ತುಮಕೂರು: ಜಿ ಪರಮೇಶ್ವರ್ ಸ್ವತಃ ಕ್ರೀಡಾಪಟು, ನಾನು ಸಣ್ಣ ಕ್ರೀಡಾಪಟು ಎಂದು ತುಮಕೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಸ್ಯ ಚಟಾಕಿ ಹಾರಿಸಿದ್ದಾರೆ,
ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕ್ರೀಡಾಕೂಟ ವನ್ನು ಅತ್ಯಂತ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. ಕ್ರೀಡೆ ಅತ್ಯಂತ ಅವಶ್ಯವಾಗಿದೆ. ವಿದ್ಯಾರ್ಥಿ ದೆಸೆಯಿಂದ ಕ್ರೀಡೆ ಅಳವಡಿಕೆ ಮಾಡಿಕೊಳ್ಳಬೇಕು. ಕ್ರೀಡೆಯಿಂದ ಶಿಸ್ತು ಸಂಯಮ, ಆರೋಗ್ಯ ಬರುತ್ತದೆ ಅನೇಕ ಜಿಲ್ಲೆಯಲ್ಲಿ ಈ ಕ್ರೀಡಾಕೂಟ ನಡೆದಾಗ ಹೋಗಿದ್ದೇನೆ. ಪರಮೇಶ್ವರ್ ಅವರು ಸುಸಜ್ಜಿತವಾಗಿ ಕ್ರೀಡಾಕೂಟ ಆಯೋಜನೆ ಮಾಡಿದ್ದಾರೆ.ಅವರಿಗೆ ಧನ್ಯವಾದ ಎಂದಿದ್ದಾರೆ.
ಜಿ ಪರಮೇಶ್ವರ್ ಸ್ವತಃ ಕ್ರೀಡಾಪಟು. ನಾನು ಸಣ್ಣ ಕ್ರೀಡಾಪಟು. ಹೈ ಸ್ಕೂಲ್ ನಲ್ಲಿ ಇದ್ದಾಗ ಅಂತರ್ ಶಾಲಾ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದೇನೆ. ನಾನು ಎಷ್ಟೇ ಒತ್ತಡ ಇದ್ದರೂ ಒಂಡೇ ಕ್ರಿಕೆಟ್ ಹಾಗೂ ಟಿ- 20 ಯನ್ನು ನೋಡೇ ನೋಡುತ್ತೇನೆ. ಪುಟ್ಬಾಲ್ ಆಟವನ್ನು ರಾತ್ರಿಯೆಲ್ಲಾ ಕುಳಿತು ನೋಡುತ್ತೇನೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಸೋಲಿನಲ್ಲೂ ನಗುವಿನಿಂದ ಇದ್ದವನೇ ನಿಜವಾದ ಕ್ರೀಡಾಪಟು. ನಮ್ಮ ಸರ್ಕಾರದ ಕ್ರೀಡಾಪಟುಗಳಿಗೆ ಎಲ್ಲಾ ಸಹಕಾರ ಬೆಂಬಲ ಇದೆ. ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳುಗೆ ಕಾನ್ಸ್ಟೆಬಲ್ ನಿಂದ ಡಿವೈ ಎಸ್ಪಿವರೆಗೆ 3% ಮೀಸಲು ಇಟ್ಟಿದ್ದೇವೆ.ಉಳಿದ ಇಲಾಖೆಯಲ್ಲಿ 2% ಮೀಸಲು ಇಟ್ಟಿದ್ದೇವೆ.ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ರೆ 6 ಕೋಟಿ, ಬೆಳ್ಳಿ ಗೆದ್ರೆ 4 ಹಾಗೂ ಕಂಚು ಗೆದ್ದರೆ 3 ಕೋಟಿ ಬಹುಮಾನ ಇಟ್ಟಿದ್ದೇವೆ. ಜಿ ಪರಮೇಶ್ವರ್ ತುಮಕೂರಿಗೆ ಹಾಕಿ ಕ್ರೀಡಾಂಗಣ, ಅಂತರಾಷ್ಟ್ರೀಯ ಈಜು ಕೊಳ ಕೇಳಿದ್ದಾರೆ. ಅದನ್ನು ಕೊಡುವ ಭರವಸೆ ಕೊಡುತ್ತೇನೆ. ಉಡುಪಿಯಲ್ಲಿ ಕೊಟ್ಟಷ್ಟು ಹಣ ಕಾಸಿನ ನೆರವನ್ನು ತುಮಕೂರಿಗೆ ಕೊಡುತ್ತೇನೆ ಎಂದು ಭರವಸೆ ನೀಡಿದ್ದಾರೆ.











