ಬೆಂಗಳೂರು; ೨೨ ರಿಂದ ಜಂಟಿ ಅಧಿವೇಶನ ನಡೀತಿದೆ, ನರೇಗಾ ವಿಚಾರದಲ್ಲಿ ವಿಶೇಷ ಅಧಿವೇಶನ ಶುರುವಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬಜೆಟ್ ಸಭೆ ವಿಚಾರದ ಬಗ್ಗೆ ಮಾತನಾಡಿದ ಅವರು ೨೨ ರಿಂದ ಜಂಟಿ ಅಧಿವೇಶನ ನಡೀತಿದೆ. ನರೇಗಾ ವಿಚಾರದಲ್ಲಿ ವಿಶೇಷ ಅಧಿವೇಶನ ಶುರುವಾಗುತ್ತಿದೆ. ಎಲ್ಲರೂ ಇರ್ತಾರೆ, ರಾಜ್ಯಪಾಲರು ಭಾಷಣ ಮಾಡ್ತಾರೆ. ಅಧಿವೇಶನ ನಂತ್ರ ಬಜೆಟ್ ಸಿದ್ಧತಾ ಸಭೆ ಮಾಡುತ್ತೇನೆ ಎಂದಿದ್ದಾರೆ.
ದೆಹಲಿ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಕರೆದರೆ ಹೋಗುತ್ತೇನೆ ಎಂದರು.ಎಲ್ಲಾ ಇಲಾಖೆಯಲ್ಲೂ ಭ್ರಷ್ಟಾಚಾರ ನಡೀತಿದೆ ಎಂಬ ತಿಮ್ಮಾಪುರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಅವರು ಹೇಳಿಲ್ಲ, ನೀವೇ ಕೇಳ್ತಾ ಇದ್ದೀರಾ ಏನ್ರಿ ಎಂದು ದರಂ ಆದ್ರು. ರಾಮಚಂದ್ರ ರಾವ್ ಅಮಾನತು ವಿಚಾರದ ಬಗ್ಗೆ ಮಾತನಾಡಿದ ಅವರು ರಾಮಚಂದ್ರ ರಾವ್ ಅವರನ್ನ ಸಸ್ಪೆಂಡ್ ಮಾಡಿದ್ದೇವೆ. ಅವರ ವಿರುದ್ದ ಆ್ಯಕ್ಷನ್ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಬಜೆಟ್ ಸಿದ್ದತೆ ವಿಚಾರದ ಬಗ್ಗೆ ಮಾತನಾಡಿ ಜ. 22 ರಿಂದ ಅಧಿವೇಶನ ಇದೆ. ಜಂಟಿ ಅಧಿವೇಶನ ಇದೆ. ನರೇಗಾ ಬಗ್ಗೆ ಚರ್ಚೆ ಆಗುತ್ತದೆ. ರಾಜ್ಯಪಾಲರ ಭಾಷಣ, ನರೇಗಾ ಬಗ್ಗೆ ಚರ್ಚೆ ಮಾಡ್ತೀವಿ.ಅದು ಮುಗಿದ ಮೇಲೆ ಬಜೆಟ್ ಸಿದ್ದತೆ ಶುರು ಮಾಡ್ತೀನಿ ಎಂದ ಅವರು ನಾಯಕತ್ವ ಬದಲಾವಣೆ ವಿಚಾರ ದೆಹಲಿಗೆ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ ಕರೆದರೆ ದೆಹಲಿಗೆ ಹೋಗ್ತೀನಿ ಅಂದಿದ್ದಾರೆ.











