ಮನೆ Latest News ಬಡವರ ಬದುಕಿನ ಗ್ಯಾರಂಟಿಯನ್ನೇ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ : ಪ್ರಿಯಾಂಕ್ ಖರ್ಗೆ ಹೇಳಿಕೆ

ಬಡವರ ಬದುಕಿನ ಗ್ಯಾರಂಟಿಯನ್ನೇ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ : ಪ್ರಿಯಾಂಕ್ ಖರ್ಗೆ ಹೇಳಿಕೆ

0

 

ಬೆಂಗಳೂರು; ಬಡವರ ಬದುಕಿನ ಗ್ಯಾರಂಟಿಯನ್ನೇ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ  ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ರಾಮ್ ಜಿ ಬಿಲ್ ಮೂಲಕ ಮೂರು ಹಕ್ಕುಗಳನ್ನು ಕೇಂದ್ರ ಕಸಿದುಕೊಂಡಿದೆ. ವಿಕೇಂದ್ರೀಕೃತ ವ್ಯವಸ್ಥೆಯನ್ನೇ ಹಾಳುಗೆಡವಿದ್ದಾರೆ. ದ್ರ ಸರ್ಕಾರ ನೋಟೀಫೈ ಮಾಡಿದರೆ ಮಾತ್ರ ಕೆಲಸ ಸಿಗುತ್ತದೆ. ಹಿಂದಿನ‌ ನರೇಗಾ ಯೋಜನೆಯಲ್ಲಿ ಯಾರು ಎಲ್ಲಿ ಬೇಕಾದರೂ ಕೆಲಸ ಮಾಡಬಹುದಿತ್ತು. ಆದರೆ ವಿಬಿಜಿ ರಾಮ್ ಜಿಯಲ್ಲಿ ನಿಗದಿತ ನೋಟೀಫೈ ಸ್ಥಳದಲ್ಲಿ ಮಾತ್ರ ಕೆಲಸ ಮಾಡಬಹುದು.೬೦ ದಿನ ಕೆಲಸಕ್ಕೆ ನಿಷೇಧ ಇದೆ ಹೊಸ ಯೋಜನೆಯಲ್ಲಿ .ಕೃಷಿ ಕಾರ್ಮಿಕರು ಸಿಗಲ್ಲ ಎನ್ನುವುದಕ್ಕೆ ಡೇಟಾ ಏನಿದೆ ಕೇಂದ್ರದ ಬಳಿ? ಎಂದು ಪ್ರಶ್ನಿಸಿದ್ದಾರೆ.

ಮೋದಿಯವರು ರಾತ್ರಿ ಕನಸು ಕಾಣ್ತಾರೆ, ಬೆಳಗ್ಗೆ ಬಿಲ್ ತರ್ತಾರೆ, ಸಂಜೆ ಪಾಸ್ ಮಾಡಿಕೊಳ್ತಾರೆ. ಇದನ್ನು ಎಲ್ಲ ರಾಜ್ಯಗಳು ತಲೆ ಅಲ್ಲಾಡಿಸಿ ಪಾಲಿಸಬೇಕಾ? ಎಂದು ಪ್ರಶ್ನಿಸಿದ ಅವರು ಮನರೆಗಾದಲ್ಲಿ ಕಾಂಟ್ರಾಕ್ಟ್ ರ ಎಂಬ ಪದವೇ ಇರುತ್ತಿರಲಿಲ್ಲ. ಇದರಲ್ಲಿ ಕಾಂಟ್ರಾಕ್ಟ್ರ ಬಳಿ ಹೋಗಿ ದುಡಿಯಬೇಕು. ಎಲ್ಲಾ ಪಂಚಾಯತ್ ಗಳಿಗೂ ಬರಲ್ಲ. ನೋಟಿಫೈ ಪಂಚಾಯತ್ ಗಳಿಗೆ ಸಿಗುತ್ತದೆ. ಅಂದರೆ ಎಲ್ಲವೂ ಅವರೇ ನಿರ್ಧಾರ ಮಾಡಬೇಕು.ಕೇಂದ್ರ ಸರ್ಕಾರಕ್ಕೆ ಕರ್ನಾಟಕದ ದುಡಿಮೆ ಬೇಕಾಗಿದೆ, ಕರ್ನಾಟಕದ ಟ್ಯಾಕ್ಸ್ ಬೇಕಾಗಿದೆ.ಕರ್ನಾಟಕದ ಪ್ರತಿಭೆ, ಸಾಮರ್ಥ್ಯ ಬೇಕಾಗಿದೆ. ನಿಮ್ಮ ವಿಕಸಿತ ಭಾರತ ನನಸು ಮಾಡಲು ಕನ್ನಡಿಗರು ಬೇಕಾಗಿದ್ದಾರೆ. ಕನ್ನಡಿಗರಿಗೆ ಕೊಡುವುದು ಚೊಂಬು ಎಂದು ಕೇಂದ್ರ ಸರ್ಕಾರದ  ಮೇಲೆ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ನಿಮಗೆ ನಾಥುರಾಂ ಇಷ್ಟನಾ? ವಿಧೇಯಕಕ್ಕೆ ವಿಬಿ ಜಿ ನಾಥೂರಾಂಜಿ ಅಂತನೇ ಹೆಸರಿಡಿ. ಆದರೆ ಗ್ರಾಮೀಣ ಜನರಿಗೆ ಜೀವನೋಪಾಯದ ಉದ್ಯೋಗ ನೀಡಿ.  Its Just Matter of Time. ರೈತರ ಬಿಲ್ ಹಿಂಪಡೆದ ಹಾಗೇ ವಿಬಿ ಗ್ರಾಮ್ ಜಿ ಬಿಲ್ ಕೂಡ ಹಿಂಪಡೆಯುತ್ತಾರೆ ಹಿಂಪಡೆಯಬೇಕಾಗುತ್ತದೆ ಎಂದಿದ್ದಾರೆ.