ಬೆಂಗಳೂರು; ಸೀಟು ಹಂಚಿಕೆ ವರಿಷ್ಠರ ಅಂಗಳಕ್ಕೆ ಬಿಡುತ್ತೇವೆ ಎಂದು ಬೆಂಗಳೂರಿನಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಬಿಎಂಪಿ ಇದ್ದಾಗ ಚುನಾವಣೆ ಆಗಿದ್ದು, ಇಗ ಚುನಾವಣೆ ನಡೆದು ೧೦ ವರ್ಷ ಆಗಿದೆ. ಈಗ ೩೬೮ ವಾರ್ಡ್ ಗಳಾಗಿವೆ. ಪಕ್ಷದ ಚಟುವಟಿಕೆಗಳು ನಿರಂತರವಾಗಿ ಇರಬೇಕು. ಹೀಗಾಗಿ ಇವತ್ತು ಸಭೆ ನಡೆಸಿ ಅಭಿಪ್ರಾಯ ಪಡೆಯಲಾಗಿದೆ.ಇದರ ಬಗ್ಗೆ ಕಾರ್ಯರೂಪಕ್ಕೆ ತರಲಾಗುತ್ತೆ ಎಂದಿದ್ದಾರೆ.
ಮೈತ್ರಿಯಲ್ಲಿ ಸೀಟು ಶೇರಿಂಗ್ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಹಿಂದೆ ಯಾರು ಗೆದ್ದಿದ್ರು .ಎಲ್ಲರನ್ನ ಕರೆದು ಮಾತಾಡಿ,ಪರಿಗಣನೆಗೆ ತೆಗೆದುಕೊಳ್ಳಲಾಗುತ್ತೆ.ಸೀಟು ಹಂಚಿಕೆ ವರಿಷ್ಠರ ಅಂಗಳಕ್ಕೆ ಬಿಡುತ್ತೇವೆ ಎಂದು ತಿಳಿಸಿದ್ದಾಕೆ. ಕಬ್ಬಿನ ಬೆಂಬಲ ಹೋರಾಟದ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಳಗಾವಿಯಲ್ಲಿ ರೈತರು ಹೋರಾಟ ಮಾಡ್ತಿದ್ದಾರೆ, ೬ ನೇ ದಿನ ಪೂರೈಸಿದೆ. ಸಿಎಂ, ಉಸ್ತುವಾರಿ ಸಚಿವರು ಅದರ ಬಗ್ಗೆ ಮಾತಾಡಿಲ್ಲ. ಎಷ್ಟು ಜನ ನಾನಾ ಪಕ್ಷದ ನಾಯಕರ ಸಕ್ಕರೆ ಕಾರ್ಖಾನೆ ಇದೆ. ಅವರ ಬೇಳೆ ಬೇಯಿಸಿಕೊಳ್ಳಲು ರೈತರನ್ನ ಬಲಿಪಶು ಮಾಡೋದು ಬೇಡ. ಜಿಲ್ಲಾ ಉಸ್ತುವಾರಿಗಳು ಬಂದಿಲ್ಲಾ, ಚರ್ಚೆ ಮಾಡಿಲ್ಲ ಎಂದು ಹೇಳಿದ್ದಾರೆ.
ಮಂಡ್ಯ ರೈತನ ಆತ್ಮಹತ್ಯೆ ವಿಚಾರದ ಬಗ್ಗೆ ಮಾತನಾಡಿದ ಅವರು ಭೂಸ್ವಾಧೀನದ ಪರಿಹಾರ ಸಿಕ್ಕಿಲ್ಲ. ಡಿಸಿ ಕಚೇರಿ ಆವರಣದಲ್ಲಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ರು. ಇಗ ವಿಕ್ಟೋರಿಯಾ ಗೆ ಹೋಗ್ತೀನಿ. ಅವರ ಕುಟುಂಬದವರನ್ನ ಭೇಟಿ ಮಾಡಿ ಸಾಂತ್ವನ ಹೇಳ್ತಿನಿ. ಅಲ್ಲಿನವರೆ ಕೃಷಿ ಸಚಿವರೆ ಇದ್ದಾರಲ್ವಾ ಎಂದರು. ಬಿಜೆಪಿ ಜೊತೆ ಜೆಡಿಎಸ್ ವಿಲೀನ ಆಗಿದೆ ಎಂಬ ವಿಚಾರದ ಬಗ್ಗೆ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ ನಮಗೆ ಸಿಕ್ಕಿದ ಬೆಂಬಲ ಸಿಕ್ಕಿದ್ದು ನೋಡಿ ಬೆಚ್ಚಿಬಿದ್ದಿದ್ದಾರೆ. ಇಲ್ಲಿವರೆಗೆ ೭೦% ಆದಾಯ ರೆವಿನ್ಯೂ ಕಲೆಕ್ಟ್ ಆಗ್ತಿದೆ. ರಸ್ತೆಗುಂಡಿಗಳಿಂದ ಹಲವರ ಸಾವು ಆಗಿದೆ. ಎಷ್ಟು ಗುಂಡಿಗಳನ್ನ ಮುಚ್ಚಿದ್ದಿರಾ. ಗುಂಡಿ ಮುಚ್ಚಿದ್ದ ಗಡುವು ದಾಟಿ ಹೋಗಿದೆ . ಟನಲ್ ರೋಡ್ ಗೆ ಎಷ್ಟು ಬಜೆಟ್ ಬೇಕು,ಓಡಾಡೋರು ಯಾರು.? ಹೋಗೊಕೆ ಬರೋಕೆ ೩೦೦ ಕೊಡಬೇಕು. ಸಾರ್ವಜನಿಕ ಸಾರಿಗೆಗೆ ಮನ್ನಣೆ ಕೊಡಿ. ಮಾಡಲಿ ಬಿಡಲಿ , ಸಾರ್ವಜನಿಕ ಸಾರಿಗೆಗೆ ಮನ್ನಣೆ ಕೊಡಿ. ಮೆಟ್ರೊದ ದರವನ್ನ ಹೆಚ್ಚಿಗೆ ಮಾಡಿದ್ದಾರೆ. ಮೆಟ್ರೋದಲ್ಲಿ ಎಲ್ಲಾ ತರದ ಜನರು ಓಡಾಡ್ತಾರೆ ಎಂದಿದ್ದಾರೆ.
ರಾಹುಲ್ ಗಾಂಧಿ ಇಂದು ವೋಟ್ ಕಳ್ಳತನ ಆರೋಪ ಮಾಡಿ ಸುದ್ದಿಗೋಷ್ಠಿ ಮಾಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ರಾಹುಲ್ ಗಾಂಧಿ ಅವರು ಕರ್ನಾಟಕದಲ್ಲಿ ವೋಟ್ ಕಳ್ಳತನದ ಆರೋಪ ಮಾಡಿದರು. ಸ್ವತಃ ಅವರ ಶಾಸಕರಾದ ಬಿ.ಆರ್.ಪಾಟೀಲ್ ಇರುವ ಕ್ಷೇತ್ರದಲ್ಲೇ ಆರೋಪ ಮಾಡಿದ್ರು. ಈಗ ಬಿಹಾರ ಚುನಾವಣೆಯಲ್ಲಿ RJD ಯನ್ನು ಸೋಲಿಸೋಕೆ ರಾಹುಲ್ ಗಾಂಧಿ ಒಬ್ಬರೇ ಸಾಕು. ಅವರ ಚೈಲ್ಡಿಶ್ ಹೇಳಿಕೆಗಳಿಂದಲೇ RJD ಸೋಲುತ್ತದೆ ಎಂದು ಹೇಳಿದ್ದಾರೆ.











