ಬೆಂಗಳೂರು; ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಎರಡು ವರ್ಷ ಪೂರೈಸಿದ್ದಾರೆ, ಅವರು ಎರಡು ವರ್ಷ ಮುಗಿಸಿದ್ದು ಗೊತ್ತೇ ಆಗಲಿಲ್ಲ ಎಂದು ವಿಜಯೇಂದ್ರ ಪರ ಎಸ್ ಆರ್ ವಿಶ್ವನಾಥ್ ಬ್ಯಾಟಿಂಗ್ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರರ ಎರಡು ವರ್ಷ ಪೂರೈಸಿದ ವಿಚಾರದ ಬಗ್ಗೆ ಮಾತನಾಡಿದ ಅವರು ವಿಜಯೇಂದ್ರ ಪರ ಬ್ಯಾಂಟಿಂಗ್ ಮಾಡಿದ್ದಾರೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಎರಡು ವರ್ಷ ಪೂರೈಸಿದ್ದಾರೆ. ಅವರು ಎರಡು ವರ್ಷ ಮುಗಿಸಿದ್ದು ಗೊತ್ತೇ ಆಗಲಿಲ್ಲ. ಬಹಳ ಚಿಕ್ಕ ವಯಸ್ಸಿಗೆ ಪಕ್ಷ ಅವರಿಗೆ ದೊಡ್ಡ ಜವಾಬ್ದಾರಿ ಕೊಟ್ಟಿದೆ. ವಿಪಕ್ಷ ನಾಯಕರ ಜತೆ ಸೇರಿಕೊಂಡು ವಿಜಯೇಂದ್ರ ಅವರು ಅನೇಕ ಹೋರಾಟ ಮಾಡಿದ್ದಾರೆ. ವಿಜಯೇಂದ್ರಗೆ ಅಭಿನಂದನೆ ಹೇಳ್ತೇನೆ. ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಮುಂದುವರೆಯುವ ಬಗ್ಗೆ ನಾವು ಹೇಳುವುದಕ್ಕೆ ಸಾಧ್ಯವಿಲ್ಲ. ಆದ್ರೆ ವಿಜಯೇಂದ್ರಗೆ ಪರ್ಯಾಯವಾಗಿ ರಾಜ್ಯಾಧ್ಯಕ್ಷ ಆಗ್ತೀವಿ ಅನ್ನೋರು ಬೇರೆಯವರು ಪಕ್ಷದಲ್ಲಿ ಇಲ್ಲ. ಎರಡೇ ವರ್ಷಕ್ಕೆ ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆದು ಹಾಕಿದ್ರೆ ಅವಕಾಶ ಕಿತ್ತುಕೊಂಡಂತೆ ಆಗಲಿದೆ. ಹಾಗಾಗಿ ಇದರ ಬಗ್ಗೆ ನಮ್ಮ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ರಾಷ್ಟ್ರೀಯ ನಾಯಕರು ಏನು ತೀರ್ಮಾನ ತಗೋತಾರೋ ಅದರಂತೆ ನಾವು ಪಕ್ಷದ ಜತೆ ಕೆಲಸ ಮಾಡ್ತೇವೆ. ವಿಜಯೇಂದ್ರಗೆ ಎರಡು ವರ್ಷದ ಅವಕಾಶ ಕೊಟ್ಟಿದ್ದಾರೆ. ಇನ್ನೂ ಒಂದು ವರ್ಷ ಅವಕಾಶ ಕೊಟ್ಟರೆ ಪೂರ್ಣ ಅವಕಾಶ ಕೊಟ್ಟಂತಾಗಲಿದೆ. ಯಾವುದೇ ಅಧ್ಯಕ್ಷರಿಗೆ ಮೂರು ವರ್ಷ ಅವಕಾಶ ಕೊಡಬೇಕು. ಯಾರಿಗೇ ಆಗಲೀ ಪೂರ್ಣ ಅವಕಾಶ ಕೊಟ್ಟು ನೋಡಬೇಕು. ವಿಜಯೇಂದ್ರರನ್ನು ಇನ್ನೂ ಒಂದು ವರ್ಷ ಮುಂದುವರೆಸಲು ಎಸ್ ಆರ್ ವಿಶ್ವನಾಥ್ ಒತ್ತಾಯಿಸಿದ್ದಾರೆ.
ಎರಡು ವರ್ಷ ಅಧಿಕಾರದವಧಿ ಮುಗಿಸಿದ ವಿಜಯೇಂದ್ರಗೆ ಶಾಸಕ ಎಸ್ ಆರ್ ವಿಶ್ವನಾಥ್ ಕಿವಿಮಾತು ಹೇಳಿದ್ದಾರೆ. ವಿಜಯೇಂದ್ರ ಮುಂದೆ ಇನ್ನೂ ದೊಡ್ಡ ಸವಾಲಿದೆ. ಹಲವು ಚುನಾವಣೆಗಳು ಶುರು ಆಗಲಿವೆ. ವಿಜಯೇಂದ್ರ ಅವರು ಇನ್ನೂ ಕ್ರಿಯಾಶೀಲರಾಗಿ ಕೆಲಸ ಮಾಡಬೇಕು. ಎಲ್ಲರನ್ನೂ ಜತೆಗೆ ಕರೆದುಕೊಂಡು ಹೋಗಬೇಕು. ಇದು ಅವರ ಮುಂದೆ ಇರುವ ದೊಡ್ಡ ಸವಾಲು. ರಾಜ್ಯಾಧ್ಯಕ್ಷರ ಘೋಷಣೆ ಆದಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ವಿಜಯೇಂದ್ರ ಅವರ ಕಾರ್ಯ ಸಮಾಧಾನ ತಂದಿದೆ ಅನ್ನೋದಕ್ಕಿಂತಲೂ ನಾವೆಲ್ರೂ ಅವರ ಜತೆ ಸೇರಿ ಕೆಲಸ ಮಾಡಿದಾಗ ಹೇಳಬೇಕು. ವಿಜಯೇಂದ್ರ ಏಕಾಂಗಿಯಾಗಿ ಪಕ್ಷ ಸಂಘಟನೆ ಮಾಡೋದು ಬಹಳ ಕಷ್ಟ ಇದೆ. ಇನ್ನೂ ಜಿಲ್ಲೆಗಳಲ್ಲಿ ಪರಿಪೂರ್ಣ ಜವಾಬ್ದಾರಿಗಳು ಸಿಗಬೇಕು. ಪೂರ್ಣ ಪ್ರಮಾಣದ ಸಂಘಟನೆ ರಚನೆ ಆದಾಗ ವಿಜಯೇಂದ್ರಗೆ ಇನ್ನೂ ಹೆಚ್ಚಿನ ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಬಿಎ ಚುನಾವಣೆಗೆ ರಚನೆಯಾದ ಬಿಜೆಪಿಯಿಂದ ಸಂಯೋಜನಾ ಸಮಿತಿಯಲ್ಲಿ ತಮ್ಮನ್ನು ಕೈಬಿಟ್ಟಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯಾಧ್ಯಕ್ಷರು, ವಿಪಕ್ಷ ನಾಯಕರು ಅದರ ಬಗ್ಗೆ ಮಾತಾಡಿದ್ದಾರೆ. ಜಿಬಿಎ ಚುನಾವಣೆ ಗೆಲ್ಲಲು ಇನ್ನೂ ಸಮರ್ಥ ತಂಡ ರಚಿಸೋದಾಗಿ ಹೇಳಿದ್ದಾರೆ. ಹಲವು ಅರ್ಹ ನಾಯಕರನ್ನು ಸಮಿತಿಯಿಂದ ಕೈಬಿಟ್ಟಿದ್ದಾರೆ. ಅಂಥ ನಾಯಕರನ್ನು ಸೇರಿಸಿಕೊಂಡು ಹೊಸ ಸಮಿತಿಮಾಡ್ತೀವಿ ಅಂದಿದ್ದಾರೆ. ಯಾರೋ ಕೆಲವರು ಈಗಿರುವ ಸಮಿತಿ ಮಾಡಿ ಗೊಂದಲ ಮಾಡಿದ್ದಾರೆ. ಮತ್ತೆ ಎಲ್ಲ ಪ್ರಮುಖರು ಚರ್ಚಿಸಿ ಪ್ರಬಲ ನಾಯಕರ ತಂಡ ಇರುವ ಸಮಿತಿ ಮಾಡ್ತಾರೆ ಎಂದಿದ್ದಾರೆ.











