ಬೆಂಗಳೂರು; ರಾಹುಲ್ ಗಾಂಧಿ ಜೊತೆ ಸಿಎಂ-ಡಿಸಿಎಂ ಏನ್ ಮಾತಾಡಿದ್ದಾರೆ ಎಂದು ನಮಗೆ ಹೇಗೆ ಗೊತ್ತಾಗುತ್ತೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ರಾಹುಲ್ ಗಾಂಧಿ ಜತೆ ಸಿಎಂ-ಡಿಸಿಎಂ ಭೇಟಿ ವಿಚಾರದ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಸಿಎಂ ಮತ್ತು ಅಧ್ಯಕ್ಷರು ಇದರ ಬಗ್ಗೆ ಮಾತಾಡಿದ್ದಾರೆ. ಅವರೇನು ಮಾತಾಡಿದ್ದಾರೆ ಅಂತ ನಮಗೆ ಹೇಗೆ ಗೊತ್ತಾಗುತ್ತೆ. ಅಲ್ಲಿ ಅವರು ಚರ್ಚೆ ಏನೂ ಮಾಡಿದ ಹಾಗಿಲ್ಲಪ್ಪ, ಉಭಯ ಕುಶಲೋಪರಿ ಮಾತಾಡಿರಬಹುದು. ಅದರ ಬಗ್ಗೆ ನಾನೇನೂ ಮಾತಾಡಲ್ಲ ಎಂದಿದ್ದಾರೆ.
ಜರ್ಮನಿ ಫೆಡರಲ್ ಚಾನ್ಸಲರ್ಗೆ ಸಿಎಂ-ಡಿಸಿಎಂ ಸ್ವಾಗತ ಕೋರದಿದ್ದಕ್ಕೆ ಬಿಜೆಪಿ ಟೀಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಜರ್ಮಿನಿಯ ಫೆಡರಲ್ ಚಾನ್ಸಲರ್ ಅವರು ದೇಶಕ್ಕೆ ಬಂದಾಗ ಅದನ್ನು ಕೇಂದ್ರದವ್ರು ನಮಗೂ ತಿಳಿಸಬೇಕಿತ್ತು. ನಮ್ಮ ರಾಜ್ಯಕ್ಕೆ ಬರ್ತಾರೆ ಅಂದ್ರೆ ನಮಗೂ ಕೇಂದ್ರ ತಿಳಿಸಬೇಕಿತ್ತು. ಅವರು ಪಾಲ್ಗೊಂಡ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದವರನ್ನು ಯಾರನ್ನೂ ಕರೆದಿಲ್ಲ. ಗೌಪ್ಯವಾಗಿ ಬಂದ್ರು ಗೌಪ್ಯವಾಗಿ ಹೋದ್ರು ಅನ್ನೋ ಥರ ಆಗಿದೆ.ನಮಗೂ ಜವಾಬ್ದಾರಿ ಇದೆ, ನಮ್ಮ ರಾಜ್ಯಕ್ಕೆ ಬಂದಾಗ ನಾವೂ ಗೌರವಿಸ್ತೇವೆ. ಆದ್ರೆ ಅವರ ಭೇಟಿ ಬಗ್ಗೆ ನಮಗೆ ಯಾವುದೇ ಮಾಹಿತಿ ಕೊಡದೇ ಇದ್ದಾಗ ಏನು ಮಾಡಕ್ಕಾಗುತ್ತೆ? ಎಂದು ಪ್ರಶ್ನಿಸಿದ್ದಾರೆ.
ಅಧಿಕಾರ ಹಂಚಿಕೆ ಗೊಂದಲ ಬಗ್ಗೆ ಹೈಕಮಾಂಡ್ ಕ್ಲಾರಿಟಿ ಕೊಡಬೇಕು ಎಂಬ ಕೆ ಎನ್ ರಾಜಣ್ಣ ಆಗ್ರಹ ವಿಚಾರದ ಬಗ್ಗೆ ಮಾತನಾಡಿ ರಾಜಣ್ಣ ಅವರು ಹೇಳಿರೋದು ಒಂದು ಅರ್ಥದಲ್ಲಿ ಸರಿ ಇದೆ. ನಮ್ಮದೂ ಅದೇ ಅಭಿಪ್ರಾಯ ಆಗಿದೆ. ಗೊಂದಲ ಇರಬಾರದು ಅಂದ್ರೆ ಹೈಕಮಾಂಡ್ ಸ್ಪಷ್ಟತೆ ಕೊಡಬೇಕು ಅಂದಿದ್ದಾರೆ. ಇದೇ ವೇಳೆ ಅಕ್ರಮ ಬಾಂಗ್ಲಾ ನಿವಾಸಿಗಳ ವಿಚಾರದ ಬಗ್ಗೆ ಮಾತನಾಡಿದ ಅವರು ಅಕ್ರಮ ಬಾಂಗ್ಲಾ ನಿವಾಸಿಗಳ ಬಗ್ಗೆ ಮಾಹಿತಿ ಕೇಳಲಾಗಿದೆ. ತನಿಖೆ ಮಾಡಿ ವರದಿ ಕೊಡಿ ಅಂತ ಪೊಲೀಸರಿಗೆ ಕೇಳಿದ್ದೇವೆ. ವರದಿ ಬಂದ ಮೇಲೆ ಕ್ರಮ ಕೈಗೊಳ್ಳುತ್ತೇವೆ.ಅವರನ್ನು ಅವರ ದೇಶಕ್ಕೆ ಡೀಪೋರ್ಟ್ ಮಾಡ್ತೇವೆ. ನುಸುಳುಕೋರರ ಪತ್ತೆ ಕಾರ್ಯ ನಿರಂತರವಾಗಿ ನಡೀತನೇ ಇದೆ ಎಂದು ಹೇಳಿದ್ದಾರೆ.











