ದಾವೋಸ್ನಲ್ಲಿ ನಿಂತು ಡಿಕೆಶಿ ಪವರ್ ಶೇರಿಂಗ್ ಬಗ್ಗೆ ಮಾತನಾಡಿದ್ದಾರೆ.ರಾಷ್ಟ್ರೀಯ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಡಿಕೆಶಿ ಪವರ್ ಶೇರಿಂಗ್ ಬಗ್ಗೆ ಮಾತನಾಡಿದ್ದಾರೆ.
ನಮ್ಮ ನಾಯಕರು ನನ್ನ ಕೈ ಬಿಡೋಲ್ಲ ಎನ್ನುವ ವಿಶ್ವಾಸ ಇದೆ.ಶಾಸಕರ ಸಂಖ್ಯೆ ಮೇಲೆ ನಮ್ಮಲ್ಲಿ ನಿರ್ಧಾರ ಆಗಲ್ಲ. ನಾವು ಒಂದು ಟೀಮ್ ಆಗಿ ಕೆಲಸ ಮಾಡ್ತೇವೆ.ನನ್ನ ಜೊತೆಗೂ 140 ಶಾಸಕರಿದ್ದಾರೆ, ಸಿದ್ದರಾಮಯ್ಯ ಜೊತೆಗೂ 140 ಶಾಸಕರಿದ್ದಾರೆ. ನಾಯಕತ್ವದ ಬಗ್ಗೆ ಹೈಕಮಾಂಡ್ನಿಂದ ಸೂಕ್ತ ತೀರ್ಮಾನ ಆಗುತ್ತೆ. ನಾನು ಯಾವತ್ತೂ ಆಶಾವಾದಿ.ಭರವಸೆಯ ಮೇಲೆ ಬದುಕುತ್ತೇನೆ.ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೇ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನನ್ನ ನಾಯಕರು ನನ್ನನ್ನು ಕೈಬಿಡಲಿಕ್ಕಿಲ್ಲ ಎನ್ನುವ ವಿಶ್ವಾಸ ಇದೆ.ನಾನು ಯಾವತ್ತೂ ಆಶಾವಾದಿ. ಭರವಸೆಯ ಮೇಲೆ ಬದುಕುತ್ತೇನೆ ಪಾಸಿಟಿವ್ ಆಗಿ ಇದ್ದೇನೆ.ನಾಯಕತ್ವ ವಿಚಾರಕ್ಕೆ ಸಂಬಂಧಿಸಿ ಪಕ್ಷದ ವರಿಷ್ಠ ನಾಯಕರು ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ. ಇದು ಮಾಧ್ಯಮದ ಮುಂದೆ ಚರ್ಚೆ ಮಾಡುವಂತಹ ವಿಚಾರ ಅಲ್ಲ.ತೆರೆಮರೆಯಲ್ಲಿ ನಡೆಸಬೇಕಾದ ರಾಜಕೀಯವಾದ ಚರ್ಚೆ.ಕಠಿಣ ಪರಿಶ್ರಮ ಯಾವತ್ತೂ ಮೋಸ ಮಾಡಲ್ಲ.ಅದಕ್ಕೆ ಪ್ರತಿಫಲ ಸಿಗುತ್ತೆ ಎಂದು ನಂಬಿದ್ದೇನೆ.ನಾನು, ಸಿಎಂ, ನಮ್ಮ ಹೈಕಮಾಂಡ್ ನಾಯಕರು ನಿರ್ಧರಿಸುತ್ತೇವೆ. ನನಗೆ ಶಾಸಕರ ಬೆಂಬಲ ಇಲ್ಲ ಅಂತ ಯಾರು ಹೇಳಿದ್ದು.140 ಶಾಸಕರ ಬೆಂಬಲವೂ ನನಗೆ ಇದೆ.ಕರ್ನಾಟಕದ ಭವಿಷ್ಯದ ದೃಷ್ಟಿಯಿಂದ, ರಾಜ್ಯದ ನಾಯಕತ್ವ ಹಾಗೂ ಕೇಂದ್ರದ ನಾಯಕತ್ವ ಬಲಿಷ್ಠಗೊಳಿಸುವ ದೃಷ್ಟಿಯಿಂದ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.











