ಮನೆ Blog ಪಾಪ ಆ ಹುಡುಗ ಎಳಸು, ಅವನಿಗೆ ಇನ್ನೂ ಅನುಭವ ಇಲ್ಲ; ಟನಲ್ ಕುರಿತು ತೇಜಸ್ವಿ ಸೂರ್ಯ...

ಪಾಪ ಆ ಹುಡುಗ ಎಳಸು, ಅವನಿಗೆ ಇನ್ನೂ ಅನುಭವ ಇಲ್ಲ; ಟನಲ್ ಕುರಿತು ತೇಜಸ್ವಿ ಸೂರ್ಯ ಹೇಳಿಕೆಗೆ ಡಿ ಕೆ ಶಿವಕುಮಾರ್ ತಿರುಗೇಟು

0

ಬೆಂಗಳೂರು; ಪಾಪ ಆ ಹುಡುಗ ಎಳಸು, ಅವನಿಗೆ ಇನ್ನೂ ಅನುಭವ ಇಲ್ಲ ಎಂದು ಟನಲ್ ಕುರಿತು ತೇಜಸ್ವಿ ಸೂರ್ಯ ಹೇಳಿಕೆಗೆ  ಡಿ ಕೆ ಶಿವಕುಮಾರ್ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾನು ಅವನ ಬಳಿ ಮಾತಾಡೋಕೆ ಹೋಗಲ್ಲ. ಇಡೀ ಪ್ರಪಂಚ ಎಲ್ಲಿದೆ ಅಂತ ಆತನಿಗೆ ಗೊತ್ತಿಲ್ಲ. ಟನಲ್ ಬೇಡ ಅಂತ‌ ಹೇಳೋಕೆ ಆತ ಯಾರು?. ಕೇಂದ್ರ ಸಚಿವ ಆಗಿದ್ದಾನಾ? ಟನಲ್ ಬೇಡ ಅಂತ ರೆಸುಲ್ಯುಷನ್ ಮಾಡಲಿ. ಪಾಪ ಅಂತ ಮಾತಾಡೋಕೆ ಚಾನ್ಸ್ ಕೊಟ್ರೆ ಏನೇನೋ ಮಾತಾಡ್ತಾನೆ. ನಾನು ಹೇಳಿದ್ದೇ ಬೇರೆ, ಆದ್ರೆ ಮೆಟ್ರೋ ಪಾಲಿಟಿಯನ್ ಸ್ಟೋರಿ ನಾ?. ಕಾರಲ್ಲಿ ಬಿಟ್ಟು ಸಾರ್ವಜನಿಕ ಸಾರಿಗೆ ಉಪಯೋಗಿಸಿ. ಎಷ್ಟು ಲಕ್ಷ ಕಾರಿದೆ? ಅವೆಲ್ಲಾ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಮದ್ವೆ ಮಾಡಿಸೋಕೆ ಟನಲ್ ರಸ್ತೆ ನಿರ್ಮಿಸುತ್ತಿದ್ದಾರೆ ಎಂಬ ಸೂರ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅದಕ್ಕೆ ನಾನು ಹೇಳ್ತಿರೋದು, ತೇಜಸ್ವಿ ಸೂರ್ಯ ಎಳಸು ಅಂತ. ಖಾಲಿ ಟ್ರಂಕ್ ಅಂತ, ೧೦ ರೂಪಾಯಿ ತಂದಿಲ್ಲ.ನೀವೆಲ್ಲಾ ನಿಮ್ಮ ಕಾರಲ್ಲಿ ಬಂದಿದ್ದು ತಾನೇ ಎಂದು ಪ್ರಶ್ನಿಸಿದ್ದಾರೆ. ಮೆಟ್ರೋ ನ ರಾಜ್ಯಕ್ಕೆ ಇವರು ತೆಗೆದುಕೊಂಡು ಬಂದಿಲ್ಲ. ಮೆಟ್ರೋ ಕಾಂಗ್ರೆಸ್ ಸರ್ಕಾರ ತೆಗೆದುಕೊಂಡು ಬಂದಿರೋದು. ನಿಮಗೆ ಅಧಿಕಾರ ಇತ್ತಲ್ಲ.

ನೀನು ಏನ್ ಮಾಡಿದ್ದೀಯಾ? ನಿಮ್ಮ ಸರ್ಕಾರ ಏನ್ ಮಾಡಿದೆ.? ಎಷ್ಟು ಪಿಲ್ಲರ್ ಹಾಕಿದ್ದೀರಾ, ಎಷ್ಟು ಹಣ ತಂದಿದ್ದೀರಾ.? ಮೆಟ್ರೋಗೆ 10% 12% ಕೊಡುತ್ತಿದ್ದಾರೆ ಅಷ್ಟೇ. ಮೆಟ್ರೋಗೆ ಹೆಚ್ಚು ಹಣ ಕೊಡ್ತಿರೋದು ನಮ್ಮ‌ ಸರ್ಕಾರ.ಸುಮ್ನೆ ಖಾಲಿ‌ ಮಾತು. ಅವನ ಬಗ್ಗೆ ಇನ್ಮುಂದೆ ನನ್ನ ಹತ್ತಿರ ಪಶ್ನೆ ಕೇಳಬೇಡಿ. ಅವನು ವೇಸ್ಟ್ ಮೆಟೀರಿಯಲ್ ನನ್ನ ಪ್ರಕಾರ. ಅವರ ಪಾರ್ಟಿಯಲ್ಲಿ ಕೆಲವು ಸೀನಿಯರ್ ಲೀಡರ್ ಇದ್ದಾರೆ ಅವರಿಗೆ ಅರ್ಥ ಆಗುತ್ತೆ. ಅಶೋಕ್, ಬೊಮ್ಮಯಿ, ಅಶ್ವಥ್ ನಾರಾಯಣ್ ಗೆ ಅರ್ಥ ಆಗುತ್ತೆ‌. ಟ್ರ್ಯಾಮ್ ಮಾಡಿ ಅಂತ ಹೇಳ್ತಾನೆ ಸಾಧ್ಯನಾ.? BRTS ಮಾಡಿ ಅಂತಾನೆ.ಅದು ಮಾಡೋಕೆ ಆಗುತ್ತಾ ಇಲ್ಲ. ಅವನಿಗೆ ತಲೆನೇ ಇಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದೇ ವೇಳೆ ಕೆಎನ್ ರಾಜಣ್ಣ ರಿಂದ ಔತಣಕೂಟ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ನಾನು ರಾಜಕೀಯ ಮಾತಾಡಲ್ಲ. ಇದು ನಗರಾಭಿವೃದ್ಧಿ ಸಲುವಾಗಿ ಸಭೆ ಇತ್ತು ಅಷ್ಟೇ. ಇದು ಬಿಟ್ಟರೆ ನಾನು ರಾಜಕೀಯ ಮಾತಾಡೋದಿಲ್ಲ ಎಂದಿದ್ದಾರೆ.