ಮನೆ Latest News ತಿಮ್ಮಕ್ಕ ಹೆಸರಲ್ಲಿ ಒಂದು ಕೋಟಿ ಹಣ ಇಡಬೇಕು,ಅವರ ಹೆಸರಲ್ಲಿ ಪ್ರಶಸ್ತಿ ನೀಡಬೇಕು; ಸಿಎಂ ಸಿದ್ದರಾಮಯ್ಯ ಸೂಚನೆ

ತಿಮ್ಮಕ್ಕ ಹೆಸರಲ್ಲಿ ಒಂದು ಕೋಟಿ ಹಣ ಇಡಬೇಕು,ಅವರ ಹೆಸರಲ್ಲಿ ಪ್ರಶಸ್ತಿ ನೀಡಬೇಕು; ಸಿಎಂ ಸಿದ್ದರಾಮಯ್ಯ ಸೂಚನೆ

0

ಬೆಂಗಳೂರು; ತಿಮ್ಮಕ್ಕ ಹೆಸರಲ್ಲಿ ಒಂದು ಕೋಟಿ ಹಣ ಇಡಬೇಕು,ಅವರ ಹೆಸರಲ್ಲಿ ಪ್ರಶಸ್ತಿ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ೯೦೦ ಟನ್ ಪ್ಲಾಸ್ಟಿಕ್ ನಗರದಲ್ಲಿ ಉತ್ಪಾದನೆ ಆಗುತ್ತದೆ. ಜನರಲ್ಲಿ ಜಾಗೃತಿ ಬರಬೇಕು, ನಾವು ಪ್ಲಾಸ್ಟಿಕ್ ಮುಕ್ತ ಮಾಡಬೇಕು. ಹಸಿ ಒಣ ಕಸ ಬೇರ್ಪಡಿಸೇಕು, ಕೈಗಾರಿಕೆಗಳ ಕಸ ಜನರಿಗೆ ಹಾನಿಯಾಗಬಾರದು.ಸಾಲು ಮರದ ತಿಮ್ಮಕ್ಕ ಅವರನ್ನ ನಾವು ನೆನಪಿಸಿಕೊಳ್ಳುತ್ತೇನೆ. ಪ್ರತೀ ವರ್ಷ ಜನರಲ್ಲಿ ಜಾಗೃತಿ ಮೂಡಿಸೋ ಕಾರ್ಯಕ್ರಮ ಮಾಡಿ, ತಿಮ್ಮಕ್ಕ ಹೆಸರಲ್ಲಿ ಪ್ರಶಸ್ತಿ ನೀಡಿ ಎಂದಿದ್ದಾರೆ.

ಮಾಲಿನ್ಯ ನಿಯಂತ್ರಣ ಮಂಡಳಿ ರಚನೆಯಾಗಿ ೫೦ ವರ್ಷ ಆಯ್ತು. ನರೇಂದ್ರ ಸ್ವಾಮಿ ಅವರು ಮಂಡಳಿ ಅಧ್ಯಕ್ಷ ರಾಗಿ ೮ ತಿಂಗಳು ಆಯ್ತು. ಇಂದಿರಾ ಗಾಂಧಿ ಅವರ ಹುಟ್ಟಹಬ್ಬ ಇಂದು . ಅವರು ಪರಿಸರ ಇಲಾಖೆ, ಅರಣ್ಯ ಬಗ್ಗೆ ಬಹಳ ಕಾಯ್ದೆ ತಂದಿದ್ದು ಈಶ್ವರ್ ಖಂಡ್ರೆ ಅವರು ಹೇಳಿದ್ದಾರೆ. ಅವರು ಪ್ರಧಾನಿಯಾಗಿದ್ದಾಗ ಈ ಕಾಯ್ದೆಗಳನ್ನ ತಂದಿದ್ದರು.ಸುವರ್ಣ ಮಹೋತ್ಸವ ಆಚರಣೆ ಮಾಡೋದು ಅಲ್ಲ. ಪ್ರತೀ ವರ್ಷ ಕೂಡ ಜನರಲ್ಲಿ ಜಾಗೃತಿ ಮೂಡಿಸಬೇಕು.ಮಾಲಿನ್ಯ ತೊಳೆದುಹಾಕುವಂತಹದ್ದು ಸರ್ಕಾರದ ಜವಾಬ್ದಾರಿ ಒಂದೇ ಅಲ್ಲ, ಜನ ಕೂಡ ಇದರಲ್ಲಿ ತೊಡಗಿಸಿಕೊಳ್ಳಬೇಕು. ಕೇವಲ ಮನುಷ್ಯನಿಗೆ ಅಷ್ಟೇ ಅಲ್ಲ, ಪ್ರಾಣಿ ಸಂಕುಲಕ್ಕೂ, ಗಿಡಮರಗಳಿಗೆ ಪರಿಸರ ಬೇಕು.ಹಾಗಾಗಿ ಇಡೀ ಪರಿಸರವನ್ನ ಮಾಲಿನ್ಯ ರಹಿತ ಮಾಡಬೇಕು. ನೀರು, ಗಾಳಿ ಪರಿಸರ ಸರಿ ಯಾಗಿ ಇರಬೇಕು ಎಂದಿದ್ದಾರೆ. ೧೩೧ ನಗರಗಳು ಮಾಲಿನ್ಯ ದಿಂದ ಕೂಡಿವೆ. ಅದರಲ್ಲಿ ಬೆಂಗಳೂರು, ಹುಬ್ಬಳ್ಳಿ ಧಾರವಾಡ, ದಾವಣಗೆರೆ, ಕಲಬುರಗಿ ಸೇರಿಸಿದೆ. ಬೆಂಗಳೂರಲ್ಲಿ ವಾಸ ಮಾಡದೇ ಇರೋ ಸ್ಥಿತಿ ಬರುತ್ತದೆ ಎಂದು ತಿಳಿಸಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಭಾಷಣ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಎಂಟ್ರಿಯಾಗಿದ್ದಾರೆ. ಡಿಕೆ ಶಿವಕುಮಾರ್ ಬರ್ತಿದ್ದಂತೆ ಸಭೀಕರು ಜೋರಾಗಿ ಕೂಗಿ ಶಿಳ್ಳೆ ಹೊಡೆದಿದ್ದಾರೆ. ವೇದಿಕೆಗೆ ಬರ್ತಿದ್ದಂತೆ ಜನರತ್ತ ಡಿಕೆ ಶಿವಕುಮಾರ್ ಕೈಬೀಸಿದ್ದಾರೆ.ಈ ವೇಳೆ ಜನರ ಕೂಗಾಟ ಚೀರಾಟ ಹೆಚ್ಚಿದ್ದಾರೆ. ಆಗ ಕೆಲ ಕಾಲ ಸಿಎಂ ಸಿದ್ದರಾಮಯ್ಯ ಭಾಷಣ ನಿಲ್ಲಿಸಿದ್ದಾರೆ.