ಮನೆ Latest News ನಾವೆಲ್ಲ ಹೈಕಮಾಂಡ್ ತೀರ್ಮಾನ ಕ್ಕೆ ಬೆಲೆ ಕೊಡ್ತೇವೆ, ಪಾಲಿಸ್ತೇವೆ : ಗೃಹ ಸಚಿವ ಪರಮೇಶ್ವರ್ ...

ನಾವೆಲ್ಲ ಹೈಕಮಾಂಡ್ ತೀರ್ಮಾನ ಕ್ಕೆ ಬೆಲೆ ಕೊಡ್ತೇವೆ, ಪಾಲಿಸ್ತೇವೆ : ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು; ನಾವೆಲ್ಲ ಹೈಕಮಾಂಡ್ ತೀರ್ಮಾನ ಕ್ಕೆ ಬೆಲೆ ಕೊಡ್ತೇವೆ, ಪಾಲಿಸ್ತೇವೆ  ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ದೆಹಲಿಗೆ ಸಿಎಂ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಹೈಕಮಾಂಡ್ ಎಲ್ಲ ತೀರ್ಮಾನ ಮಾಡುತ್ತೆ. ನಾವೆಲ್ಲ ಹೈಕಮಾಂಡ್ ತೀರ್ಮಾನ ಕ್ಕೆ ಬೆಲೆ ಕೊಡ್ತೇವೆ, ಪಾಲಿಸ್ತೇವೆ. ಯಾರು ಪಾಲಿಸಲ್ವೋ ಅವರ ವಿರುದ್ಧ ಕ್ರಮ ಆಗುತ್ತೆ. ಸಿಎಂ ಹೇಳಿರೋದು ಸರಿ ಇದೆ. ಹೈಕಮಾಂಡ್ ಏನು ಹೇಳುತ್ತೋ ಕೇಳ್ತೀವಿ ಅಂದಿದ್ದಾರೆ, ಅದು ಸರಿ ಇದೆ ಎಂದಿದ್ದಾರೆ. ರಾಜಣ್ಣ ಮನೆಯಲ್ಲಿ ಔತಣ ಕೂಟ ವಿಚಾರದ ಬಗ್ಗೆ ಮಾತನಾಡಿದ ಅವರು ಅದರಲ್ಲಿ ಏನೂ ವಿಶೇಷ ಇಲ್ಲ. ಈ ಮೊದಲೂ ಹೋಗಿದ್ದೇವೆ, ಈಗಲೂ ಕರೆದಿದ್ದಾರೆ ಹೋಗ್ತಿದ್ದೇವೆ.  ದೆಹಲಿಗೆ ನೀವೂ ಹೋಗ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಯಾರ್ಯಾರು ದೆಹಲಿಗೆ ಹೋಗ್ತಿದ್ದಾರೋ ಗೊತ್ತಿಲ್ಲ. ನಾನು ಸದ್ಯಕ್ಕೆ ದೆಹಲಿಗೆ ಹೋಗ್ತಿಲ್ಲ. ಅವಶ್ಯಕತೆ ಬಿದ್ದರೆ ನಾನೂ ದೆಹಲಿಗೆ ಹೋಗ್ತೇನೆ ಅಂದಿದ್ದಾರೆ.

ವರ್ತೂರು ಪೊಲೀಸರಿಂದ ಮನೆ ಕೆಲಸದಾಕೆ ಮೇಲೆ ಅಮಾನವೀಯ ಹಲ್ಲೆ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಪ್ರಕರಣ ನನ್ನ ಗಮನಕ್ಕೂ ಬಂದಿದೆ. ಪೊಲೀಸ್ ಕಮೀಷನರ್ ಅವರಿಂದ ಇದರ ಬಗ್ಗೆ ವರದಿ ಕೇಳಿದ್ದೇನೆ . ವರದಿ ಬಂದ ಬಳಿಕ ಪರಿಶೀಲಿಸಿ ಪೊಲೀಸರ ವಿರುದ್ಧ ಕ್ರಮ ತಗೊಳ್ತೇವೆ ಎಂದ ಅವರು ಅಕಾಲಿಕ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿ ಅಗತ್ಯ ನೋಡಿಕೊಂಡು ವರ್ಗಾವಣೆ ಮಾಡ್ತಾರೆ. ಈಗ ನಮ್ಮ ಇಲಾಖೆ ಬಿಟ್ಟು ಎಲ್ಲ ಇಲಾಖೆಗಳಲ್ಲಿ ವರ್ಗಾವಣೆ ನಿಂತಿದೆ. ಹಿರಿಯ ಸಚಿವರನ್ನು ಕೈಬಿಡುವ ವಿಚಾರ ಗೊತ್ತಿಲ್ಲ. ಅದರ ಬಗ್ಗೆ ಸಿಎಂ,ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದಿದ್ದಾರೆ.

ಬೆಳಗಾವಿಯಲ್ಲಿ ಕಬ್ಬು ಬೆಳೆಗಾರರ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಳಗಾವಿ ಪ್ರತಿಭಟನೆ ಕುರಿತು ನಾನೂ ಕೂಡಾ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಜತೆ ಚರ್ಚೆ ಮಾಡಿದ್ದೇನೆ. ಆದಷ್ಟು ಬೇಗ ಕಬ್ಬಿಗೆ ಬೆಲೆ ನಿಗದಿ ಮಾಡಿ ಸಮಸ್ಯೆ ಬಗೆಹರಿಸಲು ಹೇಳಿದ್ದೇನೆ. ಇಲ್ಲದಿದ್ರೆ ಪೊಲೀಸರಿಗೆ ಪರಿಸ್ಥಿತಿ ನಿಭಾಯಿಸೋದು ಕಷ್ಟ ಆಗುತ್ತೆ ಅಂದಿದ್ದೇನೆ. ಸತೀಶ್ ಜಾರಕಿಹೊಳಿ ಸೇರಿ  ಆ ಭಾಗದ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುವ ವಿಶ್ವಾಸ ಇದೆ. ನಿನ್ನೆ ಒಬ್ಬರು ರೈತರು ಆತ್ಮಹತ್ಯೆ ಪ್ರಯತ್ನ ಮಾಡಿದ್ರು, ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ಥರದ ಘಟನೆಗಳು ಆಗಬಾರದು, ಬೇಗ ಬಗೆಹರಿಸಿ ಅಂದಿದ್ದೇವೆ. ಬಿಜೆಪಿಯವರು ಸಹಜವಾಗಿ ಇಂಥ ಸಂದರ್ಭದಲ್ಲಿ ಬೆಂಬಲ ಕೊಟ್ಟಿದ್ದಾರೆ. ಇಂಥ ಅವಕಾಶ ಬಿಡ್ತಾರಾ ಅವರು? ಎಂದ ಅವರು ಸರ್ಕಾರ ಕುರ್ಚಿ ಕಚ್ಚಾಟದಲ್ಲಿ ತೊಡಗಿದೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅವರು ಅಧಿಕಾರದಲ್ಲಿದ್ದಾಗ ಏನಾಗಿತ್ತು ಅಂತ ನೋಡಿಕೊಳ್ಳಲಿ ಅವರು ಎಂದಿದ್ದಾರೆ.