ಮನೆ Latest News ಪಕ್ಷ ಹೇಗೆ ಹೇಳುತ್ತೋ ಹಾಗೆ ಕೇಳಿಕೊಂಡು ಹೋಗ್ತೇನೆ; ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ

ಪಕ್ಷ ಹೇಗೆ ಹೇಳುತ್ತೋ ಹಾಗೆ ಕೇಳಿಕೊಂಡು ಹೋಗ್ತೇನೆ; ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆ

0

ನವದೆಹಲಿ; ಪಕ್ಷ ಹೇಗೆ ಹೇಳುತ್ತೋ ಹಾಗೆ ಕೇಳಿಕೊಂಡು ಹೋಗ್ತೇನೆ ಎಂದು ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಆಗುತ್ತಾರೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ನಾಯಕತ್ವ ಬದಲಾವಣೆ ಬಗ್ಗೆ ಸಿಎಂ ಹೇಳಿದ್ರಾ, ನಾನು ಹೇಳಿದ್ನಾ?. ಪಕ್ಷ ಹೇಗೆ ಹೇಳುತ್ತೋ ಹಾಗೆ ಕೇಳಿಕೊಂಡು ಹೋಗ್ತೇನೆ. ಐದು ವರ್ಷ, ಹತ್ತು ವರ್ಷ, ಹದಿನೈದು ವರ್ಷ ಸಿಎಂ ಆಗಬೇಕೋ.ಎಷ್ಟು ವರ್ಷ ಸಿಎಂ ಆಗಿರಬೇಕು ಎಂದು ಹೈಕಮಾಂಡ್ ಹೇಳುತ್ತೆ. ನಮಗೆ ಹೇಳಿದ ಕೆಲಸವನ್ನು ನಾವು ಮಾಡ್ಕೊಂಡು ಹೋಗಬೇಕು ಎಂದಿದ್ದಾರೆ.

ಇದೇ ವೇಳೆ ದೆಹಲಿಯಲ್ಲಿ ನಾನು ಯಾರನ್ನೂ ಭೇಟಿ ಮಾಡಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಪಕ್ಷ ಸಂಘಟನೆ ಬಗ್ಗೆ ಹೈಕಮಾಂಡ್ ನಾಯಕರ ಭೇಟಿಯಾಗ್ತೇನೆ. ಪಕ್ಷದ ಚೌಕಟ್ಟು ಬಿಟ್ಟು ನಾನು ಹೋಗುವುದಿಲ್ಲ ಎಂದು ಅವರು ಇದೇ ವೇಳೆ ಎಂದು ಹೇಳಿದ್ದಾರೆ.

ಯಾವ ನವೆಂಬರ್ ಕ್ರಾಂತಿ ಆಗಲ್ಲ, 2028ಕ್ಕೆ ಕ್ರಾಂತಿ ಆಗುತ್ತೆ.  ನವೆಂಬರ್, ಡಿಸೆಂಬರ್, ಜನವರಿ, ಫೆಬ್ರವರಿಯಲ್ಲಿ ಕ್ರಾಂತಿ ಇಲ್ಲ.2028ಕ್ಕೆ ಕ್ರಾಂತಿ ಆಗಲಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. 2028ಕ್ಕೆ ಕಾಂಗ್ರೆಸ್ ಅಧಿಕಾರಕ್ಕೆ ವಾಪಸ್ ಬರುವ ಮೂಲಕ ಕ್ರಾಂತಿ. 2025, 2026ಕ್ಕೂ ಯಾವ ಕ್ರಾಂತಿ ಆಗಲ್ಲ ಎಂದ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.ಮುಂದಿನ ಬಾರಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ.ಆಕಾಂಕ್ಷಿಗಳಿಗೆ ಏನ್ ಹೇಳಬೇಕೆಂದು ಹೈಕಮಾಂಡ್ ನಿರ್ಧರಿಸುತ್ತೆ ಎಂದು ದೆಹಲಿಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.