊಡುವುದೇ ಸರ್ಕಾರ.ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿ ಎರಡು ಸಾವಿರ ಲೈಸೆನ್ಸ್ ನೀಡಿದ್ದಾರೆ. ನಿಯಮ ಪ್ರಕಾರ ಹಾಗೆ ಕೊಡುವ ಹಾಗೆ ಇಲ್ಲ .2.5 ಕೋಟಿ ರೂ. ಲಂಚ ಪಡೆದು ಲೈಸೆನ್ಸ್ ನೀಡಿದ್ದಾರೆ. 6.5 ಸಾವಿರ ಕೋಟಿ ರೂ. ಭ್ರಷ್ಟಾಚಾರ ಆಗಿದೆ. ಆ ಹಣ ಎಲ್ಲಿಗೆ ಹೋಗಿದೆ?. ತಿಮ್ಮಾಪುರಗೆ ಎಷ್ಟು ಹಣ ಹೋಗಿದೆ? ಎಂದು ಪ್ರಶ್ನೆ ಮಾಡಿದ್ದಾರೆ.

ಕರ್ನಾಟಕದ ಮಾನ,  ಮಾರ್ಯಾದೆ ಹರಾಜು ಹಾಕಿದ್ದಾರೆ. ಕರ್ನಾಟಕದ ಬೀದಿ ಬೀದಿಯಲ್ಲಿ ಲಿಕ್ಕರ್ ಸಿಗುತ್ತಿದೆ. ಮೊನ್ನೆ ಹುಬ್ಬಳ್ಳಿಯಲ್ಲಿ ವಸತಿ ಹಂಚಿಕೆ ಕಾರ್ಯಕ್ರಮದಲ್ಲಿ ಎಲ್ಲರಿಗೂ ಹೆಂಡ ಹಂಚಿ ಎಂದು ವಾಟ್ಸಾಪ್  ಮಾಡಿದ್ದಾರೆ. ತಿಮ್ಮಾಪುರ ಮೇಲೆ ಕ್ರಮ ಆಗಬೇಕು. ಇಲ್ಲವಾದರೆ ಇದರಲ್ಲಿ ಸಿದ್ದರಾಮಯ್ಯ ಭಾಗಿ ಆಗಿದ್ದಾರೆ ಎನ್ನಬೇಕಾಗುತ್ತದೆ.

ಜನಾರ್ದನ ರೆಡ್ಡಿ ಮನೆಗೆ ಬೆಂಕಿ ಹಾಕಿದ್ದು ಪೂರ್ವನಿಯೋಜಿತ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ.ಹೀಗಾಗಿ ಗೂಂಡಾಗಿರಿ ಮಾಡುತ್ತಾ ಇದ್ದಾರೆ. ಇದು ಗೂಂಡಾ ಸರ್ಕಾರ. ಇದನ್ನು ನಾವು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ ಎಂದಿದ್ದಾರೆ.