ಬೆಂಗಳೂರು: ಬಾನು ಮುಷ್ತಾಕ್ ದಸರಾ ಉದ್ಘಾಟಿಸುತ್ತಿರೋದಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಖಂಡನೆ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಆ ಯಮ್ಮನಿಗೂ ಸ್ವಲ್ಪ ಇರಬೇಕು. ಧ್ವಜ, ಹರಿಶಿಣ, ಕುಂಕುಮ, ಭುವನೇಶ್ವರಿ ಬಗ್ಗೆ ಮಾತಾಡಿದ್ದಾರೆ. ಏನು ನೈತಿಕತೆ ಇದೆ ಅಂತ ಮೈಸೂರಿಗೆ ಹೋಗ್ತಾರೆ. ಚಾಮುಂಡಿ ತಾಯಿಗೆ ಹೂವು ಹಾಕೋದು, ಎಲ್ಲವೂ ಸನಾತನ ಧರ್ಮದ ಪ್ರಕಾರ ಮಾಡ್ತಾರೆ. ಇವರು ಸನಾತನ ಧರ್ಮ ಒಪ್ತಾರಾ.? ಹಿಂದೂ ಧರ್ಮ ಅಪಮಾನ ಮಾಡೋದೇ ಇವರ ಕೆಲಸ. ಚಾಮುಂಡಿ ತಾಯಿ ಶಾಪ ತಟ್ಟಬಾರದು ಅಂದ್ರೆ ಅವರಿಂದ ಉದ್ಘಾಟನೆ ಮಾಡಿಸೋದನ್ನ ವಾಪಸ್ ಪಡೆಯಿರಿ ಎಂದಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು ಸನಾತನ ಧರ್ಮದಲ್ಲಿ ಗಣಪತಿ ಪೂಜೆಯಿಂದ ಎಲ್ಲಾ ಪೂಜೆ ಆರಂಭ ಆಗುತ್ತದೆ. ಯಾವುದೇ ಪೂಜೆ ಮಾಡಬೇಕಿದ್ದರೆ ಗಣಪತಿ ಪರ್ಮಿಷನ್ ಬೇಕು. ಆದರೆ ಗಣಪತಿ ಪೂಜೆಗೆ ಪರ್ಮಿಷನ್ ತೆಗೆದುಕೊಳ್ಳಬೇಕಾದ ಕೆಟ್ಟ ಕಾನೂನು ಈ ದೇಶದಲ್ಲಿದೆ. ಚಾಮುಂಡಿ ಬೆಟ್ಟ ಸರ್ಕಾರದ್ದು ಎಂದು ತಿಳಿದುಕೊಳ್ಳುವವರು ದೇಶಕ್ಕೆ ಸಂಬಂಧಿಸಿದ ಆಸ್ತಿ ಯಾವುದೇ ಕೋಮಿಗೆ ಸೇರಿಲ್ಲ ಎನ್ನುವುದನ್ನೂ ತಿಳಿದುಕೊಳ್ಳಬೇಕಿದೆ. ಗಣಪತಿ ಎಲ್ಲಿ ಕೂರಿಸಬೇಕು ಎನ್ನುವುದನ್ನು ಸರ್ಕಾರ ನಿರ್ಧಾರ ಮಾಡು ಆಗಲ್ಲ. ಚಾಮರಾಜಪೇಟೆ ಕ್ಷೇತ್ರದಲ್ಲಿನ ಇವರ ಜನಸಂಖ್ಯೆ ಶಾಸ್ತ್ರ, ಮತದಾರ ಸಂಖ್ಯಾ ಶಾಸ್ತ್ರ ನಮ್ಮ ಕ್ಷೇತ್ರದಲ್ಲಿಯೂ ಇದೆ. ವಿಜಯಪುರದಲ್ಲಿ ಮತದಾನದ ದಿನ ಯಾರೂ ಹೊರಗೆ ಹೋಗದೇ ಮತದಾನ ಮಾಡುತ್ತಾರೆ . ಇದರ ಪರಿಣಾಮ ಫಲಿತಾಂಶ ಬದಲಾಗುತ್ತದೆ. ಹೀಗಾಗಿ ವಿಜಯಪುರದಲ್ಲಿ ಯಾವುದೇ ಪರ್ಮಿಷನ್ ಬೇಕಿಲ್ಲ. ಗಣಪತಿ ಕೂರಿಸಬೇಕು ಎಂದು ನಿರ್ಣಯ ಮಾಡಿದರೆ ಮುಗಿಯಿತು . ಈ ಎಲ್ಲಾ ಕಾನೂನು ಹೋಗಬೇಕಾದರೆ 2028ಕ್ಕೆ ಹಿಂದೂ ಪರ ಸರ್ಕಾರ ಬರಬೇಕು. ಸಾಬರ ಪರ ಸರ್ಕಾರ ಕಿತ್ತು ಹೋಗಬೇಕು. ಇಲ್ಲಿಯೂ ಸಹ ಮುಂದಿನ ಚುನಾವಣೆಯಲ್ಲಿ ಹಿಂದೂ ಅಭ್ಯರ್ಥಿ ಆರಿಸಿ ಬರಬೇಕು.ಅದಕ್ಕೆ ನೀವೆಲ್ಲಾ ಶಫಥ ಮಾಡಬೇಕು ಎಂದರು.
ವಿಜಯಪುರದಲ್ಲಿಯೂ ಇಬ್ಬರು ಹಿಂದೂ ನಿಂತರೆ ಮುಸ್ಲಿಂ ಗೆಲುವು ಪಕ್ಕಾ ಆಗುತ್ತಿತ್ತು. ಈಗ ಎರಡು ಚುನಾವಣೆಯಲ್ಲಿ ನನ್ನ ವಿರುದ್ಧ ಹಿಂದೂಗಳೇ ನಿಂತರೂ ಯಾರು ಯೋಗ್ಯ ಅಂತಾ ಜನ ತೀರ್ಮಾನ ಮಾಡುತ್ತಾರೆ. 2028ಕ್ಕೆ ಆದರೂ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣಪತಿ ಕೂರಿಸುವ ಸರ್ಕಾರ ಬರಬೇಕು. ಅಂತಹ ಒಬ್ಬ ಶಾಸಕ ಇಲ್ಲಿ ಬರಲಿ ಅಂತಾ ಗಣೇಶನಲ್ಲಿ ಪ್ರಾರ್ಥನೆ ಮಾಡುತ್ತೇನೆ. ನಮ್ಮ ಗೋಶಾಲೆ ಇದೆ, ಸಾವಿರ ಆಕಳು ನಮ್ಮ ಬಳಿ ಇದೆ. ಕಟುಕರಿಗೆ ಕೊಡುವುದನ್ನು ತಂದು ನಾವು ಸಾಕಿದ್ದೇವೆ. ಪ್ರತಿ ಎರಡು ದಿನಕ್ಕೆ ಒಂದು ಆಕಳು ಕರು ಹಾಕುತ್ತದೆ ಎಂದು ತಿಳಿಸಿದರು.











