ಬೆಂಗಳೂರು: ಬೆದರಿಕೆಗಳು ಆರ್ ಎಸ್ ಎಸ್ ಸಂಸ್ಕೃತಿ ತೋರಿಸುತ್ತೆ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
ಈ ರೀತಿ ಬೆದರಿಕೆ ವಿಡಿಯೋಗಳು 20 ಇವೆ. ಅನ್ ಎಡಿಟೆಡ್ ವಿಡಿಯೋ ಹಾಕಿದ್ದೇನೆ. ಬಿಜೆಪಿ ಅವರು ದಾಖಲೆ ಕೇಳಿದ್ರು, ಈಗ ರಿಲೀಸ್ ಮಾಡಿದ್ದೇನೆ. ದೂರು ಕೊಡುವ ಬಗ್ಗೆ ಚರ್ಚೆ ಮಾಡ್ತೀನಿ. ಗೃಹ ಸಚಿವ ಪರಮೇಶ್ವರ್ ಅವರ ಜೊತೆಯೂ ಮಾತಾಡ್ತೀನಿ. ದೂರು ಕೊಡುವುದು ಸುಲಭ, ಆದ್ರೆ ಆ ವ್ಯಕ್ತಿಗೆ ಶಿಕ್ಷೆ ಆಗುತ್ತೆ, ಆ ಮನಸ್ಥಿತಿ ತುಂಬಿದ ಆರ್ ಎಸ್ ಎಸ್ ಗೆ ಏನು ಶಿಕ್ಷೆ..?.ನ್ನ ಫೋನ್ ಸ್ವಿಚ್ ಆಫ್ ಮಾಡಿದ್ದೀನಿ ಈಗ. ಫೋನ್ ಸ್ವಿಚ್ ಆಫ್ ಮಾಡೋದೇ ಪರಿಹಾರ ಅಲ್ಲ. ಇನ್ನೂ ಕೆಟ್ಟದಾಗಿ ನನಗೆ ಬೈದಿದ್ದಾರೆ. ಆದ್ರೆ ನನ್ನ ಮರ್ಯಾದೆ ಉಳಿಸಿಕೊಳ್ಳಲು ಅದನ್ನ ರಿಲೀಸ್ ಮಾಡಿಲ್ಲ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ನಿನ್ನೆ ಬೆದರಿಕೆ ಕರೆ ಬಗ್ಗೆ ಪ್ರಸ್ತಾಪ ಮಾಡಿದ್ದೆ ಆಗ ಬಿಜೆಪಿಯವರು ಏನು ಹೇಳಿದರು?. ಇದು ಆರ್ ಎಸ್ ಎಸ್ ಸಂಸ್ಕೃತಿ ಅಲ್ಲ ಇದು ಪ್ರಿಯಾಂಕ್ ಖರ್ಗೆಯವರ ಪಬ್ಲಿಸಿಟಿ ಸ್ಟಂಟ್ ಅಂತ ಹೇಳಿದರು . ಬೆದರಿಕೆ ವಿಡಿಯೋ ನನ್ನ ಹತ್ತಿರ ಇದೆ ಆರ್ ಎಸ್ ಎಸ್ ಸಂಸ್ಕೃತಿ ಏನು ಅಂತ ತೋರಿಸಿದ್ದೇವೆ . ನಿನ್ನೆ ಬೆದರಿಕೆ ಕರೆ ಮಾಡಿದವನು ಆರ್ ಎಸ್ ಎಸ್ ನಿಂದ ಬಂದಿದ್ದೇನೆ ಆರ್ ಎಸ್ ಎಸ್ ಸಂಸ್ಕೃತಿ ಅಳವಡಿಸಿಕೊಂಡಿದ್ದೇನೆ ಎಂದಿದ್ದಾನೆ ನೀವೇ ನೋಡಿದ್ದೀರಾ. ಬಿಜೆಪಿಯವರು ಆರ್ ಎಸ್ ಎಸ್ ಅವರ ಶಾಖೆಯಲ್ಲಿ ಏನು ಕಲಿಸ್ತಾರೆ ಎಂಬುದರ ಉದಾಹರಣೆ ಇದು. ನೀವೇ ತೀರ್ಮಾನ ತೆಗೆದುಕೊಳ್ಳಿ. ಬಹಳ ದೊಡ್ಡ ದೊಡ್ಡ ಮಾತನಾಡುತ್ತಿದ್ದರಲ್ಲ ಬಿಜೆಪಿಯವರೆಲ್ಲ. ಆರ್ ಅಶೋಕ್ ಮಾತನಾಡುತ್ತಿದ್ದರಲ್ಲ ೨ ರೂಪಾಯಿ ಬೆಲೆ ಇಲ್ಲ ಈ ಕಾಲ್ ಗೆ ಅಂತ ಇದನ್ನ ತೋರಿಸಿ ಉತ್ತರ ಕೇಳಿ . ಆರ್ ಎಸ್ ಎಸ್ ಏನು ಎಂಬುದಕ್ಕೆ ಉತ್ತರ ನಾನು ಕೊಡಬೇಕಾ? ಉತ್ತರ ಇಲ್ಲಿಯೇ ಸಿಕ್ಕಿದೆಯಲ್ಲ . ಹಾಲಿ ಸಂಸದರು ಮಾಜಿ ಸಂಸದರು ಏನೆಲ್ಲಾ ಮಾತನಾಡಿದ್ದಾರೆ ಅದಕ್ಕೆ ಕ್ಷಮೆ ಕೇಳುತ್ತಾರಾ ನನಗೆ??. ಅಥವಾ ಇನ್ನಷ್ಟು ಬೆದರಿಕೆ ಕರೆ ಜಾಸ್ತಿ ಮಾಡುತ್ತಾರಾ?. ನನ್ನ ಫೋನನ್ನು ಸ್ವಿಚ್ ಆಫ್ ಮಾಡಿದ್ದೇನೆ . ಅವನ ಮೇಲೆ ಹರಾಸ್ಮೆಂಟ್ ಆಗುತ್ತದೆ ಅಷ್ಟೇ ಎಂದಿದ್ದಾರೆ.
ಅವನಲ್ಲಿ ಆಲೋಚನೆ ಹಾಕಿದ್ದಾರಲ್ಲ ಆ ವ್ಯಕ್ತಿಗಳು ಆರಾಮಾಗಿ ಓಡಾಡುತ್ತಾರೆ . ಮೂರ್ ನಂಬರ್ ಅಲ್ಲ ನೂರು ನಂಬರ್ ಮೇಲು ಕಂಪ್ಲೇಂಟ್ ಕೊಡಬಹುದು . ಆದರೆ ಆ ನೂರು ವ್ಯಕ್ತಿಗಳನ್ನ ಅಂತ ನೂರು ವ್ಯಕ್ತಿಗಳ ಮನಸ್ಸು ಬುದ್ದಿಯನ್ನು ಕಲುಷಿತ ಮಾಡಿದವರು ಹಾಗೆ ಓಡಾಡ್ತಾರಲ್ಲ. ನಾನು ಬಹಳ ಸ್ಪಷ್ಟವಾಗಿ ಹೇಳಲಿಕ್ಕೆ ಬಯಸುತ್ತೇನೆ . ನನ್ನ ಹೋರಾಟ ವ್ಯಕ್ತಿಗಳ ಮೇಲೆ ವೈಯಕ್ತಿಕ ಹೋರಾಟ ಅಲ್ಲ .ನನ್ನ ಹೋರಾಟ ಆರ್ ಎಸ್ ಎಸ್ ತತ್ವ ಸಿದ್ಧಾಂತದ ವಿರುದ್ಧ ನಾನಿದ್ದೇನೆ. ಆರ್ ಎಸ್ ಎಸ್ ದಾಖಲೆ ತೋರಿಸಲು ಹಿಂಜರಿಕೆನಾ?. ಬಿಜೆಪಿಯ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ನಿಂದನೆ ಹೇಗೆ ಮಾಡುತ್ತಿದ್ದಾರೆ . ಇವರ ನಾಯಕರೇ ವೈಯಕ್ತಿಕ ಟೀಕೆ ಮಾಡಿದರೆ ಅವರ ಕಾರ್ಯಕರ್ತರು ಸುಮ್ಮನೆ ಇರುತ್ತಾರ? . ಈ ತತ್ವ ಸಿದ್ಧಾಂತ ಗಾಂಧೀಜಿಯವರನ್ನು ಬಿಟ್ಟಿಲ್ಲ ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ.
ನಾನು ಅವರ ಕಾಲಿನ ಉಗುರಿನಷ್ಟೂ ಇಲ್ಲ ನನ್ನ ಬಿಡ್ತಾರಾ ಇವ್ರು . ಇವತ್ತು ಹಾಕಿರುವ ವಿಡಿಯೋ ಕೇವಲ ಸ್ಯಾಂಪಲ್ ಇನ್ನು ಬೇಕಾದ್ರೂ ಕೂಡ ಇದಕ್ಕಿಂತ ಅವಾಚ್ಯವಾಗಿ ಬೈದಿರುವ ವೀಡಿಯೋಗಳಿದೆ. ನನಗೆ ಹೇಸಿಗೆ ಬರುತ್ತದೆ ನನ್ನ ಮರ್ಯಾದೆ ಉಳಿಸಿಕೊಳ್ಳಲು ನಾನು ಎಲ್ಲವನ್ನು ಹಾಕಿಲ್ಲ . ನಾನು ಕೂಡ ಐಟಿಬಿಟಿ ಸಚಿವ ನಮಗೂ ತಂತ್ರಜ್ಞಾನ ಇಲ್ವಾ?. ಎಲ್ಲಿಂದ ಕರೆ ಬರುತ್ತಿದೆ ನನಗೂ ಗೊತ್ತಿದೆ. ರಾಹುಲ್ ಗಾಂಧಿಯವರು ಈ ತತ್ವದ ವಿರುದ್ಧ ಇದ್ದಾರಲ್ವಾ?. ಮಲ್ಲಿಕಾರ್ಜುನ ಖರ್ಗೆ ಸಿದ್ದರಾಮಯ್ಯ ಈ ತತ್ವದ ವಿರುದ್ದ ಇದ್ದಾರಲ್ಲವಾ?.ಅವರೆಲ್ಲ ಕಾಂಗ್ರೆಸ್ ಅಲ್ಲವಾ?. ಮೂರು ಜನರ ಬೆಂಬಲ ನನಗಿದೆ ಎಂದು ತಿಳಿಸಿದ್ದಾರೆ.











