ಬೆಂಗಳೂರು: ಹೊಸ ಪಕ್ಷ ಸ್ಥಾಪಿಸುವುದಾಗಿ ಎಂದು ಸಿ. ಎಂ ಇಬ್ರಾಹಿಂ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನ ಹಲವರು ನನ್ನ ಸಂಪರ್ಕದಲ್ಲಿ ಇದ್ದಾರೆ. ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನ ಹಲವರು ನನ್ನ ಸಂಪರ್ಕದಲ್ಲಿ ಇದ್ದಾರೆ. ಡಿಸೆಂಬರ್ ೧೪ಕ್ಕೆ ನಮ್ಮ ಪಕ್ಷದಿಂದ ಕಲಬುರಗಿಯಲ್ಲಿ ಸಭೆ ಕರೆದಿದ್ದೇವೆ. ನಮ್ಮ ಪಕ್ಷದ ಚಿಹ್ನೆ ಬಗ್ಗೆ ನಿರ್ಧರಿಸಲಾಗುತ್ತದೆ.ಕಾಂಗ್ರೆಸ್ ಬಿಜೆಪಿ ಜೆಡಿಎಸ್ ನ ಹಲವರು ನನ್ನ ಸಂಪರ್ಕದಲ್ಲಿ ಇದ್ದಾರೆ ಎಂದಿದ್ದಾರೆ.
ನಿಮ್ಮ ಪಾರ್ಟಿಗೆ ಸೇರಲು ಸಿದ್ಧರಿದ್ದೇವೆ ಎಂದು ಹೇಳಿದ್ದಾರೆ. ನಾವು ಬಸವಣ್ಣನವರ ಮತ್ತು ಅಂಬೇಡ್ಕರ್ ಸಿದ್ಧಾಂತದಂತೆ ನಡೆಯುತ್ತೇವೆ. ಸಿಎಂ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತಾಗ ಬಾದಾಮಿಗೆ ಕರೆದುಕೊಂಡು ಹೋಗಿದ್ದು ನಾನೇ. ಬಾದಾಮಿಯಲ್ಲಿ ಸಿದ್ದರಾಮಯ್ಯರನ್ನು ಗೆಲ್ಲಿಸಿದ್ದು ನಾನೇ. ಇಂದು ಸಮರ್ಥ ಆಡಳಿತ ಪಕ್ಷವೂ ಇಲ್ಲ, ಸಮರ್ಥವಾದ ವಿಪಕ್ಷವೂ ಇಲ್ಲ ಎಂದು ಹೇಳಿದ್ದಾರೆ.
ಇಂದಿನ ಸರ್ಕಾರದ ಪರಿಸ್ಥಿತಿ ಪಾಂಚಾಲಿಯ ರೀತಿ ಆಗಿದೆ.ಖುರ್ಚಿಗಾಗಿ ಕಿತ್ತಾಟ ನಡೆಯುತ್ತಿದೆ. ರೈತರಿಗಾಗಿ, ಕಾರ್ಮಿಕರಿಗಾಗಿ ಧ್ವನಿ ಎತ್ತಲು ತೃತೀಯ ರಂಗ ಬರಬೇಕಿದೆ. ಕಾಂಗ್ರೆಸ್, ಬಿಜೆಪಿ ಎರಡಕ್ಕೂ ರಾಜ್ಯದ ಜನರ ಪರ ಕೆಲಸ ಮಾಡಲು ಆಗುತ್ತಿಲ್ಲ.ಕಾಂಗ್ರೆಸ್ ಸರ್ಕಾರ ಬಂದು ೨ ವರ್ಷವಾದರೂ ಭಾಗ್ಯಗಳ ಘೋಷಣೆ ಬಿಟ್ಟು ಬೇರೆ ಏನೂ ಮಾಡಿಲ್ಲ. ಕರ್ನಾಟಕವನ್ನು ದೇವದಾಸಿ ಸ್ಥಿತಿಗೆ ತಂದಿಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಕುರ್ಚಿ ಕಿತ್ತಾಟದಿಂದ ಕರ್ನಾಟಕ ಇಬ್ಭಾಗವಾಗುತ್ತದೆ. ಯಡಿಯೂರಪ್ಪ ಟಿಪ್ಪು ಜಯಂತಿ ಮಾಡಿದ್ರು ಸಿದ್ದರಾಮಯ್ಯಗೆ ಟಿಪ್ಪು ಜಯಂತಿ ಮಾಡಲಾಗುತ್ತಿಲ್ಲ. ರಾಜ್ಯದಲ್ಲಿ ಎಲ್ಲದರ ಬೆಲೆಯೂ ಹೆಚ್ಚಳವಾಗಿದೆ. ರೈತರಿಗೆ ಸಿಗಬೇಕಾದ ಬೆಂಬಲ ಬೆಲೆ ಸಿಗುತ್ತಿದೆ. ಎಲ್ಲರನ್ನೂ ನೋಡಿ ಜನ ಬೇಸತ್ತಿದ್ದಾರೆ. ನಮಗೂ ಒಂದು ಅವಕಾಶ ಕೊಟ್ಟು ನೋಡಿ. ಸಿಎಂ ಕುರ್ಚಿಯನ್ನು ಪಾಂಚಾಲಿ ರೀತಿ ಮಾಡಬೇಡಿ. ಒಮ್ಮೆ ಒಬ್ಬರು ಗಂಡ ಅಂತ ಆದಾಗ ಅವರನ್ನೇ ಬಿಟ್ಟುಬಿಡಿ. ಸಿಎಂ ಆದವರನ್ನು ಬಿಟ್ಟು ಬಿಡಬೇಕು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿಗೆ ಇಂದಿರಾ ಗಾಂಧಿಯ ಶಕ್ತಿ ಬರಲಿಲ್ಲ. ಮೋದಿಗೆ ಅಟಲ್ ಬಿಹಾರಿ ವಾಜಪೇಯಿಯವರ ಶಕ್ತಿ ಬರಲಿಲ್ಲ. ಮೋದಿ ಬಾಯ್ಬಿಟ್ಟರೇ ಬಾಯಿ ಬೆಹನೋ ಎಂದು ಹೇಳುತ್ತಾ ಓಡಾಡ್ತಾರೆ.ನಾನು ಜನರಿಗಾಗಿ ಮೂರನೇ ಶಕ್ತಿಯನ್ನು ತರಲು ಸಿದ್ಧನಾಗಿದ್ದೇನೆ. ಮುಂಬರುವ ಸ್ಥಳೀಯ ಚುನಾವಣೆಗಳು, ವಿಧಾನಸಭೆ, ಲೋಕಸಭೆ ಚುನಾವಣೆಗೆ ಹೋಗ್ತಿದ್ದೇವೆ ಎಂದು ತಿಳಿಸಿದ್ದಾರೆ.











