ಬೆಂಗಳೂರು; ಬಳ್ಳಾರಿ ಘಟನೆ ಬಗ್ಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಗುಂಡು ಎಲ್ಲಿಂದ ಬಂತು ರಾಜಶೇಖರ್ ದೇಹದ ಒಳಗೆ ಹೇಗೆ ಹೋಯ್ತು. ಸತೀಶ್ ರೆಡ್ಡಿ ಅವರನ್ನ ಅರೆಸ್ಟ್ ಮಾಡಿದ್ರಾ? ರಾಜಾತಿಥ್ಯ ಕೊಟ್ಟು ಸರ್ಕಾರದಿಂದ ಚಿಕಿತ್ಸೆ ಕೊಡಿಸ್ತಿದ್ದಾರೆ. ಏನ್ ಸಮಗ್ರ ತನಿಖೆ ನಡೆಸ್ತಿರಾ. ಇವತ್ತಿಗೆ ಐದು ದಿನ ಆಗಿದೆ. ಕ್ಷುಲಕ್ಕ ಕಾರಣ ಅಂತಾರೆ ಸಿಎಂ. ಗ್ರೇಟ್ ಡಿಸಿಎಂ ಪ್ರಧಾನಿ ಗೃಹ ಸಚಿವರಿಗೆ ಹೆದರೊಲ್ಲಾ ಭರತ್ ರೆಡ್ಡಿ ಬೆನ್ನಿಗೆ ನಿಲ್ತಿವಿ ಅಂತಾರೆ ಡಿಸಿಎಂ. ಇನ್ನೂ ಯಾವ ತನಿಖೆ ನಡೆಸ್ತಿರಾ ಎಂದು ಪ್ರಶ್ನೆ ಮಾಡಿದ್ದಾರೆ.
ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲು ಇಡೋವವರೆಗೆ ಗಲಾಟೆ ಇರಲಿಲ್ಲಾ ಎಂತಾರೆ ಡಿ ಸಿಎಂ. ಮಿಸ್ಟರ್ ಡಿಸಿಎಂ ಜನಾರ್ದನ ರೆಡ್ಡಿಗೆ ಬಳ್ಳಾರಿ ಹೋಗೊಕೆ ಸುಪ್ರೀಂ ಕೋರ್ಟ್ ಅನುಮತಿ ಕೊಟ್ಟು ಒಂದುವರೆ ವರ್ಷ ಆಗಿದೆ. ಆದೇಶದ ಬಳಿಕ ಅವರು ಬಳ್ಳಾರಿಗೆ ಹೋದ್ಮಲೆ ಎಷ್ಟು ಗಲಭೆ ಎಫ್ ಐ ಆರ್ ಅಗಿದೆ ಜನರ ಮುಂದಿಡಿ. ಇದು ಕಾಕತಾಳೀಯ ಎಂದು ಹಿಮ್ಮೇಳ ಬಾರಿಸ್ತಾರೆ ಹೋಮ್ ಮಿನಿಸ್ಟರ್. ಈ ಸರ್ಟಿಫಿಕೇಟ್ ಕೊಟ್ಟ ಮೇಲೆ ಯಾವ ತನಿಖೆ ನಡೆಸ್ತಿರಾ. ನಿಮ್ಮ ಕಾಂಗ್ರೆಸ್ ಕಾರ್ಯಕರ್ತನ ಕೊಲೆ ಇದು. ರಾಜ್ಯ ಕುಲುಗೆಡುಸ್ತಿದ್ದಾರೆ ಇಂತಹ ಸರ್ಕಾರ ದಿಕ್ಕರಿಸೋದು ರಾಜ್ಯ ಉಳಿಸಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ಕೊಡ್ತಿನಿ ಎಂದಿದ್ದಾರೆ,
ಇವರ ತೆವಲಿಗೆ ಅಧಿಕಾರದ ಆಸೆಗೆ ಯಾರನ್ನ ಬೇಕಾದ್ರು ಬಲಿಕೊಡ್ತಾರೆ ಇವರಿಗೆ ಕನಿಕರ ಇದ್ಯಾ. ಸೆಕ್ಯುರಿಟಿ ಕೇಳುದ್ರೆ ಇರಾಕ್ ಅಮೆರಿಕಾದಿಂದ ತರಿಸಿಕೊಳ್ಳಲಿ ಅಂತಾರೆ ನೀವು ದನ ಕಾಯೋಕೆ ಇದ್ದೀರಾ. ಕೊಟ್ಟುಬಿಡಿ ಟ್ರಂಪ್ ಗೆ ಅಧಿಕಾರಾನಾ. ಬಿಜೆಪಿ ಕಾರ್ಯಕರ್ತರನ್ನ ತಯಾರು ಮಾಡಿಕೊಳ್ಳಿ ಅಂತಾರೆ. ಒಬ್ಬ ಡಿಸಿಎಂ ಕೊಡೊ ಹೇಳಿಕೆನಾ ಇದು. ಅಲ್ಲಿ ನಡೆದ ಘಟನೆ ಮೇಲೆ ಕೆಲವು ಪೊಲೀಸ್ ಅಧಿಕಾರಿಗಳು ತಹಶಿಲ್ದಾರರಿಗೆ ೧೪೪ ಸೆಕ್ಷನ್ ಹಾಕಿ ಎಂದು ಗಮನಕ್ಕೆ ತರ್ತಾರೆ. ೧೪೪ ಆದೇಶನು ಮಾಡ್ತಾರೆ ಆದ್ರು ಹಾಕಲ್ಲ. ಎಸ್ ಪಿ ನ ಅಮಾನತು ಮಾಡಿದ್ದಾರೆ. ಬೆಳಗ್ಗೆ ಚಾರ್ಜ್ ತಗೋಬೇಕು, ದುಗ್ಗಮ್ಮ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿದ್ದಾರೆ. ಆ ನಂತರ ಅಧಿಕಾರ ಹಸ್ತಾಂತರ ಪಡೆದು ಬರ್ತಾರೆ. ಅವರ ಫೆಲ್ಯುರ್ ಅಂತಾರೆ ನಿಮ್ಮ ಐಜಿ ಅಡಿಷನ್ ಎಸ್ ಪಿ, ಡಿವೈಎಸ್ ಪಿ ಇದ್ರಲ್ಲಾ. ಚಿನ್ನಸ್ವಾಮಿ ಪ್ರಕರಣಲ್ಲಿ ಐದು ಜನ ಅಧಿಕಾರಿಗಳನ್ನ ಸಸ್ಪೆಂಡ್ ಮಾಡ್ತಿರಾ. ಅಲ್ಲಿ ಯಾರು ಎಸ್ ಐ, ಇನ್ಸ್ಪೆಕ್ಟರ್ ಇದ್ದಾರೆ ಎಂದು ಪರಿಚಯ ಮಾಡಿಕೊಂಡಿಲ್ಲ.ಐಜಿ ಇದ್ರಲ್ಲಾ ಹೆಣ್ಣು ಮಗಳು ಅವರಿಗೆ ಜವಾಬ್ದಾರಿ ಇರಲಿಲ್ವಾ.ಅಡಿಷನಲ್ ಎಸ್ ಪಿ ಅವರಿಗೆ ಬಳ್ಳಾರಿ ಬ್ಯಾಕ್ ಗ್ರೌಂಡ್ ಬಗ್ಗೆ ಗೊತ್ತಿತ್ತಲ್ಲ. ಅವರನ್ನ ಯಾಕೆ ಸಸ್ಪಂಡ್ ಮಾಡಿಲ್ಲಾ. ಜಾಸ್ತಿ ಜನ ಸೇರೋ ಮೊದಲೆ ಲಾಠಿ ಚಾರ್ಜ್ ಮಾಡೋಕೆ ಏನಾಗಿತ್ತು. ಎಸ್ ಪಿ ಮಾಡಿಸಲಿಲ್ಲಾ, ಇವರೆಲ್ಲಾ ಇದ್ರಲ್ಲಾ ಮಂತ್ಲಿ ಕಲೆಕ್ಷನ್ ಮಾಡೋರು ಇದ್ರಲ್ಲ. ಇವರ ಜೊತೆ ಮಟ್ಕಾ ದಂದೆ ದುಡ್ಡು ವಸೂಲಿ ದುಡ್ಡು ಎಣಿಸಿಕೊಂಡು ಕೂತ್ತಿದ್ರಾ. ಭರತ್ ರೆಡ್ಡಿ ಸಾಯಂಕಾಲ ರಕ್ಷಣೆ ಕೊಟ್ಟು ಕರೆದುಕೊಂಡು ಬಂದವರು ಯಾರು ಇದೇ ಪೊಲೀಸ್ ನವರು. ಸೋಮಶೇಖರ್ ರೆಡ್ಡಿ ಜನಾರ್ದನ ರೆಡ್ಡಿ ಶ್ರೀರಾಮುಲು ಮೇಲೆ ಎಫ್ ಐ ಆರ್ ಹಾಕಿದ್ರು. ಇವರ ಮೇಲೆ ಯಾರು ಹಾಕಿಲ್ಲ ಎಂದಿದ್ದಾರೆ.











