ಮನೆ Latest News ಡಿ ಕೆ ಶಿವಕುಮಾರ್‌ ರನ್ನ ಸಿಎಂ ಎಂದು ಸಂಭೋದಿಸಿ ಪೋಸ್ಟ್ ಮಾಡಿದ ವಿಚಾರ; ಎಂ ‌ಎಲ್...

ಡಿ ಕೆ ಶಿವಕುಮಾರ್‌ ರನ್ನ ಸಿಎಂ ಎಂದು ಸಂಭೋದಿಸಿ ಪೋಸ್ಟ್ ಮಾಡಿದ ವಿಚಾರ; ಎಂ ‌ಎಲ್ ಸಿ ಚೆನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ

0

ಬೆಂಗಳೂರು; ಡಿ ಕೆ ಶಿವಕುಮಾರ್‌ ರನ್ನ ಸಿಎಂ ಎಂದು ಸಂಭೋದಿಸಿ ಪೋಸ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಎಂ ‌ಎಲ್ ಸಿ ಚೆನ್ನರಾಜ್ ಹಟ್ಟಿಹೊಳಿ ಸ್ಪಷ್ಟನೆ ನೀಡಿದ್ದಾರೆ.

ಬೆಳಗಾವಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು ಟೈಪಿಂಗ್ ಮಿಸ್ಟೇಕ್ ಆಗಿದೆ. ನಾವೇನ್ ಅದನ್ನ ಪೋಸ್ಟ್ ಮಾಡೊದಲ್ಲ ಹ್ಯಾಂಡಲರ್ ಇರ್ತಾರೆ. ಅವನು ನಿದ್ದೆಗಣ್ಣಲ್ಲಿ ಟೈಪ್ ಮಾಡಿದ್ದಾನೆ. ತಕ್ಷಣ ಅದನ್ನ ಸರಿಪಡಿಸಿದ್ದೇವೆ. ನಿಮ್ಮ ಆಸೆಯೂ ಅದೇ ಅಲ್ಲವಾ ಎನ್ನುವ ಪ್ರಶ್ನೆಗೆ ನಮ್ಮದೊಂದೆ ಅಲ್ಲಾ,ರಾಜ್ಯದ ಜನತೆಯ ಆಸೆ ಅದು. ನಾವು ಆ ಬಗ್ಗೆ ಮಾತಾಡಲ್ಲ. ಟೈಪಿಂಗ್ ಮಿಸ್ಟೇಕ್‌ಗೆ ಏನ್ ಮಹತ್ವ ಕೊಡಬೇಕಿಲ್ಲ ಎಂದಿದ್ದಾರೆ.

ನಿನ್ನೆ ಡಿಸಿಎಂ ಡಿಕೆಶಿ ಯನ್ನು ಮುಖ್ಯಮಂತ್ರಿ ಎಂದು ಸಂಭೋದಿಸಿ ಎಂಎಲ್ಸಿ ಚನ್ನರಾಜ ಹಟ್ಟಿಹೋಳಿ ಪೋಸ್ಟ್ ಮಾಡಿದ್ದರು.  ಡಿ  ಕೆಶಿವಕುಮಾರ್ ರನ್ನು ಬೆಳಗಾವಿಯಲ್ಲಿ ಚನ್ನರಾಜ್ ಸ್ವಾಗತಿಸಿದ್ದರು. ಬಳಿಕ ಮುಖ್ಯ ಮಂತ್ರಿಗಳಾದ ಡಿ ಕೆ ಶಿವಕುಮಾರ್ ಎಂದು ಚನ್ನರಾಜ್ ಪೋಸ್ಟ್ ಮಾಡಿದ್ದರು. ಇದೇ ವೇಳೆ ಮಾತನಾಡಿದ ಅವರು ಯತಿಂದ್ರ ಹೇಳಿಕೆ ಈ ಸಂದರ್ಭದಲ್ಲಿ ಅವಶ್ಯಕತೆ ಇರಲಿಲ್ಲ. ಹೈಕಮಾಂಡ್‌ ನಿರ್ಧಾರಕ್ಕೆ ಸಿಎಂ,ಡಿಸಿಎಂ ಬದ್ದ ಎಂದಿದ್ದಾರೆ. ಹೀಗಾಗಿ ನಿನ್ನೆಅವರು ಆ ಹೇಳಿಕೆ ಕೊಡುವ ಅವಶ್ಯಕತೆ ಇರಲಿಲ್ಲ. ಹೈಕಮಾಂಡ್‌ ಸಂದೇಶಕ್ಕೆ ನಾವು ಕಾಯಬೇಕಾಗಿದೆ. ಡಿ ಕೆ ಶಿವಕುಮಾರ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಅವರು ಎಲ್ಲಿಯೂ ಹೇಳಿಕೊಂಡಿಲ್ಲ ಸಿಎಂ ಆಗಬೇಕೆಂದು. ಇವತ್ತೇನಾದರೂ ಹೈಕಮಾಂಡ್‌ ‌ತ್ಯಾಗ ಮಾಡಬೇಕು ಎಂದರೆ ಅದಕ್ಕೂ ಸಿದ್ಧರಿದ್ದಾರೆ ಎಂದು ಹೇಳಿದ್ದಾರೆ.

ಅದು ಅವರ ಬಯಕೆಯಲ್ಲ ಕರ್ನಾಟಕದ‌ ಜನರ ಬಯಕೆ. ಸಿಎಲ್‌ಪಿ ಸಭೆಕರೆದಾಗ ಏನಾದರೂ ಬದಲಾವಣೆ ಬಯಸಿದ್ರೆ ಆ ನಿರ್ಧಾರಕ್ಕೆ ಎಲ್ಲರೂ ಬದ್ಧ ಎಂದು ಹೇಳಿದ್ದಾರೆ. ನಾವು ಆಶಾಭಾವನೆಯಲ್ಲಿದ್ದೇವೆ ಅಂದಿದ್ದಾರೆ.