ಕೇಂದ್ರ ಸಚಿವ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿದ್ರು, ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶಾಸಕಾಂಗ ನಾಯಕ ಸುರೇಶ್ ಬಾಬು,ಪರಿಷತ್ತು ಸದಸ್ಯರಾದ ಟಿ ಎ ಶರವಣ, ಜವರಾಯಿಗೌಡ, ಭೋಜೆಗೌಡ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ದೀಪಾವಳಿ ಹಬ್ಬವನ್ನು ನಾಡಿನ ಜನತೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ 6 ನೇ ಗ್ಯಾರಂಟಿಯಾಗಿ ಎ ಖಾತಾ ಬಿ ಖಾತಾ ಮಾಡ್ತಿದ್ದಾರೆ. ಸಿಎಂ, ಡಿಸಿಎಂ ಘೋಷಣೆ ಮಾಡಿ ಜಾಹೀರಾತು ನೀಡಿದ್ದಾರೆ. ಇದೊಂದು ನಾಡಿನ ಜನತೆಗೆ ಟೋಪಿ ಹಾಕುವ ಕೆಲಸ. ಪತ್ರಿಕೆಗಳ ಸಂಪಾದಕೀಯ ಗಮನಿಸಿದ್ದೇನೆ. ಇದು ಎಷ್ಟರಮಟ್ಟಿಗೆ ನಾಗರಿಕರಿಗೆ ಅನುಕೂಲ, ಹೊರೆ ಆಗುತ್ತದೆ ಅನ್ನೋದನ್ನ ಜನರಿಗೆ ಗೊತ್ತಿದೆ.
ಬಿ ಖಾತಾ ಅನ್ನೋದು 1995 ರಿಂದ ಸಮಸ್ಯೆಗಳನ್ನು ಬೆಂಗಳೂರು ನಾಗರಿಕರು ಅನುಭವಿಸುತ್ತಿದ್ದಾರೆ. ಈ ರೀತಿ ಸಮಸ್ಯೆಗಳ ಬೆಂಗಳೂರುನಗರ, ಗ್ರಾಮೀಣ ಪ್ರದೇಶದಲ್ಲಿ ಗಮನಿಸುತ್ತಿದ್ದೇವೆ.1997 ರಲ್ಲಿ ಒಂದು ಆದೇಶ ಆಗಿದೆ. ಮಹಾನಗರ ಪಾಲಿಕೆ, ಪುರಸಭೆ ವ್ಯಾಪ್ತಿಯಲ್ಲಿ ಬರುವ ಜಮೀನು, ಸೈಟ್ ಬಗ್ಗೆ ತಿದ್ದುಪಡಿ ಆಗಿದೆ. 2003 ರಲ್ಲಿ ನಗರಸಭೆ ಮತ್ತು ಪುರಸಭೆ ಯಲ್ಲಿ ಯಾವುದೇ ರೀತಿಯ ನಿವೇಶನ ಇರಲಿ. ದೇವೇಗೌಡರು, ಜೆಡಿಎಸ್ ಸರ್ಕಾರ ಆಡಳಿತದಲ್ಲಿತ್ತು.
68 ರಿಂದ 98 ವಾರ್ಡ್ ಮಾಡಿದ್ವಿ, ಏಳು ನಗರಸಭೆ 9 ಕ್ಕೆ ಏರಿಕೆ ಮಾಡಿದ್ವಿ. ನಗರಸಭೆಗಳನ್ನ ಯಾಕೆ ಮಾಡಿದ್ರು ಅಂದ್ರೆ ಬೆಂಗಳೂರು ಅಭಿವೃದ್ಧಿ ಆಗಿರಲಿಲ್ಲ . ಹಲವಾರು ಬಾರಿ ವ್ಯವಸಾಯ ಮಾಡುವ ಭೂಮಿ ನಿವೇಶನ ಆಗ್ತಿತ್ತು. ಇದಕ್ಕೆ 110 ರೂ ಸ್ಕ್ವೇರ್ ಪೂಟ್ ಕಟ್ಟಿಸಿಕೊಂಡು, ಪಾರ್ಮ ನಂಬರ್ 19 ಕೊಡುವ ತೀರ್ಮಾನ ಆಗಿತ್ತು. 12262 ರೂ ಖರ್ಚಾಗುತ್ತಿತ್ತು, ಭೂ ಪರಿವರ್ತನಾ ಶುಲ್ಕ ಅಂತ ಇತ್ತು. ಫಾರ್ಮ ನಂಬರ್ 19 ರಲ್ಲಿ ಮಾಡೋದನ್ನು ರದ್ದು ಫಾರ್ಮ್ ನಂಬರ್ 3 ಮಾಡಿದ್ರು ಎಂದಿದ್ದಾರೆ.
ನೋಂದಾಯಿತ ಎಲ್ಲ ಆಸ್ತಿ ಫಾರ್ಮ್ 3 ಗೆ ವರ್ಗಾವಣೆ ಮಾಡಿದ್ರು. ನಂತರ 2007 ರಲ್ಲಿ ನಾನು ಮುಖ್ಯಮಂತ್ರಿ ಆಗಿದ್ದೆ. ಸ್ವೇಚ್ಛಾಚಾರವಾಗಿ ತೆರಿಗೆ ವಸೂಲಿ ಮಾಡ್ತಿದ್ದರು. ಬಿಜೆಪಿ ಮತ್ತು ಜೆಡಿಎಸ್ ಸರ್ಕಾರ ಇದ್ದಾಗ ಕೇಂದ್ರ ಸರ್ಕಾರ ಹೊಸ ಯೋಜನೆ ಮಾಡಿತು. ನಗರ ಪ್ರದೇಶ ಅಭಿವೃದ್ಧಿಗೆ ಯೋಜನೆ ಮಾಡಿದ್ರು. ಏಳು ನಗರಸಭೆ, ಕೆಂಗೇರಿ ಪಟ್ಟಣ ಪಂಚಾಯತ, ಬೆಂಗಳೂರು ಬೃಹತ್ ಪಾಲಿಕೆ ಮಾಡಿದ್ವಿ. ಅಲ್ಲದೇ 110 ಹಳ್ಳಿಗಳನ್ನ ಪಾಲಿಕೆ ಸೇರ್ಪಡೆ ಮಾಡಿದೆ. ಐದು ವರ್ಷದಲ್ಲಿ ಸುಮಾರು 25 ಸಾವಿರ ಕೋಟಿ ಅನುದಾನ ತಂದೆ ಎಂದು ಹೇಳಿದ್ದಾರೆ.
ಮೂರು ಹಂತದಲ್ಲಿ ಈ ಅನುದಾನ ತಂದು ಅಭಿವೃದ್ಧಿ ಮಾಡೋಕೆ ಚಿಂತನೆ ಮಾಡಿದ್ವಿ. ನಂತರ ನಮ್ಮ ಸರ್ಕಾರ ಹೋಯ್ತು. ಆಮೇಲೆ ಏನೆನಾಯಿತು ಅಂತ ನಾನು ಹೇಳಲು ಹೋಗಲ್ಲ. ಬೃಹತ್ ಬೆಂಗಳೂರು ನಗರ ಪಾಲಿಕೆಗೆ ಏಳು ನಗರ ಸಭೆ ಸೇರಿಸಿದ್ದೆ. 60 ಚದರ ಮೀಟರ್ 200 ರೂ, 120 ಚದರ ಮೀಟರ್ಗೆ 600 ರೂ ಮಾಡಿದ್ವಿ. ಇದನ್ನ ಪ್ರಶ್ನಿಸಿ ಕೆಲವರು ಕೋರ್ಟ್ ಗೆ ಹೋದ್ರು. ಕೋರ್ಟ್ ಕೂಡ ಹಲವಾರು ಆದೇಶ ಮಾಡಿದೆ. ಕೋರ್ಟ್ ಕೂಡ 15 ದಿನದಲ್ಲಿ ಖಾತೆ ಮಾಡಿಸಬೇಕು ಎಂದು ಆದೇಶ ಮಾಡಿದೆ. ಆ ಸಂದರ್ಭದಲ್ಲಿ 18/19 ಸಾವಿರ ತೆರಿಗೆ ಕಟ್ಟಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಖಾತೆ ವಿಚಾರದಲ್ಲಿ ಜನರಿಗೆ ಸಾಕಷ್ಟು ಅನ್ಯಾಯ ಆಗಿದೆ. ಇದರ ಬಗ್ಗೆ ಯಾರು ಮಾತನಾಡಿಲ್ಲ. ಅದು ನನಗೆ ತುಂಬಾ ಬೇಸರ ಆಯ್ತು. ಹೀಗಾಗಿ ನಾನು ಬಂದು ಮಾತನಾಡುತ್ತಿದ್ದೇನೆ. ಈ ವಿಚಾರ ಬಿಟ್ಟು ಬುರುಡೆ ಕಥೆಗಳು ಇವೆ.ಅದರ ಬಗ್ಗೆ ಮುಂದಿನ ವಾರ ಸುದ್ದಿಗೋಷ್ಠಿ ಮಾಡುತ್ತೇವೆ. ಹೊಸದಾಗಿ ಒಸಿ, ಸಿಸಿ ಅಂತ ಬೇರೆ ಮಾಡ್ತಿದ್ದಾರೆ. ಬೆಸ್ಕಾಂ ನಲ್ಲಿ 3 ರಿಂದ 4 ಲಕ್ಷ ಅರ್ಜಿ ಬಂದಿದೆ ಅಂತಾರೆ. ಇಲ್ಲಿ ಇವರ ದರ ಏನು? ಬಿಬಿಎಂಪಿ ಇದ್ದಾಗ ನೋಂದಣಿ ಮಾಡಿಸಿದ್ದಾರೆ. ಇದರಲ್ಲಿ 5% ಹೆಚ್ಚುವರಿ ಶುಲ್ಕ ಹೇರುತ್ತಿದ್ದಾರೆ. ಗ್ಯಾರಂಟಿ ಘೋಷಣೆ ಮಾಡಿದ್ರು, ಅದಕ್ಕೆ ಹಣ ಹೊಂದಿಸಲು ಆಗ್ತಿಲ್ಲ. ಐದು ಗ್ಯಾರಂಟಿ ಹೆಸರಿನಲ್ಲಿ ಲೂಟಿ ಹೊಡೆದಾಯ್ತು. ಈಗ ಎ ಖಾತಾ ಬಿ ಖಾತಾ ದಲ್ಲಿ ಲೂಟಿ ಹೊಡೆಯಲು ಮುಂದಾಗಿದ್ದಾರೆ. ಏನು ಉಪಯೋಗ ಇಲ್ಲ ಅಂತ ಸರ್ಕಾರದ ಆದೇಶವೇ ಇದೆ. 7/8 ಲಕ್ಷ ಖಾತೆಗಳಿವೆ ಎಂದು ಹೇಳ್ತಿದ್ದಾರೆ. ಸರ್ಕಾರದ ಆದೇಶ ಉಲ್ಲೇಖಿಸಿ ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದ್ದಾರೆ.
ನವೆಂಬರ್ ಐದರಿಂದ ಆರಂಭ ಆಗತ್ತೆ ಅಂತಿದ್ದಾರೆ. ಆಮೇಲೆ ಅಧಿಕಾರಿಗಳು ನಿಮ್ಮ ಮನೆಗೆ ಬರ್ತಾರೆ . ವಸೂಲಿ ಮಾಡಲು ಬರ್ತಾರೋ? ಟೇಬಲ್ ಕೆಳಗೆ ತಗೋಳ್ತಾರೋ ಗೊತ್ತಿಲ್ಲ. ತೆರಿಗೆ ಬಾಕಿ ಇದ್ರೆ ಅದನ್ನು ಕಟ್ಟಬೇಕು. ಇಲ್ಲವಾದರೆ ಕರೆಂಟ್ ಕನೆಕ್ಷನ್ ತೆಗೆದುಕೊಂಡು ದಿನದಿಂದ ಲೆಕ್ಕ ಹಾಕ್ತಾರೆ. ಎಸ್ ಆರ್ ವ್ಯಾಲ್ಯೂ ಮೇಲೆ 5% ಹೆಚ್ಚಳ ಮಾಡ್ತಾರೆ. ಯಾರೋ ಒಬ್ಬ ಜಮೀನು ತೆಗೆದುಕೊಂಡಿರ್ತಾರೆ. ಆ ಜಮೀನಿಗೆ ಈಗ ದುಡ್ಡು ಕಟ್ಟಬೇಕಾ . ನಾನು ಸಿಎಂ ಆಗಿದ್ದಾಗ ಐದು ಬಡಾವಣೆ ಮಾಡಲು ತೀರ್ಮಾನ ಮಾಡಿದ್ದೆ. ಶಿವರಾಂ ಕಾರಂತ ಬಡಾವಣೆ, ಕೇಂಪೆಗೌಡ ಅಂತ ಐದು ಬಡಾವಣೆ ಮಾಡಿದ್ದೆ. ನಮ್ಮ ಸರ್ಕಾರ ಹೋದ ನಂತರ ಸರಿ ಮಾಡಬೇಕಿತ್ತು. ಮಾಡಿದ್ರು ಈ ಸಮಸ್ಯೆ ಬಡಜನರಿಗೆ ಆಗ್ತಿರಲಿಲ್ಲ. ಸರ್ಕಾರದ ಖಜಾನೆ ಖಾಲಿ ಆಗಿದೆ. ಅದನ್ನು ತುಂಬಿಸಲು ಈ ರೀತಿ ಮಾಡ್ತಿದ್ದಾರೆ. ಎಷ್ಟು ದಿನ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿರಿ?. ರಾಜ್ಯದ ಜನರಿಗೆ ಓಪನ್ ಕರೆ ಕೊಡ್ತೇನೆ. ಎರಡು ವರ್ಷ ಈ ಸರ್ಕಾರ ಇರುತ್ತದೆ. ಯಾರು ಇದಕ್ಕೆ ದುಡ್ಡು ಕಟ್ಟೋಕೆ ಹೋಗಬೇಡಿ. ಜೆಡಿಎಸ್ ನಿಮ್ಮ ಜೊತೆಗೆ ಇರುತ್ತದೆ. ಹಿಂದೆ ಇದ್ದ ಹಾಗೆ ನೀವು ನಡೆದುಕೊಂಡು ಹೋದರೆ ಸಾಕು ಎಂದು ತಿಳಿಸಿದ್ದಾರೆ.











