ಬೆಳಗಾವಿ; ಡಿಸಿಎಂ ಡಿ ಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ವಿಚಾರಕ್ಕೆ ಸಂಬಂಧಪಟ್ಟಂತೆ ಬಿಜೆಪಿಯವರು ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಡಳಿತದ ಪಕ್ಷದ ಡಿನ್ನರ್ ಮೀಟಿಂಗ್ ಗಳೇ ನಮ್ಮ ರಾಜ್ಯ ಕುಲಗೆಡಿಸಿವೆ. ಪದೇ ಪದೇ ಡಿನ್ನರ್ ಟಿಂಗ್ ಮಾಡಿಕೊಂಡು, ಡಿನ್ನರ್ ಮೀಟಿಂಗ್ ಭರಾಟೆಯಲ್ಲಿ ಆಡಳಿತ ಸಂಪೂರ್ಣವಾಗಿ ಮರೆತಿದ್ದಾರೆ ಎಂದಿದ್ದಾರೆ.
ರಾಜ್ಯದ ರೈತರ ವಿಚಾರದ ಬಗ್ಗೆ ಇವರು ಸಮಯ ಕೊಡಲಿಲ್ಲ. ಡಿನ್ನರ್ ಮೀಟಿಂಗ್ ನಲ್ಲಿ ರೈತರ ವಿಚಾರ ಚರ್ಚೆ ಮಾಡ್ತಿಲ್ಲ. ಡಿ ಕೆ ಶಿ ತಂಡ ಸಿದ್ದರಾಮಯ್ಯನವರನ್ನ ಕೆಳಗೆ ಇಳಿಸೋದು ಹೇಗೆ ಅಂತಾ ಮಾಡ್ತಿದ್ದಾರೆ. ಅಧಿವೇಶನ ಹೋಗುವ ಮುಂಚೆ ನಾಯಕತ್ವ ಗೊಂದಲ ಬಗೆ ಹರಿಸಿಕೊಳ್ಳಿ. ಮುಖ್ಯಮಂತ್ರಿ ಕಾಂಗ್ರೆಸ್ ಮುಖ್ಯಮಂತ್ರಿ ಅಲ್ಲಾ ರಾಜ್ಯದ ಮುಖ್ಯಮಂತ್ರಿ. ನಾಯಕತ್ವದ ಗೊಂದಲದ ನಡುವೆ ಚಳಿಗಾಲದ ಅಧಿವೇಶನ ಯಾವ ಪುರುಷಾರ್ಥಕ್ಕೆ ಮಾಡ್ತಿದಿರಿ. ಇಲ್ಲಿಗೂ ಬಂದೂ ಡಿನ್ನರ್ ಮೀಟಿಂಗ್ ಮಾಡ್ತಿರೋದು ಪ್ರಜಾಪ್ರಭುತ್ವಕ್ಕೆ ಮಾಡ್ತಿರೋ ಅಪಮಾನ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆರ್.ಅಶೋಕ್ ಒಬ್ಬರನ್ನೊಬ್ಬರು ನೋಡಲಾರದ ಪರಿಸ್ಥಿತಿಯಲ್ಲಿ ಅಧಿವೇಶನ ನಡೆಸ್ತಿದಾರೆ. ಒಬ್ಬರ ಮನೆಯಲ್ಲಿ ಡಿನ್ನರ್..ಇನ್ಙೊಬ್ಬರ ಮನೆಯಲ್ಲಿ ಬ್ರೇಕ್ ಫಾಸ್ಟ್. ಮಕ್ಕಳೇ ಫೀಲ್ಡಿಗೆ ಇಳಿದಿದ್ದಾರೆ. ಜಮೀರ್ ಹೇಳ್ತಾರೆ… ಯಾರಿದ್ದಾರೆ ಗಂಡು.. ಬದಲಾವಣೆ ಮಾಡೋರು ಅಂತಾ. ಮಾಗಡಿ ಅವರು ಡಿಕೆ ಅವರ ಕೂಲಿಗೆ ಸಂಬಳಕೊಡಿ ಅಂತಾರೆ. ಇದೊಂದ ಎಮ್ಮೆ ಚರ್ಮದ ಸರ್ಕಾರ. ಕಾಂಗ್ರೆಸ್ ನಲ್ಲಿ ನಾಯಕತ್ವವೇ ಇಲ್ಲ. ಒಡೆದು ಹೋದ ಆಡಳಿತ ಪಕ್ಷವನ್ನ ಬೆಳಗಾವಿಯಲ್ಲಿ ನೋಡ್ತಿದೇವೆ. ನೀವು ಯಾರನ್ನಾದರೂ ಆಗಲಿ ತೀರ್ಮಾನ ಮಾಡಿಕೊಳ್ಳಿ. ಡಿಕೆ ಆದರೂ ಸರಿ.. ಸಿದ್ದರಾಮಯ್ಯ ಆದರೂ ಸರಿ. ನುಡಿದಂತೆ ನಡೀತೇವೆ ಅಂದಿದ್ರು.. ಈಗ ಮಾಡ್ತಿರೋದೇನು? ರಾಹುಲ್, ಖರ್ಗೆ, ಡಿಕೆ ಬಾಯಿ ಬಿಡ್ತಾನೇ ಇಲ್ಲ. ಎರಡೂ ವರ್ಷದ್ದು ಆಗಿರೋದು ನಿಜಾ. ಕಾಂಗ್ರೆಸ್ ಅದ್ವಾನ ಎದ್ದೋಗಿದೆ. ಹೊಸ ಕಾಂಗ್ರೆಸ್ ಗೆಲ್ಲುತ್ತೋ..ಹಳೆಯ ಕಾಂಗ್ರೆಸ್ ಗೆಲ್ಲುತ್ತೋ ನೋಡಬೇಕು ಎಂದಿದ್ದಾರೆ.











