ಬೆಂಗಳೂರು; ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಆಯ್ಕೆ ಬಗ್ಗೆ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪ್ರತಿ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ವಿವಾದಗಳನ್ನು ಸೃಷ್ಟಿ ಮಾಡ್ತಾ ಇದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಒಬ್ಬ ಮಹಿಳೆ ಬೂಕರ್ ಪ್ರಶಸ್ತಿಯನ್ನು ಪಡೆದುಕೊಂಡವರು. ಇಲ್ಲಿ ಪ್ರಶ್ನೆ ಎಲ್ಲಿಗೆ ಬಂದು ನಿಂತಿದೆ ಅಂದ್ರೆ ಈ ಹಿಂದೆ ಒಂದು ವಿವಾದಕ್ಕೆ ಬಾನು ಮುಸ್ತಾಕ್ ಅವರು ಕಾರಣ ಆಗಿದ್ದರು. ಅದರ ಬಗ್ಗೆ ಹಲವಾರು ನಾಯಕರುಗಳು, ಬಿಜೆಪಿ ಕೂಡ ಚರ್ಚೆ ಮಾಡ್ತಾ ಇದ್ದಾರೆ ಎಂದು ತಿಳಿಸಿದ್ದಾರೆ.
ಬಹಳ ಜನ ಸಾಧಕರು ಸಾಹಿತಿಗಳು ತುಂಬಾ ಜನ ನಮ್ಮ ಧರ್ಮದಲ್ಲೇ ಇದ್ದಾರೆ. ಪ್ರತಿ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ವಿವಾದಗಳನ್ನು ಸೃಷ್ಟಿ ಮಾಡ್ತಾ ಇದೆ .ಧರ್ಮಸ್ಥಳ ಪ್ರಕರಣ ಆಯ್ತು. ಈಗ ಚಾಮುಂಡೇಶ್ವರಿ ತಾಯಿಗೆ ಕೈ ಹಾಕಿದ್ದಾರೆ . ಮುಂದೆ ಹೋಗ್ತಾ ಹೋಗ್ತಾ ಯಾವ ಯಾವ ಧಾರ್ಮಿಕ ಕೇಂದ್ರಗಳಿಗೆ ಕೈ ಇಡ್ತಾರೆ ಗೊತ್ತಿಲ್ಲ .ಗೊಂದಲ ಸೃಷ್ಟಿ ಮಾಡೋದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.ಇದರ ಅವಶ್ಯಕತೆ ಇರಲಿಲ್ಲ. ನಾವು ಹೇಳಿದ್ದೇವೆ ನಾನು ಕ್ಲಿಯರ್ ಹೇಳಿದೀನಿ. ಕನ್ನಡಾಂಬೆ ಬಗ್ಗೆ ಬಾನು ಮುಸ್ತಾಕ್ ಅವರಿಗೆ ರಿಸರ್ವೇಶನ್ ಇದೆ. ಅದರ ಬಗ್ಗೆ ನಮ್ಮ ಆಕ್ಷೇಪ ಇದೆ. ನಾನು ವಿರೋಧ ಮಾಡ್ತಾಯಿಲ್ಲ.ಮುಸ್ಲಿಂ ಮಹಿಳೆ ಆಗಿರಬಹುದು ಅಥವಾ ಅವರ ಸಾಧನ ಬಗ್ಗೆ ಗೌರವಿದೆ ಎಂದು ಹೇಳಿದ್ದಾರೆ.
ಬಾನು ಮುಸ್ತಾಕ್ ಅವರಿಗೆ ಕೆಲವೊಂದು ರಿಸರ್ವೇಶನ್ ಇದೆ. ಕಳೆದ ಒಂದು ವಿವಾದ ಪ್ರಕರಣ ಮುಂದಕ್ಕೆ ಬಂದಿತ್ತು. ಆ ಸಂದರ್ಭದಲ್ಲಿ ಸಾಬೀತಾಗಿದೆ. ಆ ಹಿನ್ನೆಲೆಯಲ್ಲಿ ನಿಸಾರ್ ಅಹ್ಮದ್ ಅವರೆಲ್ಲರೂ ಕೂಡ ಉದ್ಘಾಟನೆ ಮಾಡಿದ್ರು.ಉದ್ಘಾಟನೆ ಮಾಡಬಾರದು ಅಂತ ಏನು ಇಲ್ಲ. ಅವರು ಬೂಕರ್ ಪ್ರಶಸ್ತಿಯನ್ನು ಪಡೆದವರು ಒಬ್ಬ ಮಹಿಳೆ ಆಗಿರೋದು ಅದಕ್ಕೆ ನಾವೆಲ್ಲಾ ಗೌರವ ಕೊಡ್ತವೆ.ಅವರು ಅದೇ ಗೌರವ ಕನ್ನಡಾಂಬೆ ಮೇಲೆ, ಅರಿಶಿನ ಕುಂಕುಮದ ಮೇಲೆ ನಮ್ಮ ಭುವನೇಶ್ವರಿ ಕುಮಾರಿ ಅವರು ಒಂದು ರಿಸರ್ವೇಶನ್ ಇಟ್ಕೊಂಡಿದ್ದಾರಲ್ಲ ಅದಕ್ಕೆ ನಮಗೆ ಆಕ್ಷೇಪ ಇದೆ ಎಂದು ಹೇಳಿದ್ದಾರೆ.











