ಮನೆ Latest News ವೋಟ್ ಚೋರಿ ಪದಬಳಕೆ ಕಾಂಗ್ರೆಸ್ ಗೆ ಅಲ್ಲಿನ ಜನತೆ ಈ ಫಲಿತಾಂಶ ಮೂಲಕ ತಕ್ಕ ಪಾಠ...

ವೋಟ್ ಚೋರಿ ಪದಬಳಕೆ ಕಾಂಗ್ರೆಸ್ ಗೆ ಅಲ್ಲಿನ ಜನತೆ ಈ ಫಲಿತಾಂಶ ಮೂಲಕ ತಕ್ಕ ಪಾಠ ಕಲಿಸಿದ್ದಾರೆ; ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ.

0

ನವದೆಹಲಿ: ವೋಟ್ ಚೋರಿ ಪದಬಳಕೆ ಕಾಂಗ್ರೆಸ್ ಗೆ ಅಲ್ಲಿನ ಜನತೆ ಈ ಫಲಿತಾಂಶ ಮೂಲಕ ತಕ್ಕ ಪಾಠ ಕಲಿಸಿದ್ದಾರೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.ಬಿಹಾರ ಚುನಾವಣೆಯಲ್ಲಿ ಎನ್ ಡಿ ಎ ಭರ್ಜರಿ ಗೆಲುವು ಹಿನ್ನೆಲೆ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಎಲ್ಲರಲ್ಲು ಎನ್ ಡಿ ಎ ಮಿತ್ರ ಪಕ್ಷಗಳ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಹಾರದ ಸಿಎಂ ನಿತೀಶ್ ಕುಮಾರ್ ಅಲ್ಲಿನ ನಾಯಕತ್ವದಲ್ಲಿ ಚಿರಾಗ್ ಪಾಸ್ವಾನ್ ಬಿಜೆಪಿ ನಾಯಕರ ಗಳ ದುಡಿಮೆ ಅವರ ಶ್ರಮ ಸಾಬೀತಾಗಿದೆ ಎಂದರು.

ಮೋದಿ 2047 ಕ್ಕೆ ದೇಶದ ಪ್ರಗತಿ ವಿಶ್ವದಲ್ಲಿ ಮೊದಲ ಸ್ಥಾನ ತರಲು ಗುರಿ ಹೊಂದಿದ್ದಾರೆ. ಅದರ ಪೂರಕವಾಗಿ ಮೋದಿಯವರ ನಾಯಕತ್ವಕ್ಕೆ ಬಿಹಾರದ ಜನ ಬೆಂಬಲಿಸಿದ್ದಾರೆ. ಇದು ದಾಖಲೆಯ ಫಲಿತಾಂಶ. ವೋಟ್ ಚೋರಿ ಪದಬಳಕೆ ಮಾಡ್ತಿದ್ದು ಅಲ್ಲಿನ ಜನತೆ ಕಾಂಗ್ರೆಸ್ ನ ಅಪಪ್ರಚಾರಕ್ಕೆ ಈ ಫಲಿತಾಂಶ ಮೂಲಕ ತಕ್ಕ ಪಾಠ ಕಲಿಸಿದ್ದಾರೆ. ಮೋದಿಯವರ ಮಾರ್ಗದರ್ಶನದಲ್ಲಿ ಅಮಿತ್ ಶಾ ನಡ್ಡಾ ಜಿ ,ನಿತೀಶ್ ಕುಮಾರ್, ಪಾಸ್ವಾನ್ ರವರು ಎಲ್ಲರ ನಾಯಕತ್ವದ ಧ್ವನಿಯಾಗಿ ಭಾಗಿಯಾಗಿದ್ದರು . ಅದರಿಂದ 200 ದಾಖಲೆಯನ್ನ ಮಾಡಿದೆ ಎಂದು ಹೇಳಿದರು.

ಇದು ದಾಖಲೆಯ ಬರೆದಿಟ್ಟ ಚುನಾವಣಾ ಫಲಿತಾಂಶ. ಸ್ವತಂತ್ರ ಬಳಿಕ ಇದು ಮೊದಲು. ಬಿಹಾರದಲ್ಲಿ ಬಡತನ ಶಿಕ್ಷಣ ದ ಕೊರತೆ ಕಾಣ್ತಿದ್ದವು. ಮೋದಿಯವರ ನೇತೃತ್ವದದಲ್ಲಿ ನಿತೀಶ್ ಕುಮಾರ್ ರವರು ಸಿಎಂ ಆಗಿದ್ದಾಗ ಹಲವು ಅಭಿವೃದ್ಧಿ ಮಾಡಲಾಗಿದೆ. ದೇಶದಲ್ಲಿ ನಾಡಿನಲ್ಲಿ ಉತ್ತಮ ನಾಯಕರ ಪರವಾದ ಫಲಿತಾಂಶ ನೀಡಿದ್ದಾರೆ. ದೇಶಕ್ಕೆ ಒಂದು ಸಂದೇಶ ನೀಡಿದ್ದಾರೆ. ಮೋದಿ ಹಾಗೂ ಎನ್ ಡಿ ಎ ಮಿತ್ರ ಪಕ್ಷಗಳಿಗೆ ಅಭಿನಂದನೆಗಳು ಅವರ ಶ್ರಮಕ್ಕೆ ಎಂದು ತಿಳಿಸಿದರು.

ಇಂದಿನ ಫಲಿತಾಂಶ ಸ್ಥಳೀಯ ಚುನಾವಣೆ ಫಲಿತಾಂಶಗಳ ಬಗ್ಗೆ ವಿಶ್ಲೇಷಣೆ ಮಾಡಲು ಹೋಗಲ್ಲ.2028 ಕ್ಕೆ ಕರ್ನಾಟಕದ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಇಂದಿನ ಬಿಹಾರದ ಫಲಿತಾಂಶ ಮರುಕಳಿಸಲಿದೆ.ಕಾಂಗ್ರೆಸ್ ಎರಡುವರೆ ವರ್ಷಗಳಿಂದ ರಾಜ್ಯವನ್ನ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ. ಬರೀ ನಾಯಕತ್ವದ ಬದಲಾವಣೆ ಸಂಬಂದ ಪ್ರತಿದಿನ ಪ್ರತಿಕ್ಷಣ ಆ ಪಕ್ಷದಲ್ಲಿ ನಡೆಯುತ್ತಿರುವ ಬೆಳವಣಿಗೆ ಏನಿದೆ ಜನರಲ್ಲಿ ಭ್ರಮನಿರಸನವಾಗಿದೆ.136 ಸ್ಥಾನ ನೀಡಿದ್ದರು ಜನರು ,ಜನತೆಗೆ ದ್ರೋಹ ಮಾಡಿದ್ದಾರೆ. ರಾಜ್ಯದ ಜನರು ಕೂಡ ಯಾವಾಗ ಚುನಾವಣೆ ಬರುತ್ತೋ ಅಂತಾ ಕಾಯ್ತಾ ಇದಾರೆ. ಚುನಾವಣೆಯಲ್ಲಿ ಎಷ್ಟೇ ಅವರು ಹಣ ಖರ್ಚು ಮಾಡಿದರೂ ಜನರು ಮಾನಸಿಕವಾಗಿ ಸಿದ್ದವಾಗಿದ್ದಾರೆ. 243 ಕ್ಷೇತ್ರದಲ್ಲಿ 200 ಅಧಿಕ ಸ್ಥಾನ ಬಿಹಾರದಲ್ಲಿ ಪಡೆದಿದೆ. ಆ ದಾಖಲೆ ಏನಿದೆ ಹಾಗೇ ರಾಜ್ಯದಲ್ಲಿ ಬಿಜೆಪಿ ಜೆಡಿಎಸ್ ಎರಡು ಒಂದಾಗಿ ವೇದಿಕೆ ಸಿದ್ದವಾದರೆ  ಕರ್ನಾಟಕದ ರಾಜ್ಯದಲ್ಲೂ ಈ ದಾಖಲೆ ಮುರಿಯಲಿದೆ ಎಂದರು.

ವೋಟ್ ಚೋರಿನೇ ಅವರಿಗೆ ಮುಳುವಾಗಿದೆ.136 ಸ್ಥಾನ ಕರ್ನಾಟಕದಲ್ಲಿ ಗೆದ್ದರು ಅಲ್ವಾ ಆಗ ಆಗಿರಲಿಲ್ಲ ಚುನಾವಣೆಯಲ್ಲಿ ಅವರ ವೈಪಲ್ಯ ಏನಿದೆ ಆತ್ಮವಿಮರ್ಶನ ಮಾಡಿಕೊಳ್ಳೊವುದಿ ಸೂಕ್ತ. ಮೊದಲು ಇವಿಎಮ್ ಬಗ್ಗೆ ದೋಷ ಅಂತಾ ಹೇಳಿದ್ರು ಅದು ಸಾಭಿತಾಗಲಿಲ್ಲ. ಮತಚೋರಿ ಅಂತಾ ಭಜನೆ ಮಾಡಿದ್ರು ಆಗಾಗಿ ಬಿಹಾರದ ಜನತೆ ಪಾಠ ಕಲಿಸಿದ್ದಾರೆ. ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆದ್ದಾಗ ಚುನಾವಣಾ ಆಯೋಗ ಇವರ ಪರವಾಗಿ ಕೆಲಸ ಮಾಡಿದ್ರಾ. ಮೂರು ತಿಂಗಳ ಮುಂದೆಯೆ ಕೆಪಿಸಿಸಿ ಅಧ್ಯಕ್ಷರು ಹೇಳಿದ್ರು ಹಾಗಾದ್ರೆ ಮತಚೋರಿ ಮಾಡಿ ಗೆದ್ರಾ. ಈ ರೀತಿಯ ಅಪಪ್ರಚಾರ ಮಾಡುವುದು ನಿಲ್ಲಿಸಿ ದೇಶದ ಅಭಿವೃದ್ಧಿ ಕಡೆ ಗಮನಹರಿಸಿ.ವಿಪಕ್ಷ ವಾಗಿ ಅಭಿವೃದ್ಧಿ ಗೆ ಮಾಡಲು ಅವಕಾಶ ‌ನೀಡಿ ಈಗ ಎರಡು ಅಂತಾ ತೋರಿಸಿದಿರಿ ಸಂಜೆಯೊಳಗೆ ಸೊನ್ನೆಯಾಗಬಹುದು. ದುರಂಹಕರಾದ ಮಾತಾಡಿ ಕಾಂಗ್ರೆಸ್ ಹೀಗೆ ಆಗಿದೆ‌. ನಮ್ಮ ಪಕ್ಷ ಮೈತ್ರಿಗೆ ಸಹಕಾರ ಕೊಡುವ ಕೆಲಸ ಮಾಡ್ತಿದ್ದೇವೆ ಎಂದರು.

ಕೆಲವು ಸಮಸ್ಯೆ ಇದ್ದರೂ ಬಿಜೆಪಿ ಹೈಕಮಾಂಡ್ ಗೆ ಅದು ಸರಿಮಾಡುವ ಸಾಮರ್ಥ್ಯ ಇದೆ.ಇಂದಿನ ಫಲಿತಾಂಶ ರಾಜ್ಯ ಬಿಜೆಪಿಗೆ ಉತ್ಸಾಹ ತುಂಬುವತದ್ದು. ಹೀಗಾಗಿ ಬಿಜೆಪಿ ಜೆಡಿಎಸ್ ಒಂದು ಉತ್ತಮ ವಾದ ಸರ್ಕಾರ ತರಲಿಕೆ ಒಟ್ಟಾರೆ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು.