ಮನೆ Latest News ಹೆಣ್ಣು ಮಕ್ಕಳು ಕೇಳಿದಾಗ ಇಲ್ಲ ಅನ್ನೋಕೆ ಆಗೊಲ್ಲ, ಮಹಿಳಾ ದಿನ ಅಂತ ಘೋಷಣೆ ಮಾಡ್ತೀವಿ, ನೋ...

ಹೆಣ್ಣು ಮಕ್ಕಳು ಕೇಳಿದಾಗ ಇಲ್ಲ ಅನ್ನೋಕೆ ಆಗೊಲ್ಲ, ಮಹಿಳಾ ದಿನ ಅಂತ ಘೋಷಣೆ ಮಾಡ್ತೀವಿ, ನೋ ಹಾಲಿ ಡೇ: ಸಿಎಂ ಸಿದ್ದರಾಮಯ್ಯ ಹೇಳಿಕೆ

0

ಬೆಂಗಳೂರು: ಇಂದು ಅಖಿಲ ಕರ್ನಾಟಕ ರಾಜ್ಯ ಸರ್ಕಾರಿ ಮಹಿಳಾ ನೌಕರರ ಬೆಂಗಳೂರು ಸಂಘದಿಂದ ಆಯೋಜನೆ ಮಾಡಲಾಗಿದ್ದ ಮಹಿಳಾ ಸಮ್ಮೇಳನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದಲ್ಲಿ‌ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್.ಕೆ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್, ದಿನೇಶ್ ಗುಂಡೂರಾವ್, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಮಾಜಿ ಶಾಸಕಿ ಸೌಮ್ಯಾ ರೆಡ್ಡಿ, ಎಂಎಲ್ಸಿ ಪುಟ್ಟಣ್ಣ ಸೇರಿದಂತೆ ಹಲವರು ಉಪಸ್ಥಿತಿರಿದ್ದರು.

ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಸಂತೋಷದಿಂದ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇನೆ. ಎಲ್ಲಾ ಮಹಿಳಾ‌ ನೌಕರರಿಗೆ ಸರ್ಕಾರ, ವೈಯಕ್ತಿಕವಾಗಿ ಧನ್ಯವಾದಗಳು. ಋತುಚಕ್ರದ ರಜೆ ಕೊಡಬೇಕು ಅಂತ ಶಿಕ್ಷಕರಿರು, ಮಹಿಳಾ ನೌಕರರ ಸಂಘ ಒತ್ತಡ ಮಾಡ್ತಿದ್ದರು. ಅಗತ್ಯ ಇದೆ ಎಂದು ಪರಿಗಣಿಸಿ ತಿಂಗಳಿಗೆ ಒಂದು ದಿನ ವೇತನ ಸಹಿತವಾದ ರಜೆ ಸರ್ಕಾರ ಘೋಷಣೆ ಮಾಡಿದೆ. ಕಚೇರಿಗೆ ಸಂಘದ ಒತ್ತಾಯ ಇದೆ. ಬಾಲಭವನದಲ್ಲಿ ಒಂದು ಕೊಠಡಿಯನ್ನ ಕೊಡುವಂತೆ ಸೂಚನೆ ಕೊಟ್ಟಿದ್ದೇನೆ. ಸೆ.13ರಂದು ಮಹಿಳಾ‌ ನೌಕರರ ದಿನವೆಂದು ಘೋಷಿಸಬೇಕೆಂದು ಒತ್ತಾಯ ಮಾಡಿದ್ದಾರೆ. ರಜೆ ಅಂತೂ ಕೊಡೊಲ್ಲ, ಬೇಕಿದ್ದರೆ ಮಹಿಳಾ ದಿನವಾಗಿ ಘೋಷಣೆ ಮಾಡೋಣ. ಹೆಣ್ಣು ಮಕ್ಕಳು ಕೇಳಿದಾಗ ಇಲ್ಲ ಅನ್ನೋಕೆ ಆಗೊಲ್ಲ. ಮಹಿಳಾ ದಿನ ಅಂತ ಘೋಷಣೆ ಮಾಡ್ತೀವಿ, ನೋ ಹಾಲಿ ಡೇ. ಮಹಿಳೆ, ಪುರುಷರಲ್ಲಿ ಬೇಧ ಭಾವ ಇಲ್ಲ. ಕಾನೂನಿನ ರೀತಿಯಲ್ಲಿ ಎಲ್ಲರೂ ಸಮಾನರೇ ಎಂದಿದ್ದಾರೆ.

ಸ್ವಾತಂತ್ರ್ಯ ಬಂದಿದ್ದು ಯಶಸ್ವಿಯಾಗಬೇಕಾದರೆ ಮಹಿಳೆಯರು ಆರ್ಥಿಕ, ಸಾಮಾಜಿಕವಾಗಿ ಸಬಲರಾಗಬೇಕು. ಸರ್ಕಾರದ ಕೆಲಸಗಳಲ್ಲಿ ನಿಮ್ಮ ದಕ್ಷತೆ ಹೆಚ್ಚಾಗಲಿ. ನಿಮ್ಮೆಲ್ಲರಿಗೂ ಶುಭವಾಗಲಿ ಎಂಗು ಹರಸಿದ್ದಾರೆ