ಬೆಂಗಳೂರು; ದೇವಸ್ಥಾನದ ವಿಚಾರದಲ್ಲಿ ಸಣ್ಣತನ ಮಾಡೋದು ಸರಿಯಲ್ಲ ಎಂದು ಆಮ್ ಆದ್ಮಿ ಪಾರ್ಟಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಹ್ವಾನದ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜಕೀಯ ಅನುಕೂಲ ಪಡೆಯೋದಕ್ಕೆ ಎಲ್ಲಾ ಪಕ್ಷಗಳು ಈ ರೀತಿ ಮಾಡ್ತಾರೆ. ಇದು ಒಕ್ಕೂಟ ಇರುವ ವ್ಯವಸ್ಥೆ. ಯಾರನ್ನು ಎಲ್ಲಿಗೂ ಓಡಿಸೋಕೆ ಅಗೊಲ್ಲ. ಭಾಷೆ, ಧರ್ಮ ವಿಚಾರ ಅವರವರಿಗೆ ಬಿಟ್ಟ ವಿಚಾರ. ಬಾನು ಮುಷ್ತಾಕ್ ಗೆ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಇಲ್ಲಿ ದೇವತೆ ಪ್ರಶ್ನೆ ಬರಲ್ಲ, ಇದು ನಾಡ ಹಬ್ಬ. ನಿಸಾರ್ ಅಹಮದ್ ಹಿಂದೆ ಉದ್ಘಾಟನೆ ಮಾಡಿದ್ದಾರೆ. ದೇವಸ್ಥಾನದ ವಿಚಾರದಲ್ಲಿ ಸಣ್ಣ ತನ ಮಾಡಬಾರದು. ಅವರಿಗೆ ಆಹ್ವಾನ ಕೊಟ್ಟಿರುವ ಸರ್ಕಾರದ ಕ್ರಮ ಸರಿಯಾಗಿದೆ ಎಂದಿದ್ದಾರೆ. ಬಾನು ಮುಷ್ತಾಕ್ ಕನ್ನಡಾಂಬೆಯ ಕುರಿತು ಹೇಳಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಯಾವ ಸಂದರ್ಭದಲ್ಲಿ ಉದ್ದೇಶದಿಂದ ಅವರು ಮಾತಾಡಿದ್ದಾರೊ ಗೊತ್ತಿಲ್ಲ ಎಂದಿದ್ದಾರೆ,
ವಿಷ್ಣು ವರ್ಧನ್ ಅವರ ಸಮಾಧಿಗೆ ಮತ್ತೆ ಜಾಗ ಕೊಡಬೇಕು ಎಂಬ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಕಲಾವಿದರಿಗೆ ಕೆಲವರಿಗೆ ಜಾಗ ಕೊಟ್ಟಿದ್ದಾರೆ. ರಾಜ್ ಕುಮಾರ್, ಪುನೀತ್ ಗೆ ಕೊಟ್ಟಿದ್ದಾರೆ. ವಿಷ್ಣು ವರ್ಧನ್ ಅವರ ಮನೆಯವರು ಐದು ಎಕರೆ ಜಮೀನು ತೆಗೆದುಕೊಂಡಿದ್ರು.ಈಗ ಸರ್ಕಾರದ್ದ ಜಾಗ ಬೇಕು ಅಂತ ಗೊಂದಲ ಮಾಡೋದು ಬೇಡ. ಮಾಡೋದಾದರೆ ೧೦-೧೫ ಎಕರೆ ಜಾಗ ತೆಗೆದುಕೊಂಡು ಎಲ್ಲ ಕಲಾವದಿರಿಗೂ ಒಂದೇ ಕಡೆ ಮಾಡಿಬಿಡಲಿ. ವಿಷ್ಣು ವರ್ಧನ ಸಮಾಧಿ ಗೆ ಮೈಸೂರಲ್ಲಿ ಮಾಡೋದಾದರೆ ಇಲ್ಲಿ ಬೇಡ. ಇಲ್ಲಿ ಮಾಡುವುದಾದರೆ ಅಲ್ಲಿ ಬೇಡ ಎಂದು ಹೇಳಿದ್ದಾರೆ.
ಸದನದಲ್ಲಿ ಡಿಸಿಎಂ ಆರ್ ಎಸ್ ಎಸ್ ಗೀತೆ ಹೇಳಿದ ವಿಚಾರದ ಬಗ್ಗೆ ಮಾತನಾಡಿ ಆರ್ ಎಸ್ ಎಸ್ ಒಂದು ಸಂಘ, ತನ್ನದೇ ಆದ ಸಿದ್ದಾಂತ ಇಟ್ಟುಕೊಂಡಿದೆ. ಬೇರೆ ಪಕ್ಷದವರದ್ದು ಒಂದೊಂದು ಸಿದ್ದಾಂತ ಇರುತ್ತೆ. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದಾಂತಕ್ಕೆ ವಿರುದ್ದ ವಿಚಾರ ಅದು. ಅದನ್ನ ಸದನದಲ್ಲಿ ಹೇಳಿದ್ದಾರೆ, ನಾನು ದೊಡ್ಡ ಮನುಷ್ಯನಾಗಬೇಕಂತ. ಅದ್ಯಕ್ಷನಾಗಿ ಹೇಳಿರೋದು ಅಕ್ಷಮ್ಯ ಅಪರಾಧ. ಅದೇ ಪಕ್ಷದಲ್ಲಿ ರಾಜಣ್ಣ ಸತ್ಯ ಹೇಳಿದಾಗ ಹೊರಗೆ ಹಾಕ್ತಿರಾ. ಇವರು ಹೇಳಿರೋದು ಕಾಂಗ್ರೆಸ್ ಸಿದ್ದಾಂತಕ್ಕೆ ಸರಿ ಇದ್ಯಾ. ಸರಿ ಇಲ್ಲಾ ಅಂದ್ಮಲೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕಲ್ವಾ..? ಪ್ರಬಲವಾದವರು, ಆರ್ಥಿಕ ಭದ್ರತೆ, ಪಕ್ಷಕ್ಕೆ ಅನುಕೂಲ ಆಗುತ್ತೆ ಅನ್ನೋ ಧೋರಣೆ ಸರಿಯಲ್ಲ. ಅವರು ಯಾವ ಶ್ಲೋಕ ಆದ್ರು ಮನೆಯಲ್ಲಿ ಪೂಜೆ ಮಾಡಿಕೊಳ್ಳಲಿ. ಆದ್ರೆ ಸದನದಲ್ಲಿ ಸಭೆಗಳಲ್ಲಿ ತಮ್ಮ ಸಿದ್ದಾಂತದ ವಿರುದ್ದವಾಗಿ ಮಾತಾಡಿದಾಗ ಯಾವ ಪಕ್ಷದಲ್ಲಿದ್ದಿರಾ..? ಆ ಸ್ಥಾನದಲ್ಲಿರಲು ಸಾಧ್ಯಾನಾ.? ಎಂದು ಪ್ರಶ್ನಿಸಿದ್ದಾರೆ. ಹೈಕಮಾಂಡ್ ಅವರ ಮೇಲೆ ಕ್ರಮ ತೆಗೆದುಕೊಳ್ಳೊದು ಒಳ್ಳೆಯದು ಎಂದಿದ್ದಾರೆ.











