ನವದೆಹಲಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ಅವರು
ಕಳೆದ ವರ್ಷ ಗೌರಿ ಗಣೇಶ ಹಬ್ಬದಲ್ಲಿ ಗಣೇಶನನ್ನು ಪೊಲೀಸರು ಬಂಧಿಸಿದ್ದರು. ಈ ವರ್ಷ ವಿಚಿತ್ರ ಕಾನೂನು ಮಾಡಿದೆ. ಗಣೇಶ ಕೂರಿಸುವುದು ಸರಿ ಅಲ್ಲ ಅನ್ನುವ ರೀತಿಯಲ್ಲಿ ಮಾಡಿದ್ದಾರೆ. ಹಿಂದೂಗಳ ಹಬ್ಬಕ್ಕೆ ಯಾಕಿಷ್ಟು ನಿರ್ಬಂಧ.
ಈ ನಿರ್ಬಂಧಗಳನ್ನು ವಾಪಸ್ ಪಡೆದು, ಹಬ್ಬ ಆಚರಿಸಲು ಅವಕಾಶ ಮಾಡಿಕೊಡಬೇಕು. ಸ್ವಾತಂತ್ರ್ಯ ಹೋರಾಟಕ್ಕೆ ಪ್ರೇರಣೆ ಕೊಟ್ಟಿದ್ದು ಗಣೇಶ ಹಬ್ಬ ಎಂದರು.
ಭಾನು ಮುಸ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಯ್ಕೆ ಮಾಡಿದ್ದಾರೆ. ಕರ್ನಾಟಕದಲ್ಲಿ ಬೇರೆ ಸಾಹಿತಿ ಸಿಗಲಿಲ್ವ.
ಕನ್ನಡಾಂಬೆಯನ್ನು ಒಪ್ಪದವರಿಗೆ ಯಾಕೆ ಅವಕಾಶ ನೀಡಬೇಕು ಎಂದು ಕೇಳಿದ್ದೆ. ಮಹಾದೇವಪ್ಪ ಇದನ್ನು ಧಾರ್ಮಿಕ ಅಲ್ಲ ಸಾಂಸ್ಕೃತಿಕ ಹಬ್ಬ ಎಂದು ಹೇಳಿದರು. ದಸರಾ ಯಾವಗ ಸಾಂಸ್ಕೃತಿಕ ಹಬ್ಬ ಯಾವಾಗ ಆಯ್ತು.
ನವರಾತ್ರಿ ಎಂದರೆ ದೇವಿಯ ಒಂಭತ್ತು ಅವತಾರಗಳು. ಮೈಸೂರು ರಾಜರು ಇದನ್ನು ಇನ್ನಷ್ಟು ವಿಜೃಂಭಣೆಯಿಂದ ಆಚರಿಸಿದರು. ಈಗ ಚಾಮುಂಡೇಶ್ವರಿ ಮೇಲೆ ನಂಬಿಕೆ ಇಲ್ಲದವರ ಕಡೆಯಿಂದ ಉದ್ಘಾಟನೆ ಮಾಡುತ್ತಿಸುತ್ತಿದ್ದಾರೆ.ಈ ಮೂಲಕ ಹಿಂದೂಗಳಿಗೆ ಅವಮಾನ ಮಾಡ್ತಿದ್ದಾರೆ. ಡಿಕೆ ಶಿವಕುಮಾರ್ ಅವರು ಹೊಸ ವಿವಾದ ಹುಟ್ಟು ಹಾಕಿದ್ದಾರೆ. ಚಾಮುಂಡೇಶ್ವರಿ, ಮತ್ತು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಆಸ್ತಿ ಅಲ್ಲ ಎಂದು ಡಿಕೆಶಿ ಹೇಳಿದ್ದಾರೆ. ಹಾಗಿದ್ರೆ ಇದು ಯಾರ ಆಸ್ತಿ? ಟಿಪ್ಪು ಆಡಳಿತ ಮಾಡಿದ ಅನ್ನೊ ಕಾರಣಕ್ಕೆ ಅದು ವಕ್ಫ್ ಆಸ್ತಿಯೇ? ಎಂದು ಪ್ರಶ್ನಿಸಿದ್ದಾರೆ.
ಹಿಂದೆಯೇ ಹಲವು ರೈತರ ಜಮೀನು ವಕ್ಫ್ ಆಸ್ತಿ ಎಂದು ಘೋಷಿಸಲಾಯಿತು. ಈಗ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ ಎನ್ನುತ್ತಾರೆ. ಇದು ಕಾಂಗ್ರೆಸ್ ನಾಯಕರ ವ್ಯವಸ್ಥಿತ ಷಡ್ಯಂತ್ರ. ಆರ್ಎಸ್ಎಸ್ ಹೇಳಿಕೆಯಿಂದ ಹೊರ ಬರಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಹೈಕಮಾಂಡ್ ಮೆಚ್ಚಿಸಲು ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೂ ಧಾರ್ಮಿಕ ನಂಬಿಕೆಗಳು ಇಲ್ಲ. ಅದಕ್ಕಾಗಿಯೇ ಭಾನು ಮುಸ್ತಾಕ್ ಅವರನ್ನು ಆಯ್ಕೆ ಮಾಡಿದೆ. ಹಿಂದೂಗಳ ಆಸ್ತಿ ಅಲ್ಲ ಎನ್ನಲು ಎಷ್ಟು ಧೈರ್ಯ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ದಿವಾಳಿಯಾಗಿದ್ದಾರೆ.
ಹಿಂದೂ ವಿರೋಧಿ ಮನಸ್ಥಿತಿಗೆ ಕುಮ್ಮಕ್ಕು ನೀಡಲಾಗುತ್ತಿದೆ. ಚಾಮುಂಡಿ ಬೆಟ್ಟದ ವಿರೋಧ ಇರುವ ಮನಸ್ಥಿತಿಗೆ ದೇವರು ಪಾಠ ಕಲಿಸುತ್ತಾನೆ ಎಂದು ಹೇಳಿದ್ದಾರೆ.











