ಬೆಂಗಳೂರು: ನಾನು ಬಿಜೆಪಿ ಮಂತ್ರಿಯಾಗಿದ್ದೆ, ಬಿಜೆಪಿ ಅವರು ಬೆಂಗಳೂರು ಅಭಿವೃದ್ಧಿಗೆ ಏನು ಕೊಟ್ರು ಎಂದು ಶಾಸಕ ಎಸ್.ಟಿ. ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ ಶಾಸಕರು ಗುಂಡಿಗಳನ್ನ ಮಾನಿಟರ್ ಮಾಡುತ್ತಿಲ್ಲ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿ ಸರ್ಕಾರ ಇದ್ದಾಗ ಬಿಜೆಪಿ ಅವರು ಏನು ಮಾಡಿದ್ರು.?.ನಾನು ಬಿಜೆಪಿ ಮಂತ್ರಿಯಾಗಿದ್ದೆ, ಬಿಜೆಪಿ ಅವರು ಬೆಂಗಳೂರು ಅಭಿವೃದ್ಧಿಗೆ ಏನು ಕೊಟ್ರು? ಎಂದು ಪ್ರಶ್ನಿಸಿದ್ದಾರೆ.
ಕಾಮೆಂಟ್ ಮಾಡುವುದು ಸುಲಭ. ನಿರಂತರ ಮಳೆ ಬರ್ತಿದೆ, ಮಳೆ ಬಂದಾಗ ರಸ್ತೆ ಮುಚ್ಚಲು ಸಾಧ್ಯವಾಗುತ್ತಾ?. ಮಳೆ ನಿಂತ ಬಳಿಕ ಎಲ್ಲ ರಸ್ತೆಗೆ ಟಾರ್ ಹಾಕುವ ಕೆಲಸ ಮಾಡ್ತಾರೆ. ಬೆಂಗಳೂರು ಮೈಸೂರು ರಸ್ತೆಗೆ 16 ಕೋಟಿ ವೆಚ್ಚದಲ್ಲಿ ಟಾರ್ ಹಾಕುತ್ತಿದ್ದಾರೆ ಎಂದು ಸರ್ಕಾರದ ಪರ ಎಸ್.ಟಿ.ಸೋಮಶೇಖರ್ ಬ್ಯಾಟ್ ಬೀಸಿದ್ದಾರೆ. ಬಿಜೆಪಿ ಅವಧಿಯಲ್ಲೂ ಮಳೆ ಬರ್ತಿದ್ರಿಂದ ಕಾಮಗಾರಿ ಮಾಡಲು ಸಾಧ್ಯವಾಗಿಲ್ಲ
ಎಲ್ಲ ಮುಖ್ಯ ರಸ್ತೆಗಳಿಗೆ ವೈಟ್ ಟ್ಯಾಪಿಂಗ್ ಮಾಡಿದ್ರೆ ಗುಂಡಿ ಬೀಳಲ್ಲ. ಅದು ಒಳ್ಳೆ ನಿರ್ಧಾರ ಎಂದ ಅವರು ಬಿಜೆಪಿ ಶಾಸಕರ ಅನುದಾನ ನೀಡಿಲ್ಲ ಎಂಬ ವಿಪಕ್ಷ ನಾಯಕ ಆರ್.ಅಶೋಕ್ ಆರೋಪ ವಿಚಾರದ ಬಗ್ಗೆ ಮಾತನಾಡಿ ಅವರು ಸುಳ್ಳು ಹೇಳುತ್ತಿದ್ದಾರೆ ಎಂದ್ರು. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಂತ ಅಲ್ಲ, ಎಲ್ಲರಿಗೂ ಅನುದಾನ ಕೊಟ್ಟಿದ್ದಾರೆ. ಮಹದೇವಪುರಕ್ಲೆ 140 ಕೋಟಿ ಕೊಟ್ಟಿದ್ದಾರೆ. ಅದು ಬಿಜೆಪಿ ಶಾಸಕರಿರುವ ಕ್ಷೇತ್ರ ಅಲ್ವಾ?. ಬಿಜೆಪಿ ವಿಪಕ್ಷ ನಾಯಕ ಆರ್.ಅಶೋಕ್ 100% ಸುಳ್ಳು ಹೇಳುತ್ತಿದ್ದಾರೆ.27 ಕ್ಷೇತ್ರ ಸರ್ವೇ ಮಾಡಿ ರಾಜ ಕಾಲುವೆಗೆ ಎಷ್ಟು ಕೊಟ್ಟಿದ್ದಾರೆ ಅಂತ ಗೊತ್ತಾಗುತ್ತೆ.ಬೇದ ಭಾವ ಮಾಡದೇ ಎಲ್ಲರಿಗೂ ಅನುದಾನ ಹಂಚಿಕೆ ಮಾಡಿದ್ದಾರೆ ಎಂದರು.
ಸರ್ವೇಯಲ್ಲಿ ಭಾಗಿಯಾಗಬೇಡಿ ಎಂಬ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ರಾಜ್ಯ ಒಕ್ಕಲಿಗರ ಸಂಘದ ಸಭೆಯಲ್ಲಿ ಆರ್.ಅಶೋಕ್, ಕುಮಾರಸ್ವಾಮಿ, ಡಿಸಿಎಂ, ನಾನು ಸೇರಿದಂತೆ ಎಲ್ಲರೂ ಭಾಗಿಯಾಗಿದ್ರು.ಸಮೀಕ್ಷೆಗೆ ಸಹಕಾರ ಕೊಡಬೇಕು ಅಂತ ಅವತ್ತು ಹೇಳಿದ್ರು. ಬಿಜೆಪಿ ನಾಯಕರು ಹೊರಗೊಂದು ಒಳಗೊಂದು ಯಾಕೆ?. ಜನರಿಗೆ ಅವರು ಸಮೀಕ್ಷೆಯಲ್ಲಿ ಭಾಗಿಯಾಗಬೇಡಿ ಅಂದ್ರೆ ಜನ ಬುದ್ದಿವಂತರಲ್ವಾ?. ಪ್ರತಿ ಪಂಚಾಯಿತಿಯಲ್ಲೂ ಸಭೆ ಮಾಡುತ್ತಿದ್ದೇನೆ.ಕೇಂದ್ರ ಸರ್ಕಾರ ಸಮೀಕ್ಷೆ ಮಾಡುವುದು 27ಕ್ಕೆ. ಅದಕ್ಕೂ, ಇದಕ್ಕೂ ಸಂಬಂಧ ಏನೀದೆ?. ಬರೀ ಬಿಜೆಪಿ ನಾಯಕರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.











