ಬೆಳಗಾವಿ; ಸಭಾಧ್ಯಕ್ಷರು ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿದ್ದಾರೆ.
ಬೆಳಕಗಾವಿಯಲ್ಲಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವಿರೋಧಿ ನಡೆ ಸ್ಪೀಕರ್ ಅವರದ್ದು. ಸಭಾಧ್ಯಕ್ಷರು ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಕರಾವಳಿ ಜನಪ್ರತಿನಿಧಿಗಳ ಬಗ್ಗೆ ಭೈರತಿ ಸುರೇಶ್ ಮಾತನಾಡಿದ್ದು ಅಕ್ಷಮ್ಯ. ಸ್ಪೀಕರ್ ಸ್ಥಾನಕ್ಕೂ ಅಗೌರವ ತರುವ ಕೆಲಸ ಮಾಡಿದ್ದಾರೆ. ದ್ವೇಷ ಭಾಷಣ ಬಿಲ್ ಸಮಗ್ರ ಚರ್ಚೆಗೆ ಅವಕಾಶ ನೀಡಬೇಕು. ಪಾಕಿಸ್ತಾನ್ ಜಿಂದಾಬಾದ್ ಅಂದಾಗ ಎಲ್ಲೋಗಿತ್ತು ನಿಮ್ಮ ತಾಕತ್ತು?.ಲಜ್ಜೆಗೆಟ್ಟ ಸರ್ಕಾರ. ದ್ವೇಷ ಭಾಷಣ ಬಿಲ್ ಅಲ್ಲ ಇದು ದ್ವೇಷ ವಿರೋಧ ಪಕ್ಷ ಬಿಲ್ ಇದು. ಪತ್ರಿಕಾರಂಗದ ಧ್ವನಿಯನ್ನು ಅಡಗಿಸುವ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ. ದುಸ್ಸಾಹಸಕ್ಕೆ ಕಾಂಗ್ರೆಸ್ ಹೊರಟಿದೆ ಇದನ್ನು ನಾವು ಸಹಿಸೋದಿಲ್ಲ ಎಂದು ಅವರು ಹೇಳಿದ್ದಾರೆ.
ಡಿ ಕೆ ವಕುಮಾರ್ ಮನಬಂದಂತೆ ಮಾತನಾಡಿದ್ದಾರೆ. ಅಧಿಕಾರದ ಮದ ಮಾತನಾಡಿಸಿರಬಹುದು. ಈ ಸರ್ಕಾರದ ಯೋಗ್ಯತೆಗೆ ಒಂದು ಗುಂಡಿ ಮುಚ್ಚೋದಕ್ಕೂ ಸಾಧ್ಯ ಆಗಿಲ್ಲ. ಡಿ ಕೆ ಶಿವಕುಮಾರ್ ಭ್ರಷ್ಟಾಚಾರ ಬಗ್ಗೆ ಮಾತನಾಡದಿದ್ದರೆ ಒಳ್ಳೆಯದು. ಭ್ರಷ್ಟಾಚಾರದ ಪಿತಾಮಹ ಯಾರು ಎಂದು ಕೇಳಿದರೆ ರಾಜ್ಯದಲ್ಲಿ ಡಿಕೆಶಿ ಹೆಸರೇ ಹೇಳ್ತಾರೆ.ಯಾವ ಪುರುಷಾರ್ಥಕ್ಕೆ ಮಾತನಾಡ್ತಿದ್ದೀರಿ. ರಾಜ್ಯದಲ್ಲಿ ೨.೫ ಲಕ್ಷ ಹುದ್ದೆ ಹಾಗೇಯೇ ಉಳಿದುಕೊಂಡಿದೆ.ಈ ಸರ್ಕಾರ ಬಂದಾಗಿನಿಂದ ಹುದ್ದೆಗಳನ್ನು ಭರ್ತಿ ಮಾಡಲು ಆಗಿಲ್ಲ. ಸಿಎಂ ತವರು ಜಿಲ್ಲೆಯಲ್ಲಿ ಚೈತ್ರ ಬಿ ಕುರುಬುರು ಗ್ರಾಮ ೩೨ ಬಾರಿ ಕೋಕೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ನಾಚಿಕೆಗೇಡಿನ ಈ ಸರ್ಕಾರ ಅವಳಿಗೆ ಕೇವಲ ೫ ಲಕ್ಷ ಬಹುಮಾನ ಕೊಟ್ಟಿದ್ದಾರೆ. ಸರ್ಕಾರದ ಮುಖಕ್ಕೆ ಆಕೆ ಹಣವನ್ನು ವಾಪಸ್ ಬಿಸಾಡಿದ್ದಾಳೆ.ಖಜಾನೆ ಖಾಲಿಯಾಗಿದ್ದಕ್ಕೆ ಈ ಸರಕಾರ ಹೀಗೆ ಮಾಡ್ತಾ ಇದೆ.
ಇಂಥ ಕೆಟ್ಡ ಪರಿಸ್ಥಿತಿ ಹಿಂದೆ ಯಾವ ಸರ್ಕಾರಕ್ಕೂ ಬಂದಿರಲಿಲ್ಲ.ಯಾರಿಗೋ ದಬ್ಬಾಳಿಕೆ ಮಾಡಿದಂತೆ ನನಗೆ ಮಾಡುವುದಕ್ಕೆ ಬರಬೇಡಿ. ನಾನು ಒಬ್ಬ ಪ್ರತಿನಿಧಿ, ಒಂದು ಪಕ್ಷದ ರಾಜ್ಯಾಧ್ಯಕ್ಷ. ಯಡಿಯೂರಪ್ಪ ವಿರುದ್ದ ಹೇಗೆ ಷಡ್ಯಂತ್ರ ಮಾಡಿದರೋ ಅದನ್ನೆಲ್ಲ ಈಗ ಮಾಡಲು ಬರಬೇಡಿ. ಡಿಕೆಶಿವಕುಮಾರ್ ರಿಂದ ನಾನು ಪಾಠ ಕಲಿಯೋ ಅವಶ್ಯಕತೆ ಇಲ್ಲ. ನನ್ನ ಬಗ್ಗೆ ಮಾತಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ನಾವೇನು ಹೆದರಿಕೊಂಡು ಓಡೋಗ್ತಿದ್ದೀವಾ.ಇವರ ಯೋಗ್ಯತೆ ಏನು ಎನ್ನೋದು ಇಡೀ ದೇಶಕ್ಕೆ ಗೊತ್ತಿದೆ ಎಂದಿದ್ದಾರೆ.










