ಮನೆ Latest News ಜಾತಿ ಒಡೆಯೋದರಲ್ಲಿ ಸಿದ್ದರಾಮಯ್ಯ ಅವರು ಫೇಮಸ್; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

ಜಾತಿ ಒಡೆಯೋದರಲ್ಲಿ ಸಿದ್ದರಾಮಯ್ಯ ಅವರು ಫೇಮಸ್; ವಿಪಕ್ಷ ನಾಯಕ ಆರ್ ಅಶೋಕ್ ಹೇಳಿಕೆ

0

ಬೆಂಗಳೂರು:ಕ್ರಿಶ್ಚಿಯನ್ ಜಾತಿಗೆ ಹಿಂದು ಉಪ ಜಾತಿ ಸೇರ್ಪಡೆ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು ಜಾತಿ ಒಡೆಯೋದರಲ್ಲಿ ಸಿದ್ದರಾಮಯ್ಯ ಅವರು ಫೇಮಸ್ ಎಂದಿದ್ದಾರೆ.

ನಮ್ಮ ಸರ್ಕಾರ ಬಂದ್ಮೇಲೆ ಸಿದ್ದರಾಮಯ್ಯ ಅವರಿಗೆ ಪ್ರಶಸ್ತಿ ಕೊಡುತ್ತೇವೆ. ಹೊಸ ಹೊಸ ಕುಲಗಳನ್ನ ಹುಟ್ಟು ಹಾಕುತ್ತಿದ್ದಾರೆ. ಜಾತಿ ಇರಬಾರದು ಎಂದು ಹೊಸ ಜಾತಿ ಉತ್ಪಾದನೆ ಮಾಡುತ್ತಿದ್ದಾರೆ. ಒಕ್ಕಲಿಗ ಸಮುದಾಯದ ಸಭೆ ಮಾಡುತ್ತಿದ್ದೇವೆ. ಎರಡ್ಮೂರು ದಿನದಲ್ಲೇ ಸಭೆ ಮಾಡುತ್ತೇವೆ. ಜಾತಿ ಒಡೆಯೋದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಜಾತಿ ಒಡೆಯೋದರಿಂದ ಸರ್ಕಾರ ಬಿದ್ದು ಹೋಗುತ್ತದೆ, ಸೀಟು ಕಡಿಮೆ ಬರುತ್ತದೆ. ಸಿದ್ದರಾಮಯ್ಯ ಅವರ ಗ್ಯಾಂಗ್ ದುರಾಡಳಿದಿಂದ ಸಮಸ್ಯೆ ಆಗುತ್ತದೆ. ಈ ಸಮಾಜಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದರು.

ಸರ್ಕಾರದಿಂದ ಜಾತಿಗಣತಿ ಸಮೀಕ್ಷೆ ವಿಚಾರದ ಬಗ್ಗೆ ಮಾತನಾಡಿದ ಅವರು ಹಿಂದೆ ಮಾಡುತ್ತಿರೋದು ಯಾವ ಸಮೀಕ್ಷೆ ಮತ್ತೆ.ಸಿದ್ದರಾಮಯ್ಯ ಅವರು ಮನೆಯಲ್ಲೇ ರೆಡಿ ಮಾಡಿ ಅವರಿಗೆ ಕೊಡ್ತಾರೆ. ಯಡಿಯೂರಪ್ಪ ಕೆಳಗಿಳಿಸಿದ್ದಾರೆ, ಮೋದಿನಾ ಯಾವಾಗ ಇಳಿಸ್ತಾರೆ ಎಂಬ ಕಾಂಗ್ರೆಸ್ ಒತ್ತಾಯ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದಾಂತ ಯಾರಿಗೆ ಇರುತ್ತದೆ ಅವರಿಗೆ ನೋ ಏಜ್ ಲಿಮಿಟ್ ಇರಲ್ಲ. ಕೆಲಸ ಮಾಡೋರಿಗೆ ವಯಸ್ಸಿನ ಮಿತಿ ಇಲ್ಲ. ಕಾರಜೋಳ ಅವರು ಕೂಡ ೭೫ ವರ್ಷ ಆಗಿದೆ. ಮೋದಿ ಅವರಿಗೆ ಐವತ್ತು ವರ್ಷ ದಂತೆ ಕೆಲಸ ಮಾಡ್ತಾರೆ. ನಮ್ಮ ದೇಶ ಈಗ ನಾಲ್ಕನೇ ಸ್ಥಾನಕ್ಕೆ ಬಂದಿದ್ದೇವೆ. ಟ್ರಂಪ್ ಅವರೇ ಮೋದಿ ಸ್ನೇಹ ಬಯಸುತ್ತಿದೆ, ಚೀನಾ ಬಯಸುತ್ತಿದೆ.ಮೋದಿ ಅವರ ವಯಸ್ಸು ಗಣನೆಗೆ ಬರೋದಿಲ್ಲ. ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದಲ್ಲಿ ಏನೇನು ಕ್ಲೇಮ್ ಮಾಡಬೇಕೋ ಮಾಡಬೇಕು ಎಂದ ಅವರು ಕಲಬುರಗಿ ಯಲ್ಲಿ ಬ್ಯಾಂಕ್ ದರೋಡೆ ವಿಚಾರದ ಬಗ್ಗೆ ಮಾತನಾಡಿದ ಅವರು ಲೂಟಿ ಮಾಡೋರಿಗೆ ಈ ಸರ್ಕಾರ ಸ್ವರ್ಗ ಆಗಿದೆ. ಸರ್ಕಾರಕ್ಕೆ ಇರೋ ಅವಧಿ ಎರಡು ವರ್ಷ. ಇಷ್ಟರಲ್ಲೇ ಲೂಟಿ ನಾದ್ರೂ ಮಾಡಿ ಏನಾದರೂ ಮಾಡಿ ಎಂದು ಸುಮ್ಮನಾಗಿದ್ದಾರೆ. ಆರ್ಥಿಕ ಪರಿಸ್ಥಿತಿ ಎಕ್ಕುಟ್ಟೋಗಿದೆ. ಟನಲ್ ತೋಡುತ್ತಿದ್ದಾರೆ, ಗುಹೆ ಮಾಡುತ್ತಿದ್ದಾರೆ. ಬೆಳೆ ಪರಿಹಾರ ಕ್ಕೆ ನಾನು ಆಗ್ರಹಿಸುತ್ತಿದ್ದೇನೆ. ಪರಿಹಾರ ಕೋಡೋದಕ್ಕೆ ಅವರ ಬಳಿ ಹಣ ಇಲ್ಲ ಎಂದು ತಿಳಿಸಿದ್ದಾರೆ,

ಬಿಜೆಪಿ ಶಾಸಕರಿಗೆ ಅನುದಾನ ಕಡಿಮೆ ಸಿಗ್ತಿದೆ ಎಂಬ ಆರೋಪ ವಿಚಾರದ ಬಗ್ಗೆ ಮಾತನಾಡಿದ ಅವರು ಅನುದಾನ ಸಿಗ್ತಿಲ್ಲ, ತಾರತಮ್ಯ ಮಾಡುತ್ತಿದ್ದಾರೆ. ಇದು ಸರಿಯಲ್ಲ , ಕ್ಷೇತ್ರವನ್ನ ವೈಯಕ್ತಿಕ ವಾಗಿ ನೋಡಬೇಕು. ಕ್ಷೇತ್ರಗಳು ದೊಡ್ಡ ದಾಗಿ ಇರುತ್ತದೆ. ಸಮೀಕ್ಷೆ ಮಾಡಿ ಹಣ ಬಿಡುಗಡೆ ಮಾಡಬೇಕು. ಇದು ರಾಜಕೀಯ ಪಥ ಮಾಡಿಕೊಂಡಿದೆ.

ಜಾತಿ ಸಮೀಕ್ಷೆ ಮುಂದೂಡಬೇಕು. ೪೨೫ ಕೋಟಿ ಹಣ ಖರ್ಚು ಮಾಡಿ ಹಾಳು ಮಾಡಬೇಡಿ. ಸಮೀಕ್ಷೆ ಮುಂದೂಡದಿದ್ರೆ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ.

ಜಾತಿ ಗಣತಿ ವಿಚಾರದ ಬಗ್ಗೆ ಮಾತನಾಡಿದ ಅವರು ಹೊಸ ಜಾತಿ ಹುಟ್ಟು ಹಾಕುತ್ತಿದ್ದೀರಿ. ಜಾತಿ ಸಮೀಕ್ಷೆ ಮೂಲಕ ಸರ್ಕಾರ ಕಿಮಿಕ್ ಮಾಡಲು ಹೊರಟಿದೆ. ಜನರಿಗೆ ಮೋಸ ಮಾಡೋಕೆ ಹೊರಟಿದ್ದು ಸರಿಯಿಲ್ಲ. ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಜನರ ಗಮನ ಬೇರೆ ಕಡೆಗೆ ತಿರುಗಿಸಲು ಜಾತಿ ಗೊಂದಲ ಮೂಡಿಸ್ತಿದ್ದಾರೆ ಎಂದಿದ್ದಾರೆ.