ಮನೆ Blog ಪ್ರತ್ಯೇಕ ಧರ್ಮ ಎನ್ನುವ ಸಿದ್ದರಾಮಯ್ಯ ನವರ ಪಿತೂರಿಗೆ ಸ್ವಾಮೀಜಿಗಳು ಬಲಿಯಾಗಬೇಡಿ: ಮಾಜಿ‌ ಸಂಸದ ಪ್ರತಾಪ್...

ಪ್ರತ್ಯೇಕ ಧರ್ಮ ಎನ್ನುವ ಸಿದ್ದರಾಮಯ್ಯ ನವರ ಪಿತೂರಿಗೆ ಸ್ವಾಮೀಜಿಗಳು ಬಲಿಯಾಗಬೇಡಿ: ಮಾಜಿ‌ ಸಂಸದ ಪ್ರತಾಪ್ ಸಿಂಹ ಮನವಿ

0

ದಾವಣಗೆರೆ: ಪ್ರತ್ಯೇಕ ಧರ್ಮ ಎನ್ನುವ ಸಿದ್ದರಾಮಯ್ಯ ನವರ ಪಿತೂರಿಗೆ ಸ್ವಾಮೀಜಿಗಣಗಳು ಬಲಿಯಾಗಬೇಡಿ ಎಂದು ಮಾಜಿ‌ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದ್ದಾರೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ಯಲ್ಲಿ ಮಾತನಾಡಿದ ಮಾಜಿ‌ ಸಂಸದ ಪ್ರತಾಪ್ ಸಿಂಹ ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಕಿಡಿಕಾರಿದ್ದಾರೆ. ರಾಹುಲ್ ಗಾಂಧಿಯವರನ್ನು ಮುಚ್ಚಿಸಲು ರಾಜ್ಯ ಸರ್ಕಾರ ಜಾತಿಗಣತಿ ಮಾಡ್ತಾ ಇದ್ದಾರೆ. ಹಿಂದೂಗಳ ಜಾತಿಗಳ ಮುಂದೆ ಕ್ರಿಶ್ಚಿಯನ್ ಸೇರಿಸಿದ್ದಾರೆ. ಜಾತಿ ಆಧಾರದ ಮೇಲೆ ಹಿಂದೂಗಳನ್ನು ಹೊಡೆಯಲು ಹೊರಟಿದ್ದಾರೆ. ಮೊದಲ ಬಾರಿ ಸಿಎಂ ಆಗಿದ್ದಾಗ ವೀರಶೈವ – ಲಿಂಗಾಯತ ಎಂದು ಹೊಡೆಯಲು ಸಿದ್ದರಾಮಯ್ಯ ಹೋಗಿದ್ದರು. ಆಗ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು ಸಿದ್ದರಾಮಯ್ಯ ಹೀನಾಯವಾಗಿ ಸೋತರು.ಈಗ ಜಾತಿ ಗಣತಿ ಹೆಸರಿನಲ್ಲಿ ಬೇರೆ ಬೇರೆ ಧರ್ಮ ಬರೆಸಲು ಅವಕಾಶ ನೀಡಿದ್ದೀರಿ. ಎಂದು ಧರ್ಮದ ಕಾಲಂ ನಲ್ಲಿ ಲಿಂಗಾಯತ ಎಂದು ಬರೆಸಲು ಹೇಳಿದ ಸ್ವಾಮೀಜಿ ಗಳ ವಿರುದ್ದ ಪ್ರತಾಪ್ ಸಿಂಹ ಕಿಡಿಕಾರಿದ್ದಾರೆ.

ಸಿದ್ದರಾಮಯ್ಯ ನವರ ಗಾಳಕ್ಕೆ ಸ್ವಾಮೀಜಿ ಗಳು ಬಲಿಯಾಗಲು ಹೋಗಬೇಡಿ. ನಮ್ಮದು ಪ್ರತ್ಯೇಕ ಧರ್ಮ ಎಂದು ಕೆಲ ಸ್ವಾಮೀಜಿಗಳು ಹೂಹಿತಪೂರಕವಾಗಿ ಮಾತನಾಡುತ್ತಿದ್ದಾರೆ.
ನಮ್ಮ ಹಿಂದೂಗಳ ದೇವರು ಯಾರು ಎಂದರೆ ನಾವು ಬ್ರಹ್ಮ ವಿಷ್ಣು ಮಹೇಶ್ವರ ಎಂದು ಹೇಳುತ್ತೇವೆ. ಹಾಗೇ ಅಯಾ ಧರ್ಮಕ್ಕೆ ದೇವರು ಕೂಡ ಇವೆ ಅವರು ಪೂಜೆ ಮಾಡ್ತಾರೆ. ಆದರೆ ಪ್ರತ್ಯೇಕ ಧರ್ಮ ಎಂದು ಕಾವಿ ಹಾಕಿಕೊಂಡು ನಾಲ್ಕು ಸ್ವಾಮೀಜಿ ಗಳು ಓಡಾಡುತ್ತಿದ್ದಾರೆ. ಹಾಗಾದ್ರೆ ನಿಮ್ಮ ಧರ್ಮದ ದೇವರು ಯಾರು ಹೇಳಿ. ಬಸವಣ್ಣನವರ ತಮ್ಮ ವಚನದಲ್ಲಿ ಕೂಡಲಸಂಗಮ ಎಂದು ಹೇಳುತ್ತಾರೆ. ಕೂಡಲಸಂಗಮ ಎಂದರೆ ಶಿವ, ಈಶ್ವರನನ್ನು ಕೂಡಲ ಸಂಗಮ‌ಎಂದು ಕರೆಯುತ್ತಿದ್ದರು. ಶಿವನೂ ನಮ್ಮವನೇ ಭಸ್ಮಾನೂ ನಮ್ಮದೆ, ಕಾವಿನೂ ರುದ್ರಾಕ್ಷೀ ಕೂಡ ಸನಾತನ ಧರ್ಮಕ್ಕೆ ಸೇರಿದ್ದು
ಎಲ್ಲಾ ಸನಾತನ ಧರ್ಮಕ್ಕೆ ಸೇರಿದು ಇರೋದು ಹಾಗಾದ್ರೆ ಎಲ್ಲಿ ಬಂದು ಪ್ರತ್ಯೇಕ ಧರ್ಮ ವಿಚಾರ ರಹಿತರಾಗಿ ಮಾತನಾಡುತ್ತಿದ್ದಾರೆ ಎಂದರೆ ಹೇಗೆ.ಹಾಗಾದ್ರೆ ಪ್ರತ್ಯೇಕ ಧರ್ಮ ಎಂದು ಓಡಾಡುತ್ತಿದ್ದೀರಲ್ಲ ನಿಮ್ಮ ದೇವರು ಯಾರು ಹೇಳಿ ಹಿಂದೂಗಳ ಶಕ್ತಿಶಾಲಿ ದೇವರು ಶಿವ ಅ ಶಿವನನ್ನೇ ಬಸವಣ್ಣನವರು ಪೂಜೆ ಮಾಡಿದ್ದು ಹೊಸ ಧರ್ಮ ಎಂದು ಯಾವ ಆಧಾರದ ಮೇಲೆ ಹೇಳ್ತಿರಾ ಎಂದಿದ್ದಾರೆ.

ಧರ್ಮದ ಕಾಲಂ ನಲ್ಲಿ ಹಿಂದೂ ಎಂದು ಬರೆಸಿ ಎಂದಿದ್ದಕ್ಕೆ ನಮ್ಮ ಯತ್ನಾಳ್ ಸಿಸಿ ಪಾಟೀಲ್ ಸೇರಿದಂತೆ ಹಲವರ ಮೇಲೆ ವಿಜಯನಂದ ಕಾಶ್ಯಪ್ಪನವರ್ ಏನೋನೋ ಮಾತಾಡಿದ್ರು.
ನಿನ್ ಹಣೆ ಮೇಲೆ ಇರುವ ವಿಭೂತಿ ಸನಾತನ ಹಿಂದೂ ಧರ್ಮದ ಪ್ರತೀಕ.ರಾಜಕೀಯವಾಗಿ ಪಂಚಮಸಾಲಿ ಲೀಡರ್ ಆಗಬೇಕು ಎಂದು ಧರ್ಮವನ್ನು ಹೊಡೆದಾಡೋದು ಬಿಡಿ
ನಮ್ಮ ರಾಜ್ಯಾಧ್ಯಕ್ಷ ವಿಜಯೇಂದ್ರ ರವರು ಕೂಡ ಸ್ಪಷ್ಟವಾಗಿ ಹೇಳಿದ್ದಾರೆ. ಧರ್ಮದ ಕಾಲಂ ನಲ್ಲಿ ಹಿಂದೂ ಎಂದೇ ಬರೆಸಿ. ಎಲ್ಲಾ ಜಾತಿಗಳಿಗೂ ಧರ್ಮ ಯಾವುದು ಎಂದು ಅನುಮಾನ ಇಲ್ಲ
ಆದರೆ ವೀರಶೈವ ಲಿಂಗಾಯತರಿಗೆ ಮಾತ್ರ ಧರ್ಮದ ಬಗ್ಗೆ ಗೊಂದಲ ತಂದಿಡುವ ಕೆಲಸ ಮಾಡ್ತಾ ಇದೀರಾ ನಮ್ಮ ಮೂಲ ಧರ್ಮ ಮೂಲ ಸಂಸ್ಕೃತಿ ಹಿಂದೂ ಧರ್ಮ. ಬಸವಣ್ಣನವರ ಹಿಂದೂ ಪದ್ದತಿಯಲ್ಲಿದ್ದ ಅನಿಷ್ಟ ಪದ್ದತಿಗಳನ್ನು ಸುಧಾರಣೆ ಮಾಡಿದ್ರು
ಬಸವಣ್ಣನವರ ಕೂಡ ಶಿವನ ಅರಾಧಕರ ಪರಮ ಭಕ್ತರು. ಅದ್ದರಿಂದ ಪ್ರತ್ಯೇಕ ಧರ್ಮ ಎನ್ನುವ ಸಿದ್ದರಾಮಯ್ಯ ನವರ ಪಿತೂರಿಗೆ ಸ್ವಾಮೀಜಿಗಳು ಗಳು ಬಲಿಯಾಗಬೇಡಿ ಎಂದಿದ್ದಾರೆ