ಮನೆ Latest News ಅಧಿಕಾರ ಹಂಚಿಕೆ‌ ವಿಚಾರ ಊಹಾಪೋಹಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ಮಾಧ್ಯಮದವರು, ನಮ್ಮಲ್ಲಿ ಯಾವ ಗೊಂದಲವೂ ಇಲ್ಲ...

ಅಧಿಕಾರ ಹಂಚಿಕೆ‌ ವಿಚಾರ ಊಹಾಪೋಹಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ಮಾಧ್ಯಮದವರು, ನಮ್ಮಲ್ಲಿ ಯಾವ ಗೊಂದಲವೂ ಇಲ್ಲ ಯಾವ ಸಮಸ್ಯೆಯೂ ಇಲ್ಲ; ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಮೈಸೂರು: ಅಧಿಕಾರ ಹಂಚಿಕೆ‌ ವಿಚಾರ ಊಹಾಪೋಹಗಳ ಬಗ್ಗೆ ಚರ್ಚೆ ಮಾಡುತ್ತಿರುವುದು ಮಾಧ್ಯಮದವರು, ನಮ್ಮಲ್ಲಿ ಯಾವ ಗೊಂದಲವೂ ಇಲ್ಲ ಯಾವ ಸಮಸ್ಯೆಯೂ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಯಾರೋ ಎಂಎಲ್ಎಗಳು ಏನೋ ಗೊತ್ತಿಲ್ಲದೆ ಏನೋ ಹೇಳುತ್ತಾರೆ. ಅವರಿಗೆ ಏನು ಗೊತ್ತು ರೀ.ಮಾತನಾಡಬೇಕಿರುವುದು ನಾನು ಮತ್ತು ಡಿ.ಕೆ ಶಿವಕುಮಾರ್ ಎಂದ ಅವರು ಡಿ.ಕೆ ಶಿವಕುಮಾರ್ ಏನಾದರೂ ಮಾತನಾಡಿದ್ದಾರಾ ?. ನಾನೇನಾದರೂ ಮಾತನಾಡಿದ್ದೀನಾ ?. ಯಾರೋ ಮಾಹಿತಿ ಇಲ್ಲದ ಎಂಎಲ್ ಎ ಗಳು ಹೇಳಿದ್ದನ್ನು ಕೇಳಿದರೆ ಹೇಗೆ ?.ನಮ್ಮಲ್ಲಿ ಯಾವ ಗೊಂದಲಗಳು ಇಲ್ಲ. ಯಾವ ಬೇರೆ ರೀತಿಯ ಚರ್ಚೆಗಳು ಇಲ್ಲ. ಇರುವುದೆಲ್ಲಾ ಮಾಧ್ಯಮಗಳಲ್ಲಿ. ಖರ್ಗೆ ಜೊತೆ ನಾನು ಮಾತನಾಡಿದ್ದೇನೆ ಡಿ.ಕೆ ಶಿವಕುಮಾರ್ ಜೊತೆಯಲ್ಲೂ ಮಾತನಾಡಿದ್ದೇನೆ.ಎಲ್ಲೂ ಯಾವತ್ತು ಯಾರ ಅಪಸ್ವರಗಳು ಇಲ್ಲ ಯಾವ ಸಮಸ್ಯೆಗಳು ಇಲ್ಲ. ಏನೇ ತೀರ್ಮಾನಗಳಿದ್ದರು ಅದನ್ನು ಹೈಕಮಾಂಡ್ ಮಾಡುತ್ತದೆ.ಹೈ ಕಮಾಂಡ್ ತೀರ್ಮಾನಕ್ಕೆ ನಾನು ಮತ್ತು ಡಿ.ಕೆ ಶಿವಕುಮಾರ್ ಬದ್ದ ಎಂದು ಹೇಳಿದ್ದೇವೆ. ಸದ್ಯಕ್ಕೆ ನಾನೇನು ದೆಹಲಿಗೆ ಹೋಗುತ್ತಿಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ.