ಬೆಂಗಳೂರು; ಬಳ್ಳಾರಿ ಘಟನೆ ಗಾಂಜಾ ಗಮ್ಮತ್ತಿನಲ್ಲಿ ನಡೆದಿದ್ದು ಎಂದು ಎಂಎಲ್ ಸಿ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಳ್ಳಾರಿ ಘಟನೆಯನ್ನ ಇಡೀ ಪ್ರಪಂಚಕ್ಕೆ ತೋರಿಸಿದ್ದ ಮಾಧ್ಯಮಗಳಿಗೆ ಧನ್ಯವಾದ. ಮುಖ್ಯಮಂತ್ರಿಗಳು ಘಟನೆ ಬಗ್ಗೆ ತಿಳಿದು ಎಂಎಲ್ಬಗೆ ಬುದ್ದಿ ಹೇಳಿ ಅಂತಾ ಜಮೀರ್ ಅವರಿಗೆ ಹೇಳಿದ್ರು. ಇದರಲ್ಲಿಯೇ ಗೊತ್ತಾಗುತ್ತೇ ಘಟನೆಯಲ್ಲಿ ತಪ್ಪು ಯಾರದು ಅಂತಾ. ಚಾರ್ಜ್ ತೆಗೆದುಕೊಡ ನಾಲ್ಕೇ ತಾಸಿನಲ್ಲಿ ಎಸ್ಪಿ ಅವರನ್ನ ಸಸ್ಪೆಂಡ್ ಮಾಡಿದ್ರಿ. ಎಸ್ಕಾರ್ಟ್ ಮಾಡಿಕೊಂಡ ಬಂದವರನ್ನ ಯಾಕೆ ಬಿಟ್ರಿ ಡಿವೈಎಸ್ಪಿ ನಂದಾರೆಡ್ಡಿ ಮೊದಲು ಸಸ್ಪೆಂಡ್ ಮಾಡಿ ಅಂತಾ ಆಗ್ರಹಿಸಿದ್ದಾರೆ.
ಇದು ಗಾಂಜಾ ಗಮ್ಮತ್ತಿನಲ್ಲಿ ನಡೆದಿದ್ದು. ಡಿಕೆ ಶಿವಕುಮಾರ ಟಾರ್ಗೆಟ್ ಮಾಡಿದ್ದು ಎಲ್ಲ ನಾಟಕ ಅಂತಾ. ಪಾರ್ಟ್ ಟೈಂ ಹೋಂ ಮಿನಿಸ್ಟರ್. ಫುಲ್ ಮಿನಿಸ್ಟರ್ ಆಗಿದ್ರೆ ಇಲ್ಲಿಗೆ ಬರ್ತಿದ್ರು. ಎಲ್ಲ ಎಂಎಲ್ ಗಳು, ಎಲ್ಲ ಮುನಿಸ್ಟರು ಹೋಂ ಮಿನಿಸ್ಟರೇ. ಈ ರೀತಿ ಮಾಡಿದ್ರೆ ಕಾನೂನು ಸುವ್ಯವಸ್ಥೆ ಇರುತ್ತಾ. ಒಬ್ಬ ಶಾಸಕ ಆಗೋಕೆ ಯೋಗ್ಯತೆ ಇದೆಯಾ ಆ ವ್ಯಕ್ತಿಗೆ ಎಂದಿದ್ದಾರೆ.
ಇನ್ನು ಶಾಸಕ ನಾರಾಭರತ್ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಮನೆನಾ ಸುಟ್ಟು ಹಾಕ್ತೀನಿ ಅಂತಾನೆ. ತಾಳ್ಮೆ ಕೆಟ್ರೆ ಬಳ್ಳಾರಿನೇ ಉಳಿಯೋಲ್ಲ ಅಂತೀರಿ. ಜನ್ರು ನಮಗೆ ಓಟು ಹಾಕುವ ದೇವರು. ಅವರ ಬಗ್ಗೆ ಹೀಗೆ ಹೇಳ್ತಾರೆ. ಕಾಂಗ್ರೆಸ್ ನೀತಿ ನಿಯಮಗಳು ಇದ್ರೆ, ಶಾಸಕನನ್ನ ಮೊದಲು ಸಸ್ಪೆಂಡ್ ಮಾಡಬೇಕು. ಜನ್ರು ನಿಮ್ಮದು, ಕರ್ಕೊಂಟು ಬಂದವ್ರು ನೀವು, ಗನ್ ಮ್ಯಾನ್ ಗಳು ನಿಮ್ಮವ್ರು.. ಸತ್ತೋವ್ರು ನಿಮ್ಮವ್ರು. ಆದ್ರೆ ಎಫ್ಐಆರ್ ಮಾತ್ರ ನಮ್ಮ ಮೇಲೆ ಹಾಕೋದು ಎಷ್ಟು ಸರಿ. ಎಣ್ಣೆ ನಿಮ್ದು ಅಂತಾ ಹಾಡು ಹಾಡಿ ವ್ಯಂಗ್ಯವಾಡಿದ್ದಾರೆ.
ಪೊಲೀಸ್ ಇಲಾಖೆ ಈ ಥರ ಮಾಡಿದ್ರೆ ರಾಜ್ಯ ಈ ದೇಶ ಉಳಿಯೋಲ್ಲ. ಸರ್ಕಾರ ಶಾಸಕ ನಿಮ್ಮವ್ರು ಆಗಿರೋದರಿಂದ ಪೊಲೀಸ್ರು ಉಳಿಸೋಕೆ ಹೀಗೆ ಮಾಡೋದಾ. ಸರ್ಕಾರ ಗನ್ ಮ್ಯಾನ್ ಕೊಟ್ಟಿದ್ರೆ ಅದನ್ನ ಬಳಸಿದ್ರೆ ಗೊತ್ತಾಗುತ್ತೆ. ಖಾಸಗಿ ಅವ್ರು ಗನ್ ಇಟ್ಕೊಂಡ್ರೆ ಹೇಗೆ ಗೊತ್ತಾಗುತ್ತೆ. ಒಬ್ನ ವ್ಯಕ್ತಿ ಬಂದು ಚೇರ್ ಹಾಕಿಕೊಂಡು ಬಂದು ಬ್ಯಾನರ್ ಹಾಕಿಸ್ತಾರೆ.. ಐದಾರು ಸಾವಿರ ಜನ ಕರ್ಕೊಂಡು ಬಂದಿದ್ದೇನೆ ಅಂತಾ ಹೇಳ್ತಾರೆ ಎಂದ ಅವರು ನಾನು ಹುಟ್ಟುವಾಗಲೇ ಶ್ರೀಮಂತ ಎಂಬ ನಾರಾಭರತ್ ಹೇಳಿಕೆ ವಿಚಾರದ ಬಗ್ಗ ಮಾತನಾಡಿನೀವು ಹೃದಯ ಶ್ರೀಮಂತಿಕೆ ರಾಜಕಾರಣ ಮಾಡಬೇಕು. ಆಡಂಬರದ ರಾಜಕಾರಣ ಅಲ್ಲ. ಗುಂಡು ಹೊಡೆದು ಗುಂಡು ಹಾಕೋಕೆ ರಾಜಕಾರಣಕ್ಕೆ ಬರಬೇಕು. ಸರ್ಕಾರ ಇದರ ಹೊಣೆ ಹೊರಬೇಕು. ಗಲಾಟೆ ಪ್ರಕರಣವನ್ನು ಸಿಬಿಐಗೆ ತನಿಖೆಗೆ ವಹಿಸಬೇಕು. ಇಲ್ಲದೇ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆ ಆಗಬೇಕು ಅಂತಾ ಆಗ್ರಹಿಸಿದ್ದಾರೆ. ರಿಪಬ್ಲಿಕ್ ಆಫ್ ಅಂತಾ ತೊಡೆ ತಟ್ಟಿ ಬಳ್ಳಾರಿಗೆ ಬಂದ್ರಿ ಸಿಎಂ ಅವ್ರೇ..ಈ ರೀತಿ ಗುಂಡು ಹಾರಿಸೋದು ಸಿನಿಮಾದಲ್ಲಿ ನೋಡಿದ್ವಿ, ನೇರವಾಗಿ ನೋಡಬೇಕು ಅಂದ್ರೆ ಬಳ್ಳಾರಿಗೆ ಬರಬೇಕು ಹಾಗಾಗಿದೆ.ಮುಖ್ಯಮಂತ್ರಿಗಳು ನಿಸ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಅಂತಾ ಆಗ್ರಹಿಸಿದ ಅವರು ಈವರೆಗೂ ಮಾಜಿ ಸಚಿವರಾದ ಜನಾರ್ದನರೆಡ್ಡಿ, ಶ್ರೀರಾಮುಲು ಅವರಿಗೆ ಭದ್ರತೆ ಬೇಕಾ ಅಂತಾ ಒಬ್ರು ಆದ್ರೂ ವಿಚಾರಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.











