ಬೆಂಗಳೂರು; ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯ ವಿಚಾರಕ್ಕೆ ಸಂಬಂಧಪಟ್ಟಂತೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಇದು ನಾನ್ಸೆನ್ಸ್, ಇದನ್ನೆಲ್ಲ ಸಹಿಸೋಕ್ಕೆ ಆಗಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್ ಹೇಳಿದ್ದಾರೆ.
ಪದೇಪದೇ ಹೀಗಾಗ್ತಿದೆ ಅಂತಾ ಹಿಂದೆನೂ ಕ್ರಮ ತಗೊಂಡಿದ್ವಿ.ದಯಾನಂದ್ ಅವರ ಜತೆ ನಿನ್ನೆ ಮಾತಾಡಿದೀನಿ.ಪದೇ ಇದೇ ಇದು ನಡೀತಿದೆ, ಯಾರು ಉಸ್ತುವಾರಿ ಇದ್ದಾರೆ ಅವರ ವಿರುದ್ಧ ಕ್ರಮ ಆಗಲೇಬೇಕು ಅಂದಿದ್ದೀನಿ.ಇದು ನಾನ್ಸೆನ್ಸ್, ಇದನ್ನೆಲ್ಲ ಸಹಿಸೋಕ್ಕೆ ಆಗಲ್ಲ ಅಂತ ಹೇಳಿದೀನಿ ಎಂದು ಅವರು ತಿಳಿಸಿದ್ದಾರೆ.
ದಯಾನಂದ್ ಅವರಿಂದ ವರದಿ ಕೇಳಿದ್ದೀನಿ. ನಾನೇ ಅಧಿಕಾರಿಗಳ ಸಭೆ ಕರೀತೇನೆ. ಸೀರಿಯಸ್ ಆಗಿ ಇದನ್ನು ಪರಿಗಣಿಸಿದ್ದೀವಿ. ದಯಾನಂದ್ ಅವರು ವರದಿ ಕೊಟ್ಟಮೇಲೆ ಪರಿಶೀಲನೆ ಮಾಡ್ತೀವಿ. ವರದಿ ನಮಗೆ ಸಮಾಧಾನ ಆಗದಿದ್ರೆ ಉನ್ನತ ಮಟ್ಟದ ತನಿಖೆ ಮಾಡ್ತೇವೆ. ತನಿಖೆಗೆ ಸಮಿತಿ ರಚನೆ ಮಾಡ್ತೇವೆ. ಇದು ಹಳೇ ವಿಡಿಯೋ ಅಂತಾರೆ, ಹಿಂದೆನೂ ಹಳೇ ವಿಡಿಯೋ ಬಂದಿತ್ತು. ಏನೇ ಇರಲಿ ಇದು ಯಾವುದೂ ನಡೆಯಬಾರದು. ಇದರ ವಿರುದ್ಧ ಕಠಿಣ ಕ್ರಮ ತಗೋತೇವೆ ಎಂದಿದ್ದಾರೆ.ನಟ ದರ್ಶನ್ ಅವರು ದಿಂಬು, ಹಾಸಿಗೆಗೆ ಕೋರ್ಟ್ ನಲ್ಲೂ ಮನವಿ ಮಾಡ್ಕೊಳ್ತಾರೆ. ಆದ್ರೆ ಈ ಕೈದಿಗಳಿಗೆ ಎಲ್ಲವೂ ಸುಲಭವಾಗಿ ಸಿಗುತ್ತೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.
ಉಗ್ರರಿಗೆ, ರೇಪಿಸ್ಟ್ ಗಳಿಗೆ ಜೈಲಿನಲ್ಲಿ ರಾಜಾತಿಥ್ಯ ವಿಚಾರದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರಿಗೆ ಉತ್ತರಿಸಿದ ಪರಮೇಶ್ವರ್ ಪೊಲೀಸ್ ಅಧಿಕಾರಿಗಳ ವಿರುದ್ದ ಗೃಹ ಗರಂ ಆಗಿದ್ದಾರೆ. ಈ ಹಿಂದೆ ಕೂಡ ಬಹಳ ಕಡೆ ಆದಾಗ ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿ ಕ್ರಮ ಜರುಗಿಸಿದ್ದೇವೆ. ಪರಪ್ಪನ ಅಗ್ರಹಾರದಲ್ಲೂ ಹಿಂದೆ ತಪ್ಪಿತಸ್ಥರನ್ನ ಸಸ್ಪೆಂಡ್ ಮಾಡಿ ಕ್ರಮ ಆಗಿದೆ. ಬಿ ದಯಾನಂದ್ ಅವ್ರನ್ನ ಮುಖ್ಯಸ್ಥರನ್ನಾಗಿ ಮಾಡಿದ್ದೇವೆ. ನಿನ್ನೆ ಅವ್ರು ರಜೆ ಇದ್ರು, ಅವ್ರ ಜೊತೆ ಮಾತಾಡಿದ್ದೇನೆ. ತನಿಖೆ ಮಾಡಿ ವರದಿ ಕೊಡಿ ಅಂತಾ ಕೇಳಿದ್ದೇನೆ . ಇಂಥದ್ದನ್ನೆಲ್ಲಾ ಸಹಿಸಿಕೊಳ್ಳಲು ಆಗಲ್ಲ, ನಾನ್ ಸೆನ್ಸ್. ಹೀಗೆಲ್ಲಾ ಆಗ್ತಿದ್ರೆ ಅದು ಜೈಲು ಅನಿಸಿಕೊಳ್ಳಲ್ಲ. ಪೊಲೀಸ್ ಅಧಿಕಾರಿಗಳ ಸಭೆ ಕರೆಯುತ್ತೇನೆ. ಸೀರಿಯಸ್ ಆಗಿ ಕ್ರಮ ತೆಗೆದುಕೊಳ್ಳುತ್ತೇನೆ. ವರದಿ ಕೊಡಿ ಅಂತಾ ಕೇಳಿದ್ದೇನೆ. ವರದಿ ಸಮಾಧಾನ ತಂದಿಲ್ಲ ಅಂದ್ರೆ ಬೇರೆ ಸಮಿತಿ ಮಾಡ್ತೀನಿ. ಪೊಲೀಸ್ ವರದಿ ಸಮಾಧಾನ ತರದಿದ್ರೆ ಸಮಿತಿ ಮಾಡಿ ತನಿಖೆ ಮಾಡ್ತೇವೆ. ಉಗ್ರ ಆಗಲಿ ಯಾರೇ ಆಗಲಿ ಫೋನ್ ಕೊಡೋ ಹಾಗಿಲ್ಲ. ಬೆಂಗಳೂರು, ಬೆಳಗಾವಿ, ಮಂಗಳೂರಿನಲ್ಲಿ ಪದೇ ಪದೇ ಈ ರೀತಿ ಯಾಕೆ ಆಗ್ತಿದೆ ಅಂತಾ ವರದಿ ಕೇಳಿದ್ದೇನೆ. ಹಳೆಯ ವೀಡಿಯೋನಾ ಅಂತಾ ಗೊತ್ತಿಲ್ಲ, ತನಿಖೆ ಆಗಬೇಕು.ಹಳೆಯದೇ ವೀಡಿಯೋ ಆದ್ರೂ ಆ ರೀತಿ ಆಗಬಾರದು. ದರ್ಶನ್ ಒಂದು ದಿಂಬಿಗಾಗಿ ಕೋರ್ಟ್ ಗೆ ಹೋಗಬೇಕಾಗುತ್ತೆ. ಇವರಿಗೆ ಸುಲಭವಾಗಿ ಕೈಗೆ ಫೋನ್ ಸಿಗುತ್ತೆ. ಬಿಜೆಪಿಯವರ ಜೊತೆ ನಾನು ಕಂಪೇರ್ ಮಾಡಲು ಹೋಗಲ್ಲ. ಕಂಪೇರ್ ಮಾಡ್ತಿದ್ರೆ ರಾಜಕೀಯ ಆಗಿಬಿಡುತ್ತೆ.ಸಾಮರ್ಥ್ಯದ ಬಗ್ಗೆ ಅವ್ರೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ದೆಹಲಿಯಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್ ನಿವಾಸದಲ್ಲಿ ಔತಣ ಕೂಟ ಆಯೋಜನೆ ವಿಚಾರದ ಬಗ್ಗೆ ಮಾತನಾಡಿದ ಅವರು ಹಿಟ್ನಾಳ್ ಅವರು ಕರೆದಿರುವ ಊಟಕ್ಕೆ ನಾನೇನೂ ಹೋಗೋದಿಲ್ಲ. ಅದರ ಬಗ್ಗೆ ನನಗೆ ಗೊತ್ತಿಲ್ಲ, ನನಗೇನೂ ಅವರು ಕರೆದಿಲ್ಲ. ಅಥವಾ ದೆಹಲಿಗೆ ಹೋಗ್ತಿಲ್ಲ ನಾನು. ಕಪಿಲ್ ಸಿಬಲ್ ಅವರ ಪುಸ್ತಕ ಬಿಡುಗಡೆಗೆ ಸಿಎಂ ಹೋಗ್ತಿದ್ದಾರೆ ಎಂದಿದ್ದಾರೆ. ದಲಿತ ಸಿಎಂ ಕೂಗು ವಿಚಾರದ ಬಗ್ಗೆ ಮಾತನಾಡಿ ಯಾರು ನಿಮಗೆ ಇದನ್ನೆಲ್ಲ ಹೇಳ್ತಾರೋ ಗೊತ್ತಿಲ್ಲ. ನೀವೇ ಎಲ್ಲ ಅಂದಾಜು ಮಾಡ್ತೀರೋ ಏನೋ? ಎಂದು ಹೇಳಿದ್ದಾರೆ.
ಕನ್ನಡಪರ ಹೋರಾಟಗಾರರ ಕೇಸ್ ವಾಪಸ್ ಗೆ ಒತ್ತಾಯ ವಿಚಾರದ ಬಗ್ಗೆ ಮಾತನಾಡಿದ ಅವರು ಕಾನೂನು ವಿರುದ್ಧ ಕೆಲಸ ಮಾಡಿದವರ ವಿರುದ್ಧ ಕ್ರಮ ಆಗುತ್ತೆ.ಒಳ್ಳೆಯ ಉದ್ದೇಶದಿಂದ ಹೋರಾಟ ನಡೆದರೆ, ಅದರಿಂದ ಸಾರ್ವಜನಿಕ ಆಸ್ತಿ ನಷ್ಟ ಆಗದಿದ್ದರೆ ಅದಕ್ಕೆ ಸಂಪುಟ ಉಪಸಮಿತಿಯಲ್ಲಿ ಚರ್ಚೆ ಮಾಡಲಾಗುತ್ತೆ. ಸಂಪುಟ ಉಪಸಮಿತಿಯಲ್ಲಿ ಚರ್ಚೆ ಮಾಡಿ ಅಪರಾಧದ ಅಂಶಗಳಿಲ್ಲದಿದ್ರೆ ಅಂಥ ಕೇಸ್ ವಾಪಸ್ ಬಗ್ಗೆ ನಿರ್ಧಾರ ಆಗಲಿದೆ. ಅನೇಕ ಸಂದರ್ಭಗಳಲ್ಲಿ ಕನ್ನಡಪರ, ರೈತಪರ ಹೋರಾಟಗಾರರ ಕೇಸ್ ವಾಪಸ್ ಪಡೆಯಲಾಗಿದೆ. ಅದಕ್ಕೊಂದು ಪ್ರಕ್ರಿಯೆ ಇದೆ, ಅದರಂತೆ ಕ್ರಮ ಆಗಲಿದೆ. ಸಂಪುಟ ಉಪಸಮಿತಿ ಹಾಗೂ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆದ ಮೇಲೆ ನಿರ್ಧಾರ ಆಗೋದು ಎಂದು ಅವರು ಹೇಳಿದ್ದಾರೆ.











