ಮನೆ Latest News ಸಚಿವ ಸಂಪುಟ ಪುನ:ರಚನೆ ಪಾರ್ಟಿ ಮತ್ತು ಸಿಎಂ ಗೆ ಬಿಟ್ಟ ವಿಚಾರ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

ಸಚಿವ ಸಂಪುಟ ಪುನ:ರಚನೆ ಪಾರ್ಟಿ ಮತ್ತು ಸಿಎಂ ಗೆ ಬಿಟ್ಟ ವಿಚಾರ: ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ

0

ಬೆಂಗಳೂರು: ಸಚಿವ ಸಂಪುಟ ಪುನ:ರಚನೆ ಪಾರ್ಟಿ ಮತ್ತು ಸಿಎಂ ಗೆ ಬಿಟ್ಟ ವಿಚಾರ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನವೆಂಬರ್ ನಲ್ಲಿ ಸಚಿವ ಸಂಪುಟ ಪುನ:ರಚನೆ ವಿಚಾರದ ಬಗ್ಗೆ ಮಾತನಾಡಿದ ಅವರು ನನಗೆ ಯಾವ ವಿಚಾರನೂ ಗೊತ್ತಿಲ್ಲ ಎಂದರು.ಪಾರ್ಟಿ ಮತ್ತು ಸಿಎಂ ಗೆ ಬಿಟ್ಟ ವಿಚಾರ.ನನ್ನನ್ನು ಕರೆದು ಮಾತನಾಡಿದ್ರೆ ನಾನು ಏನು ಸಲಹೆ ಕೊಡಬೇಕು, ಕೊಡ್ತೀನಿ. ದಯವಿಟ್ಟು ರಿಕ್ವೆಸ್ಟ್ ಮಾಡುತ್ತೇನೆ. ಯಾವ ಚರ್ಚೆಗೂ ಆಸ್ಪದ ಕೊಟ್ಟು ಗೊಂದಲ ಕ್ರಿಯೇಟ್ ಮಾಡೋದು ಬೇಡ.ಎಲ್ಲರಿಗೂ ನಾನು ಮನವಿ ಮಾಡುತ್ತೇವೆ ಎಂದು ಹೇಳಿದರು.

ಬಿಗ್ ಬಾಸ್ ಗೆ ಅವಕಾಶ ಮಾಡಿಕೊಟ್ಟ ವಿಚಾರದ ಬಗ್ಗೆ ಮಾತನಾಡಿದ ಅವರು ರಾತ್ರಿನೇ ಡಿಸಿಗೆ ಫೋನ್ ಮಾಡಿ ಹೇಳಿದ್ದೇನೆ. ಅವರಿಗೊಂದು ಅವಕಾಶ ಕೊಡಿ, ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲಿ ಅಂತ ಹೇಳಿದ್ದೇನೆ. ನಮ್ಮ ಇಂಡಸ್ಟ್ರಿ ಬೆಳೆಯಬೇಕು. ಬೇಕಾದಷ್ಟು ಸಮಸ್ಯೆ ಇರುತ್ತೆ ಬಗೆಹರಿಸಿಕೊಳ್ತಾರೆ. ಅದೇನೂ ದೊಡ್ಡ ಫ್ಯಾಕ್ಟರಿ ಅಲ್ಲ ಎಂದು ತಿಳಿಸಿದರು. ರಾತ್ರಿನೇ ಡಿಸಿಗೆ ಪೋನ್ ಮಾಡಿ ಹೇಳಿದ್ದೇನೆ. ಅವರಿಗೊಂದು ಅವಕಾಶ ಕೊಡಿ, ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲಿ ಅಂತ ಹೇಳಿದ್ದೇನೆ. ನಮ್ಮ ಇಂಡಸ್ಟ್ರಿ ಬೆಳೆಯಬೇಕು. ಬೇಕಾದಷ್ಟು ಸಮಸ್ಯೆ ಇರುತ್ತೆ ಬಗೆಹರಿಸಿಕೊಳ್ತಾರೆ.
ಅದೇನೂ ದೊಡ್ಡ ಫ್ಯಾಕ್ಟರಿ ಅಲ್ಲ. ನಿನ್ನೆ ಯಾರೋ ಬಂದಿದ್ರು ಅವರಿಗೂ ಹೇಳಿ ಕಳಿಸಿದ್ದೇನೆ.ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಯಮಗಳನ್ನ ಪಾಲಿಸುವಂತೆ ಹೇಳಿದ್ದೇನೆ ಎಂದು ಹೇಳಿದರು.