ಮನೆ Blog ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಕ್ಕಾಗಿಯೇ ಸಮೀಕ್ಷೆ ನಡೆಸುತ್ತಿದ್ದಾರೆ; ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಕ್ಕಾಗಿಯೇ ಸಮೀಕ್ಷೆ ನಡೆಸುತ್ತಿದ್ದಾರೆ; ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು; ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುಕ್ಕಾಗಿಯೇ ಸಮೀಕ್ಷೆ ನಡೆಸುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಸದ ಮಾಧುರ್ಯ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಆರ್.ಅಶೋಕ್ ಕರೂರು ದುರಂತಕ್ಕೆ ದೇಶವೇ ಬೆಚ್ಚಿ ಬೆರಗಾಗಿದೆ. ದೇಶದ ಇತಿಹಾಸದಲ್ಲಿ ಹಿಂದೆದೂ ಆಗಿಲ್ಲ. ಸಣ್ಣಪುಟ್ಟ ಮಕ್ಕಳು ಕೂಡ ಸಾವನ್ನಪ್ಪಿದ್ದಾರೆ. ಸಿಎಂ, ಡಿಸಿಎಂ ಬೆಂಗಳೂರಿನಲ್ಲೂ ಇದೆ ರೀತಿ ಅವಾಂತರ ಮಾಡಿದ್ದರು. ಟಿವಿಕೆ ಪಾರ್ಟಿ ಕಾರ್ಯಕ್ರಮದಲ್ಲೂ ಇದೆ ರೀತಿ ದುರಂತ ಆಗಿದೆ. ಡಿಎಂಕೆ‌ ಸರಕಾರ ಇರದರಿಂದ ನುಣಿಚಿಕೊಳ್ಳುತ್ತಿದೆ. ನಟನ ವಿರುದ್ಧ ದೂರು‌ ದಾಖಲಿಸಿಲು ಯೋಚನೆ ಮಾಡುತ್ತಿದೆ. ಪೊಲೀಸ್ ಬಂದೋಬಸ್ತ್ ಯಾಕೆ ಮಾಡಿಲ್ಲ. ಹೈಕೋರ್ಟ್ ಕೂಡ ಜನಸಂದಣಿ ಬಗ್ಗೆ ಛಾಟಿ ಬೀಸಿತ್ತು. ವಿಜಯ್ ಅವರದ್ದು ಕೂಡ ತಪ್ಪು ಇದೆ. ಆಸ್ಪತ್ರೆಗೆ ಬರಬೇಕಿತ್ತು, ಜನರಲ್ಲಿ ಕ್ಷಮೆ ಕೇಳಿಲ್ಲ. ಸಿಟ್ಟಿಂಗ್ ನ್ಯಾಯಾಧೀಶರ ಮೂಲಕ ತನಿಖೆ ನಡೆಯಬೇಕು. 50 ಜನರ ಸಾವಿಗೆ ಸಿಎಂ ಸ್ಟಾಲಿನ್ ನೇರ ಕಾರಣ . ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.

ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಗೆ ಅಸಹಕಾರ ನೀಡುವ ಬಗ್ಗೆ ನಮ್ಮಲ್ಲಿ ಚರ್ಚೆ ಆಗಿಲ್ಲ. ವೈಯಕ್ತಿಕ ಮಾಹಿತಿ ಬಹಿರಂಗವಾಗಬಾರದು ಎಂದು ಹೈಕೋರ್ಟ್ ಹೇಳಿದೆ. ಇರಿಟೇಷನ್ ಆಗುವಂತಹ ಪ್ರಶ್ನೆಗಳನ್ನು ಕೇಳಿದ್ದಾರೆ. ರಾಜ್ಯದ ಜನರಿಗೆ ಕೇಳಿಕೊಳ್ಳುತ್ತೇನೆ ಎಲ್ಲ ಮಾಹಿತಿಗೆ ಉತ್ತರ ಕೊಡಬೇಕಿಲ್ಲ. ರಾಜ್ಯದ ಖಜಾನೆಯಲ್ಲಿ ದುಡ್ಡಿಲ್ಲ.  ಯೋಜನೆಗಳನ್ನು ರದ್ದು ಮಾಡೊಕ್ಕಾಗಿಯೇ ಸಮೀಕ್ಷೆ ನಡೆಸುತ್ತಿದ್ದಾರೆ. ಫ್ರೀ ಯೋಜನೆಗಳಿಗೆ ಕತ್ತರಿ ಹಾಕಲು ಸಮೀಕ್ಷೆ ಮಾಡುತ್ತಿದ್ದಾರೆ. ಸರಕಾರದಿಂದ ಯಾವುದೇ ನೇಮಕಾತಿ ಆಗುತ್ತಿಲ್ಲ. ಮುಂದಿನ ಬಜೆಟ್ ಸಿದ್ದರಾಮಯ್ಯ ನವರಿಗೆ ಕಗ್ಗಂಟಾಗಿದೆ. ಸಾಮಾಜಿಕ,ಶೈಕ್ಷಣಿಕ ಸಮೀಕ್ಷೆ ಅಲ್ಲ, ಸಿದ್ದರಾಮಯ್ಯನವರ ಜಾತಿ ಸಮೀಕ್ಷೆ.  ನಾಮದ ಸಮೀಕ್ಷೆ ,ಪಂಗನಾಮದ ಸಮೀಕ್ಷೆ . ಎಲ್ಲಾ ವೈಯಕ್ತಿಕ ಮಾಹಿತಿಯನ್ನು ಕೊಡಲು ಹೋಗಬೇಡಿ ಎಂದು ಎಚ್ಚರಿಸಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ಉತ್ತರಕರ್ನಾಟಕದ ನೆರೆ ಪ್ರವಾಸ ಮಾಡುತ್ತಿದ್ದೇವೆ. ಪಕ್ಷದ ಅಧ್ಯಕ್ಷರು ಪ್ರವಾಸ ಮಾಡುತ್ತಿದ್ದಾರೆ. ನೆರೆ ಬಂದಾಗ ಹಿಂದೆ ನಮ್ಮ ಸರಕಾರ ಏನೆಲ್ಲ ಸವಲತ್ತು ಕೊಡುತ್ತಿದ್ದೇವು.ಈ ಮನೆಹಾಳ ಸರಕಾರ ಏನು ಮಾಡುತ್ತಿಲ್ಲ. ರೈತರಿಗೆ ಬೆಳೆ ಪರಿಹಾರವನ್ನು ಸರಕಾರ ಕೊಟ್ಟಿಲ್ಲ. ಜಾತಿ ಸಮೀಕ್ಷೆಯ ಮೂಲಕ ರಾಜ್ಯದ ಸಮಸ್ಯೆಗಳನ್ನು ಮರೆಮಾಚಲಾಗುತ್ತಿದೆ ಎಂದರು.