ರಾಮನಗರ: ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಮಾಗಡಿ ಶಾಸಕ ಬಾಲಕೃಷ್ಣ ಅವರು ನಾಲಿಗೆ ಹರಿ ಬಿಟ್ಟಿದ್ದಾರೆ. ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಶಾಸಕ ಬಾಲಕೃಷ್ಣ ನಾಲಿಗೆ ಹರಿ ಬಿಟ್ಟಿದ್ದಾರೆ.
ಮಾಗಡಿ ತಹಶೀಲ್ದರ್ ಡಿ ಪಿ ಶರತ್ ಕುಮಾರ್ ವಿರುದ್ಧ ಶಾಸಕ ಹೆಚ್ ಸಿ ಬಾಲಕೃಷ್ಣ ಗರಂ ಆಗಿದ್ದಾರೆ. ಮಾಗಡಿಯ ತಾಲೂಕು ಪಂಚಾಯತಿಯಲ್ಲಿ ನಡೆದ ಸಭೆಯಲ್ಲಿ ಬಾಲಕೃಷ್ಣ ರೋಷಾವೇಷ ತೋರಿಸಿದ್ದಾರೆ. ಯಾವ ಅಧಿಕಾರಿ ಕೆಲಸ ಮಾಡಲ್ಲ ಅವರ ಹೆಸರು ಬರೆಯಿರಿ.ನಾನು ಎಸಿ ಕರೆಸುತ್ತೇನೆ. ತಿಂಗಳಿಗೆ ಒಮ್ಮೆ ಕಂಪ್ಲೇಟ್ ಬಾಕ್ಸ್ ಓಪನ್ ಮಾಡೋಣಾ. ಜನರಿಗೆ ನೀವು ಉತ್ತರ ಹೇಳಿ.ಇಲ್ಲವಾದರೇ ಜನರಿಂದ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದು ಸರ್ಕಾರಿ ಅಧಿಕಾರಿ ಅನ್ನೋದನ್ನು ಮರೆತು ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ರು ಪರವಾಗಿಲ್ಲ. ಜನ ಚಪ್ಪಲಿ ತಗೊಂಡು ಹೊಡೆಯುತ್ತಾರೆ. ಇಲ್ಲ ನಿನಗೆ ಹೊಡೆಯುತ್ತಾರೆ . ಇಲ್ಲ ನನಗೆ ಹೊಡೆಯುತ್ತಾರೆ. ನಿನ್ನ ಕೈಯಲ್ಲಿ ಕೆಲಸ ಮಾಡಿಸಲು ಆಗಲ್ಲ ಅಂದರೆ ನನಗೆ ಹೊಡೆಯುತ್ತಾರೆ. ಇಲ್ಲ ನಿನಗೆ ಹೊಡೆಯುತ್ತಾರೆ .ಮಾತನಾಡದೇ ನಿಮಗೆ ಮುತ್ತು ಇಕ್ಕುತ್ತಾರಾ. ನಾಚಿಕೆ ಆಗಲ್ವಾ ನಿಮಗೆ.ಜನರನ್ನ ಯಾಕೆ ಸಾಯಿಸುತ್ತಿರಾ.ಕಿರಿ ವಯಸ್ಸಿನ ಅಧಿಕಾರಿಗಳು ಹೇಗೆ ಇರಬೇಕು. ತಹಶೀಲ್ದರ್ ಆದವರು ಶಾಸಕ ಕೂಡ ಆಗಿದ್ದಾರೆ. ಡಿಸಿ ರವಿ ಸಾವನ್ನಪ್ಪಿದ ಜನ ಅತ್ತರು.ನಿಮಗೆ ಆಳುತ್ತಾರಾ, ತೊಲಗಿ ಹೋದ ಎನ್ನುತ್ತಾರೆ ಎಂದು ತಹಶೀಲ್ದರ್ ವಿರುದ್ಧ ಶಾಸಕ ಬಾಲಕೃಷ್ಣ ಆಕ್ರೋಶ ಹೊರ ಹಾಕಿದ್ದಾರೆ,










