ಮನೆ Blog ಪ್ರತಾಪ್ ಸಿಂಹ ತಮ್ಮದು ತಾವು ನೋಡಿಕೊಳ್ಳಲಿ ; ಎಂ ಬಿ ಪಾಟೀಲ್ ಗರಂ

ಪ್ರತಾಪ್ ಸಿಂಹ ತಮ್ಮದು ತಾವು ನೋಡಿಕೊಳ್ಳಲಿ ; ಎಂ ಬಿ ಪಾಟೀಲ್ ಗರಂ

0

ಬೆಂಗಳೂರು; ಪ್ರತಾಪ್ ಸಿಂಹ ತಮ್ಮದು ತಾವು ನೋಡಿಕೊಳ್ಳಲಿ ಎಂದು ಪ್ರತಾಪ್ ಸಿಂಹ ಅವರ ಹೇಳಿಕೆಗೆ  ಎಂ ಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಶಿವ, ಬಸವಣ್ಣನವರು ಯಾಕೆ ಲಿಂಗವನ್ನು ಕೈಯಲ್ಲಿ ಕೊಟ್ಟರು?. ಬಹಳಷ್ಟು ಜನರಿಗೆ ಆ ಕಾಲದಲ್ಲಿ ದೇವಸ್ಥಾನಕ್ಕೆ ಹೋಗುವುದಕ್ಕೆ ಅವಕಾಶ ಇರಲಿಲ್ಲ. ದೇಹವೇ ದೇಗುಲ ನೀನೇ ದೇವರೇ ನಿನ್ನ ದೇಹವೇ ದೇಗುಲ ಎಂದರು. ಅಷ್ಟು ಕೂಡ ಪ್ರತಾಪ್ ಸಿಂಹಗೆ ಗೊತ್ತಿಲ್ಲ ಅಂದರೆ

ಬಸವಣ್ಣವರು ಯಾಕೆ ಬಸವ ಧರ್ಮವನ್ನು ಸ್ಥಾಪನೆ ಮಾಡಿದರು?  ಕೆಲವೊಂದು ವ್ಯತ್ಯಾಸಗಳು ಅಸ್ಪೃಶ್ಯತೆ ಅಸಮಾನತೆ ಅನಿಷ್ಟ ಪದ್ದತಿಗಳು ಮೂಢನಂಬಿಕೆಗಳು.  ಇದಕ್ಕಾಗಿ ಎಲ್ಲಾ ಕಾಯಕ ಸಮಾಜವನ್ನ ಒಟ್ಟುಗೂಡಿಸಿ ಅನುಭವ ಮಂಟಪ ಮಾಡಿದರು. ಪ್ರತಾಪ್ ಸಿಂಹಗೆ ಅಷ್ಟು ಕೂಡ ಗೊತ್ತಿಲ್ಲ. ಪ್ರತಾಪ್ ಸಿಂಹ ಪೂಜೆ ಮಾಡುವಾಗ ಅವರ ಮನೆಯವರಿಗೆ ಕೇಳಿದರೆ ಏನು ಹೇಳುತ್ತಾರೆ ?. ಪ್ರತಾಪ್ ಸಿಂಹ ಪೂಜೆ ಮಾಡುತ್ತಿದ್ದಾರೆ ಎನ್ನುತ್ತಾರೆ .ಆದರೆ ನಮ್ಮ ಲಿಂಗಾಯಿತರ ಮನೆಯಲ್ಲಿ ಕೇಳಿದರೆ ಪೂಜೆ ಮಾಡಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ಪೂಜೆ ಮಾಡ್ತಿದ್ದಾರೆ ಎನ್ನುವುದು ಬೇರೆ ಪೂಜೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದೇ ಬೇರೆ .ಇದರ ಬಗ್ಗೆ ದೊಡ್ಡ ಪ್ರವಚನವನ್ನೇ ಹೇಳಬಹುದು ಎಂದಿದ್ದಾರೆ.

ವೀರಶೈವರು ಲಿಂಗಾಯಿತರಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದೇ ಇದೆ ವೀರಶೈವರೇ ಬೇರೆ ಲಿಂಗಾಯಿತರೇ ಬೇರೆ. ವೀರಶೈವರು ಹಿಂದೂ ಧರ್ಮದ ಒಂದು ಭಾಗ. ಬಸವಣ್ಣ ಶ್ರೇಷ್ಠ ಶೈವ. ನಮ್ಮ ಜಿಲ್ಲೆಯಿಂದ ಬಂದವರು. ನಾನು ಬಸವಣ್ಣನ‌ ಜಿಲ್ಲೆಯವನು. ಸೈದ್ದಾಂತಿಕ ಭಿನ್ನಾಭಿಪ್ರಾಯ ಇದಾವೆ. ಬ್ರಾಹ್ಮಣರಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯ ಇಲ್ವಾ?.

ನಾಲ್ಕು ನಾಲ್ಕು ಪಂಗಡಗಳು ಬ್ರಾಹ್ಮಣರಲ್ಲಿ‌ ಇಲ್ವಾ. ನಮ್ಮಲ್ಲೂ ವೀರಶೈವ ಲಿಂಗಾಯತ ಬೇರೆ ಬೇರೆ.ವೀರಶೈವ ಆಚರಣೆ ಬೇರೆ, ಲಿಂಗಾಯತ ಆಚರಣೆಯೇ ಬೇರೆ. ನಾವೆಲ್ಲರೂ ಲಿಂಗಾಯತರು, ವೀರಶೈವ ಅದರ ಒಂದು ಭಾಗ ಅಷ್ಟೇ. ಮೈಸೂರು ಸಮೀಕ್ಷೆಯಲ್ಲಿ ಮದ್ರಾಸ್ ಸಮೀಕ್ಷೆಯಲ್ಲಿ ಲಿಂಗಾಯತರು ಚತುರ್ವರ್ಣದ ಭಾಗವಲ್ಲ ಎಂದು ದಾಖಲಾಗಿದೆ. ಜೈನರು ಸಿಖ್ಖರು ಹೇಗೋ ಹಾಗೆಯೇ ಲಿಂಗಾಯತರು. ಮದ್ರಾಸ್ ಸಮೀಕ್ಷೆಯಲ್ಲಿ ಕೂಡ ಶೈವರು, ವೈಷ್ಣವರು, ಲಿಂಗಾಯತರು ಅಂತ ದಾಖಲಾಗಿದೆ. ನಾನು ಧರ್ಮದ ಕಾಲಂನಲ್ಲಿ ಲಿಂಗಾಯತ ಅಂತಲೇ ಬರೆಸುತ್ತೇನೆ. ನಾನು ಲಿಂಗಾಯತ. ವೀರಶೈವ ಅದರ ಒಂದು ಭಾಗ.ವೀರಶೈವರು ಲಿಂಗಾಯತರನ್ನು ಅನುಸರಿಸಿದವರು.

ಜನರಿಗೆ ಮೊದಲು ಅರ್ಥ ಆಗಿರಲಿಲ್ಲ, ಈಗ ಅರ್ಥ ಆಗುತ್ತಿದೆ. ನಾನು ದೊಡ್ಡ ಚರ್ಚೆಗೆ ಮುಂದಾಗುವುದಿಲ್ಲ. ಸ್ವಾತಂತ್ರ್ಯ ನಂತರ ಇಂಡಿಕ್‌ ರಿಲೀಜಿಯನ್ಸ್ ಗಳಿಗೆ ಮಾನ್ಯತೆ ಸಿಕ್ಕಿದೆ. ಜೈನರಿಗೆ ಯುಪಿಎ ಸರ್ಕಾರದ ಅವಧಿಯಲ್ಲೇ ಮಾನ್ಯತೆ ಸಿಕ್ಕಿದೆ. ಹಾಗೆ ನೋಡಿದರೆ ಭಾರತದಲ್ಲಿ ಇರುವವರೆಲ್ಲ ಭೌಗೋಳಿಕವಾಗಿ ಹಿಂದೂಗಳು. ಮೋದಿಯವರೇ ಹಿಂದೂ ಒಂದು ಧರ್ಮ ಅಲ್ಲ ಅದೊಂದು ವೇ ಆಫ್ ಲೈಫ್ ಎಂದಿದ್ದಾರೆ. ಭೌಗೋಳಿಕವಾಗಿ ನಾವೆಲ್ಲ ಹಿಂದೂಗಳೇ.೧೪೦ ಕೋಟಿ ಜನರೂ ಕೂಡ ಭೌಗೋಳಿಕವಾಗಿ ಹಿಂದೂಗಳೇ. ನಾವು ಹಿಂದೂ ವಿರೋಧಿಗಳೂ ಅಲ್ಲ. ಬಸವಣ್ಣ ಶ್ರೇಷ್ಠ ಶೈವರು, ಅವರು ಅಲ್ಲಿಯೇ ಮುಂದುವರಿಯಬಹುದಿತ್ತಲ್ಲಾ?.ನಮ್ಮ ಸ್ಟ್ಯಾಂಡ್ ಒಂದೇ, ಬಸವ ಧರ್ಮ ಲಿಂಗಾಯತ ಧರ್ಮ ಎಲ್ಲ ಒಂದೇ ಎಂದಿದ್ದಾರೆ.