ಬೆಂಗಳೂರು; ನಾನು ಕೆಲವು ಸತ್ಯಗಳನ್ನ ಹೇಳಿದ್ರೆ ಕೆಲವರು ಸಹಿಸಲ್ಲ ಎಂದು ಬೆಂಗಳೂರಿನಲ್ಲಿ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಪ್ರಮೋದಾದೇವಿ ಇರಬಹುದು ಯದುವೀರ್ ಇರಬಹುದು. ಅಸೆಂಬ್ಲಿಯಲ್ಲಿ ಏನು ಹೇಳಿದ್ರು ಸಹಿಸಲ್ಲ. ತಪ್ಪು ಕಂಡು ಹಿಡಿಯುವುದೇ ಒಂದು ದೊಡ್ಡ ಕೆಲಸ. ಇದ್ರಲ್ಲಿ ರಾಜಕಾರಣಿಗಳು, ಮಾಧ್ಯಮದವರು ಎಲ್ಲರೂ ಇದ್ದಾರೆ. ಏನೋ ನಡೆಯುತ್ತಿದೆ. Better not speak. ಬೇರೆ ಲೀಡರ್ಸ್ ಇದ್ದಾರೆ. ಸ್ಪೋಕ್ಸ್ ಮ್ಯಾನ್ ಇದ್ದಾರೆ. ಅವರ ಹತ್ತಿರ ಮಾತನಾಡಿ ಎಂದಿದ್ದಾರೆ.
ಇನ್ನು ಚಾಮುಂಡೇಶ್ವರಿ ಹಿಂದುಗಳು ಆಸ್ತಿಯಲ್ಲ ಎಂಬ ಡಿ ಕೆ ಶಿವಕುಮಾರ್ ಹೇಳಿಕೆಗೆ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ. ಡಿ ಕೆ ಶಿವಕುಮಾರ್ ಹೇಳಿಕೆ ಉದ್ದತನ. ಇಂತಹ ಉದ್ದಟತನ ಬೇಡ. ಬಾನು ಮುಷ್ತಾಕ್ ಮೂಲಕ ಉದ್ಘಾಟನೆ ಮಾಡೋದು ಬೇರೆ. ಇವರು ಹಿಂದೂ ದೇವಸ್ಥಾನಗಳು, ಧಾರ್ಮಿಕ ಸ್ಥಳಗಳು ಯಾರಪ್ಪನ ಆಸ್ತಿಯಲ್ಲ ಅನ್ನೋದು ಉದ್ದಟತನ. ಧಾರ್ಮಿಕ ಕ್ಷೇತ್ರಗಳಲ್ಲಿ ಹೀಗೆ ಸಮಸ್ಯೆ ಉಂಟು ಮಾಡೋದು ಸರ್ಕಾರಕ್ಕೆ ಕುತ್ತು ಬರುವಂತೆ ಮಾಡುತ್ತದೆ. ಇದನ್ನ ಅವರೇ ಅನುಭವಿಸುತ್ತಾರೆ ಎಂದು ಹೇಳಿದ್ದಾರೆ.
ಡಿಕೆಶಿ ಸದನದಲ್ಲಿ RSS ಗೀತೆ ಹಾಡಿ ಕ್ಷಮೆ ಕೇಳಿದ ವಿಚಾರದ ಬಗ್ಗೆ ಮಾತನಾಡಿದ ಅವರು ಡಿ ಕೆ ಶಿವಕುಮಾರ್ ಸದನದಲ್ಲಿ RSS ಗೀತೆ ಹಾಡಿದ್ರು. ಡಿಕೆಶಿವಕುಮಾರ್ ರನ್ನ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ ಅಂತ ಹೇಳ್ತಾರೆ. ಅವರು ತಮಾಷೆಗೆ ಹೇಳೋದು ಕಾಂಗ್ರೆಸ್ ನಾಯಕರು ಒಪ್ಪೊಲ್ಲ. ಆದರ ಪ್ರತಿಫಲವೇ ಕ್ಷಮೆ ಕೇಳೋ ಸನ್ನಿವೇಶ ಉದ್ಭವವಾಗಿದೆ. ರಾಜ್ಯದಲ್ಲಿ ನಾಡಿನ ಜನತೆಗೆ ನೋವಿನಲ್ಲಿ ಹೇಳ್ತೀನಿ. ನಾಡಿನ ಸಮಸ್ಯೆ ಬಗೆಹರಿಸೋ ಕಡೆ ಯಾರ ನಾಯಕತ್ವದಲ್ಲೂ ಕಷ್ಟ-ಸುಖದಲ್ಲಿ ಇಲ್ಲ. ಮಳೆಗಾಲದ ಅನಾಹುತ, ಬೇರೆ ಬೇರೆ ಸಮಸ್ಯೆ ಗಳನ್ನು ನೋಡಿದಾಗ ಈ ನಾಯಕರಿಗೆ ಈ ಸರ್ಕಾರ ಬಂದು ಎರಡು ವರ್ಷ ಆಗಿದೆ ಅವರಿಗೆ ಅವರವರ ಪಕ್ಷದಲ್ಲಿ ಸ್ಥಾನಮಾನಗಳನ್ನ ಪಡೆಯಬೇಕು ಅಂತ ಅವರ ನಡವಳಿಕೆ ಇವೆ. ಭಯ ಬಿದ್ರೋ, ಏನಕ್ಕೆ ಕ್ಷಮೆ ಕೇಳಿದ್ರೋ ಗೊತ್ತಿಲ್ಲ. ಅದೇನು ಕ್ಷಮೆ ಕೇಳಿ ಸಮಜಾಯಿಷಿ ಕೊಟ್ಟು ಈ ಸಮಸ್ಯೆಯಿಂದ ಪಾರಾಗಲು, ನಾಯಕರ ಅಸಮಾಧಾನ ಸರಿಪಡಿಸಿಕೊಳ್ಳಲು ಹೊರಟಿದ್ದಾರೆ.ವನಾನು ಅದರ ಬಗ್ಗೆ ಚರ್ಚೆ ಮಾಡೊಲ್ಲ ಎಂದು ತಿಳಿಸಿದ್ದಾರೆ.











