ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಆಡಳಿತ ಇತಿಹಾಸದಲ್ಲಿ ಅತಿ ಹೆಚ್ಚು ಸೇವೆಗಳಿಸಿದ ದಾಖಲೆ ಆಗಿದೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ಆಢಳಿತ ಇತಿಹಾಸದಲ್ಲಿ ಅತಿ ಹೆಚ್ಚು ಸೇವೆ ಗಳಿಸಿದ ದಾಖಲೆ ಆಗಿದೆ. ದೇವರಾಜು ಅರಸು ಅವರು ೧೯೭೨ ರಲ್ಲಿ ಸಿಎಂ ಆಗಿದ್ರು. ಸಾಮಾಜಿಕ ನ್ಯಾಯದ ಪರಿಕಲ್ಪನೆ ಕೊಟ್ಟಿದ್ದಾರೆ. ಭೂಸುಧಾರಣೆ , ಜನಪರ ಕಾರ್ಯಕ್ರಮಗಳನ್ನ ಮಾಡಿದ್ದಾರೆ. ಕೆಂಗಲ್ ಹನುಮಂತಯ್ಯ , ಎಸ್ ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ , ಎಸ್ ಎಂ ಕೃಷ್ಣ ಜನಪ್ರಿಯ ಸಿಎಂಗಳಾಗಿದ್ರು. ಸರ್ವಾಂಗೀಣ ಅಭಿವೃದ್ಧಿ ಕೊಟ್ಟಿದ್ದಾರೆ. ಮೌಲ್ಯಾಧಾರಿತ ರಾಜಕಾರಣ ಮಾಡಿದ್ದಾರೆ. ಅದೇ ಮಾದರಿಯಲ್ಲಿ ಸಿದ್ದರಾಮಯ್ಯನವರು ಆಡಳಿತ ಮಾಡ್ತಿದ್ದಾರೆ. ೧೯೮೫ ರಿಂದ ನಾನು ಶಾಸಕನಾಗಿದ್ದಾಗಿಂದ ಸಿದ್ದರಾಮಯ್ಯ ಅವರನ್ನ ನೋಡಿದ್ದೇನೆ. ಅವರ ಜನಪ್ರಿಯ ಕಳಕಳಿ ಪ್ರಾಮಾಣಿಕ ವಿಚಾರ, ಬದ್ದತೆ ಆಕರ್ಷಿತವಾಗಿತ್ತು. ದೇವೇಗೌಡ್ರು, ಎಸ್ ಎಂ ಕೃಷ್ಣ, ಐಕೆ ಗುಜ್ರಾಲ್ , ವಾಜಪೇಯಿ ಅಂತಹ ಪ್ರಧಾನಿಗಳಿಗೆ ರಾಷ್ಟ್ರ ಅಭಿವೃದ್ಧಿಯ ಚಿಂತನೆ ಇತ್ತು ಎಂದಿದ್ದಾರೆ.
ಇತ್ತೀಚೆಗೆ ಜಾತಿ ಧರ್ಮ ಪಕ್ಷಪಾತ ವಂಶಪಾರಂಪರ್ಯ ಆಢಳಿತ ಭ್ರಷ್ಟಾಚಾರ ಆವರಿಸಿದೆ. ಪರಿವರ್ತನೆ ಕಾಲ ಬರಬೇಕಿದೆ. ಇಂತಹ ಕಾಲದಲ್ಲಿ ಸಿದ್ದರಾಮಯ್ಯ ಸಿಎಂ ಅಗಿ ಜನಪರ ಕೆಲಸ ಮಾಡ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಕೆಲವರು ಜಾತಿವಾದಿ ಅಂತಾರೆ. ಅವರು ಜಾತಿವಾದಿಗಳಲ್ಲ. ವರ್ಗರಹಿತ ಸಮಾಜ ತರುವ ಚಿಂತನೆ ಅವರಲ್ಲಿದೆ. ನಾನು ಬಸವತತ್ವದ ಅನುಯಾಯಿ ಅಂತಾರೆ ಸಿದ್ದರಾಮಯ್ಯ ಎಂದ ಅವರು ಗ್ಯಾರಂಟಿ ಸ್ಕೀಮ್ ಗಳನ್ನ ಕೊಟ್ಟಿದೆ ನಮ್ಮ ಸರ್ಕಾರ. ಹಣದ ಕೊರತೆ ಇಲ್ಲಾ, ಆರ್ಥಿಕ ಶಿಸ್ತು ಇದೆ ಇದು ಸಾಲದು. ಇನ್ನು ಪರಿಣಾಮಕಾರಿ ಯಾಗಿ ಕೆಲಸ ಆಗಬೇಕು. ಇನ್ನು ಎರುಡವರೆ ವರ್ಷ ಸಿಎಂ ಆಗಿ ಕೆಲಸ ಮಾಡುವ ಅವಕಾಶ ಇದೆ.ಪ್ರಾಮಾಣಿಕ ಚಿಂತನೆ ಆಡಳಿತವನ್ನ ಮುಂದಿನ ಜನಾಂಗಕ್ಕೆ ಕೊಟ್ಟು ಹೋಗ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ಸಿಎಂ ಮುಂದುವರೆಯುತ್ತಾರಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ಹಿರಿಯನಿದ್ದೇನೆ ನನಗೂ ಆಸೆ ಇದೆ. ಪ್ರಧಾನಿಯಾಗಬೇಕೆಂಬ ಆಸೆಯು ಇದೆ. ಇದು ನಮ್ಮ ಸೃಷ್ಟಿ ಅಲ್ಲಾ ಹೈಕಮಾಂಡ್ ದು ಎಂದಿದ್ದಾರೆ . ಶಾಸಕಾಂಗ ಸಭೆಯಲ್ಲಿ ಆಯ್ಕೆ ಮಾಡಬೇಕು . ಬದಲಾವಣೆ ಅಗುತ್ತೆ ಅಂತ ಮನರಂಜನೆಗಾಗಿ ಕೆಲ ಶಾಸಕರು ಹೇಳ್ತಾರೆ, ತಪ್ಪೇನಿದೆ ಹೇಳಿದ್ರೆ, ಇದು ವ್ಯಕ್ತಿಗತ ಪ್ರಶ್ನೆ ಅಲ್ಲಾ ಜನಪರ ಕೆಲಸ ಮಾಡಬೇಕು.ಎರಡೂವರೆ ವರ್ಷಕ್ಕೆ ಆಯ್ಕೆ ಸಿಎಂ ಮಾಡಿದ್ದೀವಾ..?.ಆ ಪ್ರಶ್ನೆ ನಮ್ಮ ಮುಂದೆ ಇಲ್ಲ. ಬಜೆಟ್ ತಯಾರು ಮಾಡೊದಕ್ಕೆ ನನ್ನ ಸಿಎಂ ಕರೆದಿದ್ದಾರೆ . ನಮ್ಮ ವಿಚಾರಗಳನ್ನ ಅವರಿಗೆ ಹೇಳ್ತಿವಿ. ಜನವರಿ 16 ರ ನಂತರ ಇಲಾಖೆಯವರು ಒಂದು ಪಿಕ್ಚರ್ ಕೊಡ್ತಾರೆ. ಪರಿಣಾಮಕಾರಿ ಕೆಲಸ ಯೋಜನೆಗಳನ್ನ ಸಿಎಂ ಕೊಡಲೇ ಬೇಕಿದೆ ಎಂದು ತಿಳಿಸಿದ್ದಾರೆ.
ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡಬೇಕು. ನೀರಾವರಿಗೆ ಹೆಚ್ಚು ಗಮನ ಕೊಡಬೇಕು. ಇದನ್ನ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ತರ್ತೀನಿ. ಸಿಎಂಸಿದ್ದರಾಮಯ್ಯ ದಾಖಲೆಗೆ ಪಕ್ಷದಲ್ಲಿ ಎಲ್ಲರಿಗೂ ಸಂತೋಷ ಇದೆ. ಪಕ್ಷದಿಂದ ಅಭಿನಂದನೆ ಸಲ್ಲಿಸಬಹುದು ಎಂದ ಅವರು ಐದು ವರ್ಷ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೆಯುತ್ತಾರಾ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ಪಕ್ಷದ ಹೈಕಮಾಂಡ್ ಏನ್ ತೀರ್ಮಾನ ಮಾಡುತ್ತೆ ಅದನ್ನ ಪಾಲನೆ ಮಾಡಬೇಕು. ಡಿಕೆ ಶಿವಕುಮಾರ್ ಸಿಎಂ ಆಗೊದ್ರಲ್ಲಿ ತಪ್ಪೇನಿದೆ. ಅರ್ಹತೆ ಇದೆ ಅವಕಾಶ ಇರಬಹುದು ಮುಂದೆ. ಸಿದ್ದರಾಮಯ್ಯ ಅವರ ಆಡಳಿತಕ್ಕೆ 10 ಕ್ಕೆ 10 ಮಾರ್ಕ್ಸ್ ಕೊಡ್ತಿನಿ. ರಾಜ್ಯದ ಆರ್ಥಿಕ ಶಿಸ್ತು ದೇಶದಲ್ಲೆ ನಂಬರ್ 1 .ನಮ್ಮ ತೆರಿಗೆ ಕಲೆಕ್ಷನ್ ನಲ್ಲೂ ನಾವು ಹಿಂದೆ ಬಿದ್ದಿಲ್ಲ. ಬಿಜೆಪಿಯವರು ಸಾಲದ ಹೊರೆ ಹೊರೆಸಿ ಹೊಗಿದ್ದಾರೆ. 15 ನೇ ಹಣಕಾಸಿನ ಆಯೋಗದಲ್ಲಿ ಗ್ರಾಂಟ್ ಹಣ ಕೊಟಿಲ್ಲಾ ಕಷ್ಟ ಅನುಭವಿಸಿದ್ದೇವೆ. ಗ್ಯಾರಂಟಿ, ಏಳನೆ ಹಣಕಾಸು ಆಯೋಗ ಜಿಎಸ್ ಟಿ ಯಿಂದ ಆರಂಭದಲ್ಲಿ ಸಮಸ್ಯೆ ಆಗಿತ್ತು ಎಂದಿದ್ದಾರೆ.











