ಬೆಂಗಳೂರು: ಯಾವುದೇ ಹೆಣ್ಣು ಮಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆದರೆ ತಪ್ಪೇ: ಸಿಎಂ ಭೇಟಿ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ವಿಚಾರದ ಬಗ್ಗೆ ನಾನು ಅಲ್ಲಿನ ಎಸ್ಪಿಗೆ ಮಾತಾಡಿದ್ದೇನೆ. ಪೊಲೀಸರು 307 ಕೇಸಿನಲ್ಲಿ ಆ ಮಹಿಳೆಯನ್ನು ಅರೆಸ್ಟ್ ಮಾಡಿದ್ರು. ಆ ಸಂದರ್ಭದಲ್ಲಿ ಮಹಿಳೆಯ ತಾಯಿ ತಮ್ಮ ಜೊತೆಗಿದ್ದರು.ಮಹಿಳೆಯನ್ನು ಅರೆಸ್ಟ್ ಮಾಡಿದ ಮೇಲೆ ಆಕೆಯೇ ಬಟ್ಟೆ ಬಿಚ್ಚಿಕೊಂಡಿದ್ದಾಳೆ. ಅದನ್ನ ತಮ್ಮನೇ ವಿಡಿಯೋ ಮಾಡಿ ವೈಲರ್ ಮಾಡಿದ್ದಾನೆ. ಜಡ್ಜ್ ಮುಂದೆ ಪೊಲೀಸರು ದೌಜನ್ಯ ಮಾಡಿರೋ ಬಗ್ಗೆ ಮಹಿಳೆ ಏನು ಹೇಳಿರಲಿಲ್ಲ.ಕಾನೂನಿನ ಪ್ರಕಾರ ಏನು ಕ್ರಮ ಅಗಬೇಕೋ ಆಗುತ್ತದೆ ಎಂದಿದ್ದಾರೆ.
ಯಾವುದೇ ಹೆಣ್ಣು ಮಗಳ ಮೇಲೆ ಯಾವುದೇ ರೀತಿಯ ದೌರ್ಜನ್ಯ ಆದರೆ ತಪ್ಪೇ.ನಾನು ಈಗಾಗಲೇ ಹುಬ್ಬಳ್ಳಿ ಪೊಲೀಸ್ ಆಯುಕ್ತರ ಬಳಿ ಮಾತನಾಡಿದ್ದೇನೆ. ಅವರು ನೀಡಿದ ಮಾಹಿತಿಯ ಪ್ರಕಾರ ಆ ಮಹಿಳೆಯ ಮೇಲೆ ಈಗಾಗಲೇ ಸೆಕ್ಷನ್ 307 ಪ್ರಕರಣ ದಾಖಲಾಗಿದೆ. ಆ ಪ್ರಕರಣದ ವಿಚಾರವಾಗಿ ಅರೆಸ್ಟ್ ಮಾಡಲು ಹೋಗ್ತಾರೆ. ಸುಮಾರು ಆರರಿಂದ ಏಳು ಮಹಿಳಾ ಪೊಲೀಸ್ ಸಿಬ್ಬಂದಿ ತೆರಳಿದ್ದಾಗ ಗಲಾಟೆ ಮಾಡುತ್ತಾಳೆ. ಪೊಲೀಸರು ಬಸ್ನಲ್ಲಿ ಆ ಮಹಿಳೆಯನ್ನು ಹತ್ತಿಸಿಕೊಂಡಾಗ ಆಕೆಯ ತಾಯಿ ಹಾಗೂ ತಮ್ಮ ಅದೇ ಬಸ್ನಲ್ಲಿ ಇರುತ್ತಾರೆ.ತಾನಾಗಿ ತಾನೆ ಆ ಮಹಿಳೆ ತನ್ನ ಗಲಾಟೆ ಮಾಡುತ್ತಾಳೆ.ಆ ಸಂದರ್ಭದಲ್ಲಿ ಓರ್ವ ಪುರುಷ ಪೊಲೀಸ್ ಸಿಬ್ಬಂದಿ ಕೂಡ ಬಸ್ನಲ್ಲಿ ಇದ್ದರು. ಆ ವ್ಯಕ್ತಿ ಕೂಡ ಸಹಾಯ ಮಾಡಲು ಪ್ರಯತ್ನಪಟ್ಟಿದ್ದಾರೆ.ಈ ವಿಡಿಯೋ ಚಿತ್ರೀಕರಣ ಮಾಡಿ ವೈರಲ್ ಮಾಡಿದ್ದು ಆ ಮಹಿಳೆಯ ಸಹೋದರನೆ. ಈಗ ಆ ಮಹಿಳೆ ನ್ಯಾಯಾಂಗ ಬಂಧನದಲ್ಲಿ ಇದ್ದಾಳೆ ಎಂದಿದ್ದಾರೆ.
ನ್ಯಾಯಾಧೀಶರ ಸಮ್ಮುಖದಲ್ಲಿ ಪೊಲೀಸರು ಈ ರೀತಿ ಮಾಡಿದ್ದಾರೆ ಅಂತ ಮಹಿಳೆ ಹೇಳಬಹುದಿತ್ತು. ಆದ್ರೆ ಯಾವುದೇ ರೀತಿ ಆಕೆ ಹೇಳಿಲ್ಲ. ತಾನಾಗಿ ತಾನೇ ಈ ಘಟನೆಯನ್ನು ಮಾಡಿಕೊಂಡು ಇದಕ್ಕೆ ಬೇರೆ ರೀತಿಯ ಆಯಾಮವನ್ನು ಡಲಾಗಿದೆ.ವಿಡಿಯೋದಲ್ಲಿ ಪೊಲೀಸರು ಬಟ್ಟೆ ತೆಗೆಯುವುದು ಎಂದು ಪತ್ತೆಯಾಗಿಲ್ಲ. ಪೊಲೀಸರ ಮೇಲೆ ವಿನಾಕಾರಣ ಆರೋಪ ಮಾಡುವುದು ತಪ್ಪು. ಎಸ್ ಪಿ ಅವರಿಗೆ ಪತ್ರವನ್ನು ಬರೆದಿದ್ದೇನೆ.ಪೊಲೀಸರಿಂದಲೇ ಈ ಘಟನೆ ನಡೆದಿದ್ದರೆ ಮೂಲಾಜಿಲ್ಲದೆ ಕ್ರಮ ವಹಿಸಬೇಕು ಅಂತ ಪತ್ರ ಬರೆದಿದ್ದೇನೆ.ಮಹಿಳೆ ಹೇಳಿರುವುದು ಸುಳ್ಳಾದರೆ ಆಕೆಯ ವಿರುದ್ಧ ಕಾನೂನು ಕ್ರಮವಾಗುತ್ತದೆ ಎಂದು ತಿಳಿಸಿದ್ದಾರೆ.











