ಮನೆ Latest News ಅಧಿಕಾರಿಗಳು ಮಾಡಿರುವ ತಪ್ಪಿಂದ ಸರ್ಕಾರವನ್ನು ದೂಷಿಸುವುದು ತಪ್ಪು: ಸಚಿವ ಶಿವರಾಜ್ ತಂಗಡಗಿ ಹೇಳಿಕೆ

ಅಧಿಕಾರಿಗಳು ಮಾಡಿರುವ ತಪ್ಪಿಂದ ಸರ್ಕಾರವನ್ನು ದೂಷಿಸುವುದು ತಪ್ಪು: ಸಚಿವ ಶಿವರಾಜ್ ತಂಗಡಗಿ ಹೇಳಿಕೆ

0

ಬೆಂಗಳೂರು; ಅಧಿಕಾರಿಗಳು ಮಾಡಿರುವ ತಪ್ಪಿಂದ ಸರ್ಕಾರವನ್ನು ದೂಷಿಸುವುದು ತಪ್ಪು ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

 

ರಾಮಚಂದ್ರರಾವ್ ರಾಸಲೀಲೆ ಪ್ರಕರಣದ ಬಗ್ಗೆ ಮಾತನಾಡಿದ ಅವರು ಅಧಿಕಾರಿಗಳು ತಪ್ಪು ಮಾಡಿದರೆ ಅವರ ಮೇಲೆ ಆ್ಯಕ್ಷನ್ ಮಾಡ್ತೀವಿ ಎಂದು ಹೇಳಿದ್ದಾರೆ.ನಿನ್ನೆ ಆ್ಯಕ್ಷನ್ ಮಾಡಿದ್ದಾರೆ. ಅಧಿಕಾರಿಗಳು ಮಾಡಿರುವ ತಪ್ಪಿಂದ ಸರ್ಕಾರವನ್ನು ದೂಷಿಸುವುದು ತಪ್ಪು.ಯಾಕಂದ್ರೆ ವೈಯಕ್ತಿಕವಾಗಿ ಅವರು ಮಾಡಿದ್ದನ್ನ ಸಿಎಂ ಗಮನಿಸಿ ಎಂತಹ ದೊಡ್ಡ ಅಧಿಕಾರಿ ಇದ್ದರೂ ಕೂಡ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಮಾನತ್ತು ಮಾಡುವ ಕೆಲಸ ಮಾಡಿದ್ದಾರೆ.ಹಿರಿಯ ಅಧಿಕಾರಿಗಳು ತಮ್ಮ ಇತಿಮಿತಿಯೊಳಗೆ ತಮ್ಮ ಕೆಲಸ ಮಾಡಬೇಕು.ಇದು ಅವರ ಜವಾಬ್ದಾರಿ ಆಗಿದೆ.ಅಧಿಕಾರಿಗಳು ತಪ್ಪು ಮಾಡಿದರೆ ಆ್ಯಕ್ಷನ್ ಮಾಡುವ ಅಧಿಕಾರ ಇರುತ್ತದೆ.ಸಂಬಂಧಿಸಿದಂತಹ ಸಚಿವರಿಗೆ ಆ್ಯಕ್ಷನ್ ಮಾಡುವಂತ ಅಧಿಕಾರ ಇರುತ್ತೆ ಅದನ್ನ ಮಾಡಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅದನ್ನ ಅವರು ಅನುಭವಿಸುತ್ತಾರೆ ಅದರಲ್ಲಿ ಎರಡು ಮಾತಿಲ್ಲ ಎಂದಿದ್ದಾರೆ.

ಬಿಜೆಪಿ ಸಂಸದರು ಟೀ ಬಿಸ್ಕಿಟ್ ತಿನ್ನೋದಕ್ಕೆ‌ ಮಾತ್ರ ಯೋಗ್ಯರು ಅದಕ್ಕೇ ಆಯ್ಕೆಯಾಗಿರುವುದು. ಹಿಂದಿನ ನರೇಗಾ ಯೋಜನೆಗೂ ಈಗಿನ ಜಿ ರಾಮಜಿ ಯೋಜನೆಗೂ ವ್ಯತ್ಯಾಸಗಳಿವೆ.ಈ ಬಿಲ್ ರಾಮನ ಬಿಲ್ ಅಲ್ಲ, ಗೋಡ್ಸೆ ಬಿಲ್ ಇಂತಹ ಕಾನೂನುಗಳನ್ನು ತಂದರೆ ಹೇಗೆ? .ನೋಡಿ ನಮ್ಮಲ್ಲಿ ಡಿಗ್ರಿ ಮುಗಿಸಿದಂತವರು ನರೇಗಾ ಯೋಜನೆಯಲ್ಲಿ ಕೆಲಸ ಮಾಡಿದ ಉದಾಹರಣೆಗಳಿದ್ದಾವೆ.ಹೊಸ ಕಾಯ್ದೆಯಲ್ಲಿ ಅವಕಾಶಗಳೇ ಇಲ್ಲದಂತಾಗಿದೆ.ಭ್ರಷ್ಟಾಚಾರ ಆಗಿದೆ ಎಂದು ಬಿಜೆಪಿ ಅವರು ಹೇಳ್ತಾರೆ.ಹಾಗಾದರೆ ನೆಗಡಿ ಆಗಿದೆ ಎಂದು ಮೂಗು ಕುಯ್ದುಕೊಳ್ಳುತ್ತೀರಾ. ಔಷಧ ತೆಗೆದುಕೊಳ್ಳಬೇಕು, ಭ್ರಷ್ಟಾಚಾರ ಆದರೆ ತನಿಖೆ ಮಾಡಲಿ.ಯಾರು ಭ್ರಷ್ಟಾಚಾರ ಮಾಡಿದಾರೋ ಅವರನ್ನ ಸಸ್ಪೆಂಡ್ ಮಾಡ್ಬೋದು. ರಾಷ್ಟ್ರೀಯ ಕೌಶಲ್ಯಾಭಿವೃದ್ಧಿಯಲ್ಲಿ ಎಷ್ಟು ಭ್ರಷ್ಟಾಚಾರ ಆಗಿದೆ ಗೊತ್ತಾ?.ಬಿಜೆಪಿ ಅವರಿಗೆ ಬಡವರ ಬಗ್ಗೆ ಕಾಳಜಿ ಇಲ್ಲ ಎಂದು ಅರ್ಥ ಆಗಿದೆ.ಹಳೆ ಕಾಯ್ದೆ ಮತ್ತೆ ಜಾರಿಯಾಗುವವರೆಗೂ ಕೂಡ ನಾವು ಹೋರಾಟ ಮಾಡ್ತೀವಿ. ಜನರಲ್ಲಿ ಅರಿವು ಮೂಡಿಸುತ್ತಿವೆ.ನಮ್ಮ ಜಿಲ್ಲಾ ಹಂತದಲ್ಲಿ ವಿಧಾನಸಭಾ ಕ್ಷೇತ್ರಗಳ ಹಂತದಲ್ಲಿ ಹೋರಾಟಗಳನ್ನ ಮಾಡುತ್ತೇವೆ ಎಂದಿದ್ದಾರೆ.

ಆರ್ ಬಿ ತಿಮ್ಮಾಪುರ ರಾಜೀನಾಮೆಗೆ ಒತ್ತಾಯದ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವನೋ ಒಬ್ಬ ಆಡಿಯೋ ಮಾಡಿ ಬಿಟ್ಟರೆ ಅವರ ಮೇಲೆ  ಮಾಡಿಬಿಡೋದಾ. ಪ್ರೂವ್ ಮಾಡಲಿ, ಕೊಡಲಿ ದಾಖಲೆ, ಅದರ ಮೇಲೆ ಕ್ರಮ ಮಾಡ್ತಾರೆ.ಸಿಎಂ, ಡಿಸಿಎಂ ಹೈಕಮಾಂಡ್ ಇದೆ ಯಾರು ತಪ್ಪು ಮಾಡ್ತಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತಾರೆ.ನಾಳೆ ಇನ್ನೊಬ್ಬ ಬಗ್ಗೆ ಆಡಿಯೋ ಮಾಡಿ ಬಿಡ್ತಾರೆ, ಹಾಗಂತ ಕೇಳಿ ಬಿಡೋದು. ಬಿಜೆಪಿ ಸರ್ಕಾರದಲ್ಲಿ ಇಂತಹ ಆಡಿಯೋಗಳು ಎಷ್ಟು ಆಗಿಲ್ಲ.ಆಗ ಆ್ಯಕ್ಷನ್ ಮಾಡಿದ್ರಾ ಇವರು.ವಿಪಕ್ಷದಲ್ಲಿ ಇದ್ದೇನೆ ಎಂದು ವಿರೋಧ ಮಾಡೋದಾ.ತನಿಖೆ ಮಾಡಲಿ, ಪ್ರೂ ಆದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ತಿಮ್ಮಾಪುರ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.