ಮನೆ Latest News ಕೆಪಿಸಿಸಿಯಲ್ಲಿ ಕಸ ಗುಡಿಸಿ, ಪೋಸ್ಟರ್ ಅಂಟಿಸಿರುವ ಬಗ್ಗೆ ಡಿಕೆಶಿ ಹೇಳಿಕೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ...

ಕೆಪಿಸಿಸಿಯಲ್ಲಿ ಕಸ ಗುಡಿಸಿ, ಪೋಸ್ಟರ್ ಅಂಟಿಸಿರುವ ಬಗ್ಗೆ ಡಿಕೆಶಿ ಹೇಳಿಕೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ

0

ಬೆಂಗಳೂರು; ಕೆಪಿಸಿಸಿಯಲ್ಲಿ ಕಸ ಗುಡಿಸಿ, ಪೋಸ್ಟರ್ ಅಂಟಿಸಿರುವ ಬಗ್ಗೆ ಡಿಕೆಶಿ ಹೇಳಿಕೆ ಬಗ್ಗೆ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಡಿ.ಕೆ ಶಿವಕುಮಾರ್ ಕಾಂಗ್ರೆಸ್ ನ ಹಿರಿಯ ನಾಯಕರು. ಅವರು ನಡೆದು ಬಂದ ಹಾದಿಯ ಬಗ್ಗೆ ಮಾತನ್ನಾಡಿದ್ದಾರೆ. ಆರಂಭದ ದಿನದಿಂದಲೂ ಅವರು ನಡೆದು ಬಂದಿರೋದನ್ನ ಹೇಳಿದ್ದಾರೆ.ಲಕ್ಷಾಂತರ ಜನರು ಕೆಲಸ ಮಾಡಿದರಿಂದಲೇ ಅಲ್ಲವಾ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿರೋದು.ಹಾಗಾಗಿ ಯಾರನ್ನೂ ಕಡೆಗಣಿಸೋದು ಸರಿಯಲ್ಲ.ಯಾರು ಎಷ್ಟು ಕೆಲಸ ಮಾಡಿದ್ದಾರೆ, ಅವರ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿದೆ ಅಲ್ಲವಾ ?. ಕೆಲವರಿಗೆ ಅವಕಾಶ ತಡವಾಗಿ ಸಿಗಬಹುದು, ಇನ್ನು ಕೆಲವರಿಗೆ ಬೇಗ ಸಿಗಬಹುದು ಎಂದಿದ್ದಾರೆ.

ರಾಹುಲ್ ಭೇಟಿಗೆ ಸಮಯಾವಕಾಶ ಸಿಗದ ವಿಚಾರದ ಬಗ್ಗೆ ಮಾತನಾಡಿದ ಅವರು ನೋಡಿ ರಾಹುಲ್ ಗಾಂಧಿಯವರು ದೆಹಲಿಯಲ್ಲಿ ಇರಲೇ ಇಲ್ಲ. ಅಷ್ಟಕ್ಕೂ ಡಿಸಿಎಂ ರಾಹುಲ್ ಗಾಂಧಿಯವರ ಭೇಟಿಗೆ ಸಮಯಾವಕಾಶವನ್ನೇ ಕೇಳಿರಲಿಲ್ಲ. ದೆಹಲಿಗೆ ಹೋಗಿದಕ್ಕೆಲ್ಲಾ ರಾಹುಲ್ ಗಾಂಧಿಯವರ ಭೇಟಿಗೆ ಹೋಗುತ್ತಾರಾ ?. ಅವರು ರಾಹುಲ್ ಗಾಂಧಿಯವರ ಭೇಟಿಗೆ ಸಮಯಾವಕಾಶವನ್ನೇ ಕೇಳಿಲ್ಲವಲ್ಲ. ಅವರು ಕೇಳಿಯೂ ಇರಲಿಲ್ಲ, ದೆಹಲಿಯಲ್ಲಿ ಇರಲೂ ಇಲ್ಲ. ನಾನೂ ಕೂಡ ದೆಹಲಿಗೆ ಹೋಗುತ್ತೇನೆ, ಅದು ಬೇರೆ ಬೇರೆ ಕೆಲಸಗಳಿಗೆ ಹೋಗುತ್ತೇನೆ.ರಾಹುಲ್ ಗಾಂಧಿಗೆ ಮಾತ್ರ ಭೇಟಿಗೆ ಅನ್ನೋದು ಸರಿಯಲ್ಲ ಎಂದು ಹೇಳಿದ್ದಾರೆ.

ಸಿಎಂ ಕುರ್ಚಿ ಕಿತ್ತಾಟದಿಂದ ಸರ್ಕಾರಕ್ಕೆ ಡ್ಯಾಮೇಜ್ ಎಂಬ ಚರ್ಚೆ ಬಗ್ಗೆ ಮಾತನಾಡಿದ ಅವರು ಪಕ್ಷದಲ್ಲಿನ ಗೊಂದಲ ಸರಿಯಲ್ಲ .ಬೇರು ಮಟ್ಟ ಇರಬಹುದು, ಪಾರ್ಟಿ, ಸರ್ಕಾರ ಯಾವುದೇ ಹಂತದಲ್ಲಾದರೂ ಇರಬಹುದು. ಗೊದಲಗಳು ಇರುವುದು ಸರಿಯಲ್ಲ. ಒಂದು ಮನೆ ಅಂದಮೇಲೆ ಗೊಂದಲ ಇದ್ದೇ ಇರುತ್ತೆ ಅಲ್ಲವಾ ?. ಎಲ್ಲರ ಮನೆಯ ದೋಸೆನೂ ತೂತೆ.ನಾವು ಅದನ್ನ ಬಗೆಹರಿಸಿಕೊಳ್ತೇವೆ. ಬಿಜೆಪಿಯವರು ಯಾಕೆ ಟೆನ್ಷನ್ ತೆಗೆದುಕೊಳ್ತಿದಾರೋ ಗೊತ್ತಿಲ್ಲ. ಈಗಾಗಲೇ ಹೈಕಮಾಂಡ್ ನಿರ್ಧಾರ ಮಾಡುವುದಾಗಿ ಹೇಳಿದೆ. ಎಲ್ಲರೂ ಕೂಡ ಹೈಕಮಾಂಡ್ ಮಾತಿಗೆ ಒಪ್ಪಿದ್ದಾರೆ ಅಲ್ಲವಾ ?. ಆದರೂ ನಾವು ಕೂಡ ಪದೇ ಪದೇ ಹೈಕಮಾಂಡ್ ನತ್ತ ಬೊಟ್ಟು ಮಾಡೋದು ಸರಿಯಲ್ಲ. ಮಲ್ಲಿಕಾರ್ಜುನ ಖರ್ಗೆಯವರು ಸ್ಪಷ್ಟವಾಗಿ ಹೇಳಿದ್ದಾರೆ. ಕರೆದು ಮಾತನ್ನಾಡಿಸುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದ್ದಾರೆ.