ಮನೆ Latest News ಪವರ್ ಶೇರಿಂಗ್ ಏನಾದ್ರೂ ಗೊತ್ತಿದ್ರೆ ಮೂರು ಜನಕ್ಕೆ ಮಾತ್ರ : ಬಿ ಕೆ ಹರಿಪ್ರಸಾದ್ ಹೇಳಿಕೆ

ಪವರ್ ಶೇರಿಂಗ್ ಏನಾದ್ರೂ ಗೊತ್ತಿದ್ರೆ ಮೂರು ಜನಕ್ಕೆ ಮಾತ್ರ : ಬಿ ಕೆ ಹರಿಪ್ರಸಾದ್ ಹೇಳಿಕೆ

0

ಬೆಂಗಳೂರು: ಪವರ್ ಶೇರಿಂಗ್ ಏನಾದ್ರೂ ಗೊತ್ತಿದ್ರೆ ಮೂರು ಜನಕ್ಕೆ ಮಾತ್ರ  ಎಂದು ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ. ಪವರ್ ಶೇರಿಂಗ್ ಬಗ್ಗೆ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು  ಪವರ್ ಶೇರಿಂಗ್ ಏನಾದ್ರೂ ಗೊತ್ತಿದ್ರೆ ಮೂರು ಜನಕ್ಕೆ ಮಾತ್ರ. ಸೋನಿಯಾ,ರಾಹುಲ್, ಖರ್ಗೆಯವರಿಗೆ ಮಾತ್ರ. ಉಳಿದವರಿಗೆ ಅದರ ಬಗ್ಗೆ ಗೊತ್ತಿಲ್ಲ. ಬೇರೆಯವರು ಮಾತನಾಡಬಾರದು ಅಂತಾ ಸೂಚನೆಯಿದೆ. ಯಾರೂ ಇದರ ಬಗ್ಗೆ ಮಾತನಾಡಬಾರದು. ಒಂದು ವೇಳೆ ಯಾರಾದ್ರೂ ಮಾತನಾಡಿದ್ರೆ ಹೇಳ್ತಾರೆ. ಇದರ ಬಗ್ಗೆ ಸುರ್ಜೇವಾಲಾ ಮಾತನಾಡ್ತಾರೆ ಎಂದಿದ್ದಾರೆ.

ಅಧಿಕಾರ ಹಂಚಿಕೆ ವಿಚಾರದಲ್ಲಿ ಯಾರೇ ಮಾತನಾಡಿದರೂ ಅದು ಪಕ್ಷ ವಿರೋಧಿ ಕೆಲಸ. ಈ ಬಗ್ಗೆ ಮಾತನಾಡುವುದು ಪಕ್ಷಕ್ಕೆ ಹಾನಿ ಮಾಡಿದಂತೆ.ಯಾವ ಅಧಿಕಾರ ಹಂಚಿಕೆ ವಿಚಾರ ಇಲ್ಲ.  ಈ ಬಗ್ಗೆ ಯಾರಿಗೂ ಮಾತನಾಡುವ ಹಕ್ಕಿಲ್ಲ.  ಶಾಸಕ ರಂಗನಾಥ್ ಸೇರಿದಂತೆ ಈ ವಿಚಾರವಾಗಿ ಯಾರೆಲ್ಲಾ ಮಾತನಾಡಿದ್ದಾರೋ ಅವರಿಗೆ ನೋಟೀಸ್  ನೀಡಲಾಗುತ್ತದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಗೆ ಸೂಚಿಸಿದ್ದೇನೆ.  ಈ ವಿಚಾರವಾಗಿ ಚರ್ಚೆ ಮಾಡಬಾರದು ಎಂದು ಸ್ವತಃ ನಾನೇ ಹೇಳುತ್ತಿದ್ದೇನೆ. ನಿನ್ನೆ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ಹೇಳಿದ್ದರೂ ಕೆಲವು ಮಾಧ್ಯಮಗಳು ಬೇರೆ ರೀತಿ ಬರೆಯುತ್ತಿದ್ದಾರೆ. ಸಿದ್ದರಾಮಯ್ಯ ಅವರು ಹೇಳಿರುವ ಮಾತು ಅಂತಿಮ. ಅದರೆ ಮೇಲೆ ಈ ವಿಚಾರವಾಗಿ ಯಾರೂ ಚರ್ಚೆ ಮಾಡುವಂತಿಲ್ಲ.ಯಾರು ಈ ವಿಚಾರವಾಗಿ ಚರ್ಚೆ ಮಾಡುತ್ತಾರೋ ಅವರು ಪಕ್ಷಕ್ಕೆ ಡ್ಯಾಮೇಜ್ ಮಾಡಿದಂತೆ. ಸಿದ್ದರಾಮಯ್ಯ ಅವರ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ. ನನ್ನ ಪರವಾಗಿ ಮಾತನಾಡಿದರೂ ಪಕ್ಷಕ್ಕೆ ಹಾನಿ ಮಾಡಿದಂತೆ ಎಂದು ತಿಳಿಸಿದ್ದಾರೆ.

ಸರ್ಕಾರದಲ್ಲಿ ಅಧಿಕಾರ ಹಂಚಿಕೆ ವಿಚಾರವಾಗಿ ಚರ್ಚೆ ಮಾಡಿರುವ ಶಿವರಾಮೇಗೌಡ, ಶಾಸಕ ರಂಗನಾಥ್ ಅವರಿಗೂ ನೋಟೀಸ್ ನೀಡುವಂತೆ ನಿರ್ದೇಶನ ನೀಡಿದ್ದೇನೆ. ಈ ವಿಚಾರದಲ್ಲಿ ಮಾತನಾಡಿದರೆ ಜಿ.ಸಿ ಚಂದ್ರಶೇಖರ್ ಅವರಿಗೂ ನೋಟೀಸ್ ನೀಡುವಂತೆ ಹೇಳಿದ್ದೇನೆ. ನಮ್ಮಲ್ಲಿ ಶಿಸ್ತು ಇಲ್ಲವಾದರೆ ಪಕ್ಷ ಉಳಿಯುವುದಿಲ್ಲ. ಹೈಕಮಾಂಡ್ ನಿರ್ಧಾರವೇ ಅಂತಿಮವೇ ಎಂಬ ಪ್ರಶ್ನೆ. ಹೈಕಮಾಂಡ್ ಹೇಳಿದಂತೆ ಕೇಳುತ್ತೇವೆ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದಾರಲ್ಲ. ಅವರ ಮಾತೇ ಅಂತಿಮ. ನಮಗೆ ಪಕ್ಷ ಮುಖ್ಯ.  ಪಕ್ಷ ಹೇಳಿದಂತೆ ನಡೆಯುವ ಶಿಸ್ತಿನ ಸಿಪಾಯಿಗಳು ನಾವು ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ನವೆಂಬರ್ ಕ್ರಾಂತಿ ಫಿಕ್ಸ್ ಆಗಿದೆ ಎಂದು ಬಿಜೆಪಿ ನಾಯಕರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ ಪಕ್ಷದವರು ಅವರ ಪಕ್ಷದಲ್ಲಿನ ಕ್ರಾಂತಿ ಬಗ್ಗೆ ಚರ್ಚೆ ಮಾಡಿಕೊಳ್ಳಲಿ. ಅವರ ಆಂತರಿಕ ಸಮಸ್ಯೆ ಚರ್ಚೆ ಮಾಡಿ ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ. ಅವರಿಗೆ ಅಗತ್ಯ ಸೂಜಿದಾರವನ್ನು ನಾನು ಕಳುಹಿಸಿಕೊಡುತ್ತೇನೆ. ಅವರು ತಮ್ಮ ಪಕ್ಷದ ಹರುಕುಗಳನ್ನು ಹೊಲಿದುಕೊಳ್ಳಲಿ. ಅವರ ಪಕ್ಷದ ಕಾರ್ಯಕ್ರಮ ಅವರು ಮಾಡಿಕೊಳ್ಳಲಿ. ಆ ವಿಚಾರ ನನಗ್ಯಾಕೆ ಬೇಕು? ನಿಮಗೆ ಅದು ಬೇಕಾಗಿರಬಹುದು, ನಮಗೆ ಅದು ಬೇಡ. ನಮ್ಮ ಆಲೋಚನೆ ದೇಶ, ಸ್ವಾತಂತ್ರ್ಯ ವಿಚಾರ, ಗಾಂಧೀಜಿ ಅವರ ವಿಚಾರಧಾರೆಯಂತೆ.. ಈಶ್ವರ, ಅಲ್ಲಾ ತೇರೆ ನಾಮ್ ಎಂಬುದನ್ನು ನಾವು ಸ್ಮರಿಸುತ್ತೇವೆ.  ಬಿಜೆಪಿಯವರು ಅಲ್ಲಾ ಎಂದು  ಮಾತನಾಡುತ್ತಾರಾ?  ಗಾಂಧೀಜಿ ಅವರ ಸಂದೇಶವನ್ನು ಬಿಜೆಪಿ ಪಾಲಿಸುತ್ತದೆಯೇ? ನಮ್ಮ ನಾಡಗೀತೆಯಲ್ಲೂ ಹಿಂದೂ, ಕ್ರೈಸ್ತ ಮುಸಲ್ಮಾನ, ಪಾರಸಿಕ ಜೈನರುದ್ಯಾನ ಎಂಬ ಸಾಲಿದೆ. ನಮ್ಮದು ಸರ್ವಜನಾಂಗದ ಶಾಂತಿಯ ತೋಟ ಎಂದು ಹೇಳಲಾಗಿದೆ. ಈ ಎಲ್ಲಾ ವಿಚಾರಧಾರೆಗಳನ್ನು ಸೇರಿಸಿ ಈ ದೇಶದ ಅಡಿಪಾಯ ನಿರ್ಮಾಣದ ಮಾಡಲಾಗಿದೆ. ಇವುಗಳಿಂದ ಬಿಜೆಪಿಯವರು ತಪ್ಪಿಸಿಕೊಳ್ಳಲು ಆಗುವುದಿಲ್ಲ. ಅದರಲ್ಲೇ ಅವರು ಜೀವನ ಮಾಡಬೇಕು. ವಲ್ಲಭಬಾಯ್ ಪಟೇಲ್ ನಿಷೇಧ ಮಾಡಿದ್ದರು. ಸಂವಿಧಾನದ ಅಡಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ರು. ಪ್ರಧಾನಿಯವರು ಸ್ವೀಕಾರ ಮಾಡಿದ್ರು.ಅವರು ಆರ್ ಎಸ್ ಎಸ್ ದಿನಾಚರಣೆ ಮಾಡ್ತಾರೆ. ತ್ರಿವರ್ಣ ಧ್ವಜದ ಬಗ್ಗೆ ಗೌರವ ಇಟ್ಟಿಲ್ಲ.ಅವರು ಈ ಆಚರಣೆ ಮಾಡಿದ್ದು ಕರಾಳ ದಿನ. ಬ್ರಿಟಿಷರ ಬೂಟ್ ಕಾಲ್ ನೆಕ್ಕುತ್ತಿದ್ದವರು. ಬ್ರಿಟಿಷರ ಜೊತೆ ಶಾಮೀಲಾದವರು  ಸಾರ್ವರ್ಕರ್.ಅಂತಹ ಆಚರಣೆಯನ್ನ ಮಾಡಲಾಗ್ತಿದೆ. ಇದು ಸ್ವತಂತ್ರ್ಯ ಹೋರಾಟಗಾರರಿಗೆ ಮಾಡಿದ ಅಪಮಾನ ಎಂದಿದ್ದಾರೆ.