ಬೆಂಗಳೂರು: ಸಿದ್ದರಾಮಯ್ಯ ಪರ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಪದಾಧಿಕಾರಿಗಳಿಂದ ಸುದ್ದಿಗೋಷ್ಟಿ ನಡೆಯಿತು. ಒಬಿಸಿ ಒಕ್ಕೂಟದ ಅಧ್ಯಕ್ಷ ರಾಮಚಂದ್ರಪ್ಪ ನೇತೃತ್ವದಲ್ಲಿ ಸುದ್ದಿಗೋಷ್ಟಿ ನಡೆಯಿತು.
ಈ ವೇಳೆ ಮಾತನಾಡಿದ ಮಾವಳ್ಳಿ ಶಂಕರ್ ಕರ್ನಾಟಕದಲ್ಲಿ ಒಂದು ರೀತಿಯ ರಾಜಕೀಯ ಏರುಪೇರು ನೋಡ್ತಿದ್ದಾರೆ. ಸಿಎಂ ಗಾದಿಗಾಗಿ ಅನೇಕ ಪ್ರಯತ್ನ ನಡೆಸುತ್ತಿದ್ದಾರೆ. ಆದ್ರೆ ೨೩ ರ ಚುನಾವಣೆ ಹಿಂದುಳಿದ ಸಮುದಾಯದ ಗಳು ಸರ್ಕಾರ ತರಲು ಕಾರಣವಾಗಿವೆ. ಅನೇಕ ಸಮೀಕ್ಷೆ ಗಳ ಸಾಬೀತು ಪಡಿಸಿವೆ. ಕರ್ನಾಟಕದ ರಾಜಕಾರಣ ಗಮನಿಸಿದಾಗ ಅಹಿಂದ ಸಮುದಾಯ ವೋಟ್ ಬ್ಯಾಂಕ್ ಗಾಗಿ ಬಳಕೆಯಾಗ್ತಿದೆ. ಧರ್ಮಸಿಂಗ್ ಮೊಯ್ಲಿ, ಬಂಗಾರಪ್ಪ ಬಿಟ್ರೆ ಸಿದ್ದರಾಮಯ್ಯ ಅವರು ಮುಂದುವರಿತಾ ಇದ್ದಾರೆ. ಸಮಾಜದಲ್ಲಿ ಸಮಾನತೆ ಬರಬೇಕಾದ್ರೆ ಸಮಾನ ಅವಕಾಶ ನೀಡುಬೇಕು. ಮತಕ್ಕಾಗಿ ನಾವು ಸಿಮೀತವಾಗಿದ್ಯಾ?. ಕಾಂಗ್ರೆಸ್ ಹೈಕಮಾಂಡ್ ಗಂಭೀರವಾಗಿ ಆಲೋಚನೆ ಮಾಡಬೇಕು. ಸಿದ್ದರಾಮಯ್ಯ ಅವರಿಗೆ ಇರೋ ಅಧಿಕಾರ ಬದಲಿಸುವ ದುಸ್ಸಾಹಸಕ್ಕೆ ಹೋಗ್ಬಾರ್ದು. ದೊಡ್ಡ ಸಮುದಾಯ ಪರಿಶಿಷ್ಟ ಸಮುದಾಯ. ಅಲ್ಪಸಂಖ್ಯಾತ, ಮಹಿಳಾ ವರ್ಗಕ್ಕೆ ಒಂದೂ ಅವಕಾಶ ನೀಡಲಿಲ್ಲ. ಈಗ ನಡೀತಿರೋ ಬೆಳವಣಿಗೆ ಸಮಾಜದಲ್ಲಿ ಬಿರುಕು ಉಂಟು ಮಾಡ್ತಿದೆ. ಅಧಿಕಾರ ಹಂಚಿಕೆ ಇದ್ರೆ ತಿಳಿಸಬೇಕು. ತಳ ಸಮುದಾಯದ ಹಿತವನ್ನ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು ಎಂದರು.
ರಾಮಚಂದ್ರಪ್ಪ ಮಾತನಾಡಿ ಗೊಂದಲ ಗಳ ಕಾರಣ ಏನು ಅನ್ನೋದು ನಮಗೆ ಅರಿವಿಲ್ಲ. ಈಗ ನಡೀತಿರೋ ವಿಷ್ಯ, ವಿಚಾರಗಳು, ಸಂಘಟನೆಗಳು ಪಾಲ್ಗೊಳ್ಳುತ್ತಿರೋದು ನಮಗೆ ಆತಂಕವಾಗಿದೆ. ಅಹಿಂದ ವರ್ಗ ಇದೆ, ನಮ್ಮದೇ ಮತ ಪಡೆದು ಅಧಿಕಾರಕ್ಕೆ ಬಂದಿದೆ. ನಮ್ಮ ರಕ್ಷಣೆ ಮಾಡೋ ಸಿಎಂ ಅವರನ್ನ ಎರಡೂವರೆ ವರ್ಷಕ್ಕೆ ಸಿಮೀತ ಮಾಡೋದಕ್ಕೆ ನಾವು ಒಪ್ಪುವುದಿಲ್ಲ. ಯಾವುದೇ ಹೈಕಮಾಂಡ್ ಆಗಲಿ, ಸಿಎಂ ಡಿಸಿಎಂ ಆಗಲಿ ಅಧಿಕಾರ ಹಂಚಿಕೆ ಬಗ್ಗೆ ವಾಗ್ದಾನ ಮಾಡಿಲ್ಲ. ಕೆಲವರುವ ಅವ್ರ ಹಿತಾಸಕ್ತಿ ಗಾಗಿ ಎರಡೂವರೆ ವರ್ಷ ಅಂತಾರೆ. ಇವತ್ತು ಒಕ್ಕಲಿಗರ ಸಂಘ ಕೂಡ ಸುದ್ದಿಗೋಷ್ಟಿ ಮಾಡಿದೆ. ಡಿಸಿಎಂ ಡಿಕೆ ಅವರ ಶ್ರಮಕ್ಕೆ ಕೂಲಿ ಕೇಳ್ತಿದ್ದಾರೆ. ಕೂಲಿ ಅಂದ್ರೆ ಏನು? ಅವರಿಗೆ ಅಧ್ಯಕ್ಷ ಹುದ್ದೆ ನೀಡಲಾಗಿದೆ. ಹೇಳಿಕೆ ಕೋಡೋವಾಗ ನೋಡಿಕೊಂಡು ಕೊಡಬೇಕು ಎಂದು ತಿಳಿಸಿದರು.
ಬೆದರಿಕೆ ಹಾಕ್ತಿದ್ದಾರೆ, ಇದು ನಡೆಯಲ್ಲ. ಬೆದರಿಕೆ ಕೇಳೋ ಸ್ಥಿತಿಯಲ್ಲಿ ನಾವು ಇಲ್ಲ. ಸ್ವಾಮೀಜಿಗಳು ತಿಳಿದುಕೊಳ್ಳಬೇಕು. ಎಲ್ಲಾ ಸಮುದಾಯಗಳನ್ನ ಸಮಾನವಾಗಿ ನೋಡಬೇಕು. ಅದೇ ರೀತಿ ಸ್ವಾಮೀಜಿಗಳು ಮಧ್ಯ ಪ್ರವೇಶ ಮಾಡಬಾರದು. ಮೇಲ್ವರ್ಗ ತಳವರ್ಗ ಸಂಘರ್ಷ ಉಂಟಾಗುತ್ತದೆ. ಅಹಿಂದ ನಾಯಕತ್ವ ಇಲ್ಲ ಅಂದ್ರೆ ೨೮ ರ ಚುನಾವಣೆಯಲ್ಲಿ ಅದರ ಪ್ರತಿಫಲ ನೋಡಬೇಕಾಗುತ್ತದೆ. ಅಧಿಕಾರ ಹಂಚಿಕೆ ಸಮಾನವಾಗಿ ಆಗಬೇಕು ಅಂತಾರೆ, ಇದೂ ಕೂಡ ನಾವು ಗಮನಿಸುತ್ತಿದ್ದೇವೆ. ಅಹಿಂದ ವರ್ಗಕ್ಕೆ ಏನು ಪ್ರಾತಿನಿಧ್ಯ ಸಿಕ್ಕಿದೆ ಅನ್ನೋದಯ ಗಮನಿಸುತ್ತಿದ್ದೇವೆ. ಇದು ಹೀಗೆ ನಡೆದರೆ ಕಾಂಗ್ರೆಸ್ ಗೆ ಸಂಕಷ್ಟ ವಾಗುತ್ತದೆ, ಇದು ನಾವು ಎಚ್ಚರಿಕೆ ನೀಡುತ್ತೇವೆ. ಪ್ರತಿಭಟನೆ, ಹೋರಾಡ ಮಾಡುತ್ತೇವಂದ್ರೆ ನಾವು ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ. ಅಹಿಂದ ವರ್ಗದ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದೇವೆ. ರಾಜ್ಯದಲ್ಲಿ ಕಾಂಗ್ರೆಸ್ ನ ೯ ಸಂಸದರು ಗೆಲ್ಲೋಕೆ ಕಾರಣ ಅಹಿಂದ ವರ್ಗದವರು ಅಂದರು.
ಅಹಿಂದ ವರ್ಗದವರು ಕಾಂಗ್ರೆಸ್ ಗೆ ಮತ್ತು ಲಿಂಗಾಯತರು ಬಿಜೆಪಿ ಗೆ ಮತ ಹಾಕಿದ್ದಾರೆ. ನನ್ನಿಂದ ಸರ್ಕಾರ ಬಂತು, ನಮ್ಮ ನಾಯಕರೇ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ ಅನ್ನೋದು ತಪ್ಪು. ನಾವು ಇವತ್ತಿಂದ ಶುರು ಮಾಡಿದ್ಸೇವೆ. ಅವರು ತೋರಿಸಿಕೊಟ್ಟ ದಾರೀಲಿ ನಾವು ನಡೆಯುತ್ತೇವೆ. ಎಲ್ಲಾ ಸಮುದಾಯಗಳ ನಾಯಕರ ಆಸೆ ಅಂದ್ರೆ ಸಿದ್ದರಾಮಯ್ಯ ಅವರೇ ಸಿಎಂ ಆಗಿ ಮುಂದುವರಿಬೇಕು. ಹೈಕಮಾಂಡ್ ನಿರ್ಧಾರ ಮಾಡೋದಾದ್ರೆ ಶೋಷಿತ ಸಮುದಾಯದಲ್ಲೇ ಅನೇಕರು ಇದ್ದಾರೆ. ಪರಮೇಶ್ವರ್ ಕೂಡ ೮ ವರ್ಷ ಅಧ್ಯಕ್ಷ ಆಗಿದ್ದಾರೆ.ಅವರಿಗೆ ಯಾರು ಕೂಲಿ ಕೊಟ್ಟಿದ್ದಾರೆ?. ಹಳೇ ಬಾರಿ ತಿರಿಸಿದ್ಮೇಲೆ ಹೊಸ ಬಾಕಿ ತೀರಿಸಲಿ. ಹೈಕಮಾಂಡ್ ನಿರ್ಧಾರ ಮಾಡಿದ್ರೆ ಶೋಷಿತ ಸಮುದಾಯದವರೇ ಆಗಬೇಕು. ಮಾತು ಎತ್ತಿದ್ರೆ ಹೈಕಮಾಂಡ್ ಮಾತು ಕೊಟ್ಟಿದೆ ಅಂತಾರೆ. ಹೈಕಮಾಂಡ್ ಏನೂ ಮಾತುಕೊಟ್ಟಿದೆ ಅನ್ನೋದು ಯಾರಿಗೂ ಗೊತ್ತಿಲ್ಲ. ಬಹಿರಂಗವಾಗಿ ಹೇಳಬೇಕು ಅಲ್ಲವೇ. ಸಿಎಲ್ಪಿಗೆ ಸಿಎಂ ಮಾಡೋ ಅಧಿಕಾರ ಇದೆ. ಹೈಕಮಾಂಡ್ ಇಂತವರನ್ನ ಗುರುತಿಸಿ ಹೇಳಬೇಕು. ಐದು ವರ್ಷಕ್ಕೆ ಸಿಎಲ್ಪಿ ಸಭೆಯಲ್ಲಿ ಸಿದ್ದರಾಮಯ್ಯ ಅವರನ್ನೇ ಘೋಷಣೆ ಮಾಡಿದ್ದಾರೆ ಎಂದಿದ್ದಾರೆ.











