ಬೆಂಗಳೂರು; ಸಂವಿಧಾನದ ಪ್ರಕಾರ ರಾಜ್ಯಪಾಲರು ಅಧಿವೇಶನಕ್ಕೆ ಬರಬೇಕು, ರಾಜ್ಯ ಸರ್ಕಾರದ ಭಾಷಣವನ್ನು ರಾಜ್ಯಪಾಲರು ಓದಬೇಕು ಎಂದು ಲೋಕಭವನದ ಬಳಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ.
ಆರ್ಟಿಕಲ್ 176, 161, 163ರ ಪ್ರಕಾರ ಭಾಷಣ ಓದಬೇಕು. ಸಚಿವ ಸಂಪುಟ ಸಿದ್ಧಪಡಿಸಿದ ಭಾಷಣವನ್ನು ಗವರ್ನರ್ ಓದಬೇಕು. ಸಂವಿಧಾನದ ಪ್ರಕಾರ ಗವರ್ನರ್ ಸರ್ಕಾರದ ಭಾಷಣ ಓದಬೇಕು. ಕೇಂದ್ರದಿಂದ ಬರಬೇಕಾದ ಅನುದಾನದ ಬಗ್ಗೆ ಉಲ್ಲೇಖಿಸಿದ್ದೇವೆ.ರಾಜ್ಯಪಾಲರ ಭಾಷಣದಲ್ಲಿ ನಾವು ಉಲ್ಲೇಖಿಸಿರುವುದನ್ನು ಓದಬೇಕು.ಅಧಿವೇಶನಕ್ಕೆ ಬರುತ್ತೇನೆ ಅಥವಾ ಬರುವುದಿಲ್ಲವೆಂದು ಗವರ್ನರ್ ಹೇಳಿಲ್ಲ. ಕೋರ್ಟ್ಗೆ ಹೋಗಿ ಬರ ಪರಿಹಾರ, ನೆರೆ ಪರಿಹಾರ ಪಡೆದಿದ್ದೇವೆ. ಈ ವಿಚಾರ ಭಾಷಣದಲ್ಲಿ ಉಲ್ಲೇಖಿಸಿರುವದಕ್ಕೆ ಆಕ್ಷೇಪಿಸಿದ್ದಾರೆ. ರಾಜ್ಯಪಾಲರನ್ನು ಭೇಟಿಯಾಗಿ ಮನವರಿಕೆ ಮಾಡಿಕೊಟ್ಟಿದ್ದೇವೆ.ಆದರೆ 11 ಪ್ಯಾರಾಗಳನ್ನು ಕೈಬಿಡಬೇಕೆಂದು ಸಲಹೆ ನೀಡಿದ್ದಾರೆ. ಕೇಂದ್ರ, ರಾಜ್ಯ ಸರ್ಕಾರದ ನಡುವೆ ಸಂಬಂಧದ ಬಗ್ಗೆ ಉಲ್ಲೇಖವಿದೆ.ಮನ್ರೇಗಾ ಯೋಜನೆ ಮರುಸ್ಥಾಪನೆ ಬಗ್ಗೆ ಭಾಷಣದಲ್ಲಿ ಉಲ್ಲೇಖವಿದೆ. ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸ ಕಿತ್ತುಕೊಂಡ ಬಗ್ಗೆ ಉಲ್ಲೇಖವಿದೆ ಎಂದಿದ್ದಾರೆ.
ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಅನುದಾನ ನೀಡದಿರುವುದು. ಕೇಂದ್ರ ವಿರುದ್ಧದ ವಿಚಾರ ಕೈಬಿಡುವಂತೆ ರಾಜ್ಯಪಾಲರಿಂದ ಸಲಹೆ ಬಂದಿದೆ. ಗವರ್ನರ್ ಸಲಹೆ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚಿಸುತ್ತೇವೆ.ಚರ್ಚೆ ನಡೆಸಿ ಮತ್ತೆ ತಿಳಿಸುವುದಾಗಿ ಗವರ್ನರ್ಗೆ ಮಾಹಿತಿ ನೀಡಿದ್ದೇವೆ ಎಂದು ಲೋಕಭವನದ ಬಳಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿಕೆ ಕೊಟ್ಟಿದ್ದಾರೆ.











